ಬಾಸ್ ಅಂದವರಿಗೆ ನೇರ ಉತ್ತರ ಕೊಟ್ಟ ಗಣೇಶ್; ಆತನನ್ನು ನನ್ನ ಮುಂದೆ ಬಾಸ್ ಅನ್ನ ಬೇಡಿ
Aug 23, 2024, 11:09 IST
ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ಸಿನಿಮಾಗಳು ಬರ್ತಿಲ್ಲ. ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ ಅಂತ ಮಾತುಗಳು ಕೇಳಿ ಬಂದಿತ್ತು. ಈ ಸಮಯದಲ್ಲೇ ಮತ್ತೆ ಜನರನ್ನು ಚಿತ್ರಮಂದಿರಕ್ಕೆ ಕರೆತಂದ ಕೀರ್ತಿ ಕನ್ನಡ ಈ 2 ಸಿನಿಮಾಗಳಿಗೆ ಸಲ್ಲುತ್ತೆ ಅಂದ್ರೆ ತಪ್ಪಾಗಲ್ಲ.ಹೌದು, ಭೀಮ ಹಾಗೂ ಕೃಷ್ಣ ಪ್ರಣಯ ಸಖಿ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
ಅದರಲ್ಲೂ ಜನ ಚಿತ್ರಮಂದಿರಗಳಿಗೆ ಸಾಗೋರೋಪಾದಿಯಲ್ಲಿ ಬರ್ತಿದ್ದಾರೆ. ಇದು ನಿಜಕ್ಕೂ ಸ್ಯಾಂಡಲ್‌ವುಡ್‌ಗೆ ಒಳ್ಳೆ ಸುದ್ದಿ.ಕೃಷ್ಣ ಪ್ರಣಯ ಸಖಿ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದರಲ್ಲೂ ಮಹಿಳಾ ಮಣಿಗಳು ಗಣೇಶ್ ಸಿನಿಮಾ ನೋಡೋದಕ್ಕೆ ಚಿತ್ರಮಂದಿರಗಳಿಗೆ ಬರ್ತಿದ್ದಾರೆ. ಗಣೇಶ್ ಸಿನಿಮಾ ಮತ್ತೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ.
ಇದೆಲ್ಲದರ ಅಭಿಮಾನಿಗಳು ಪ್ರೀತಿಯಿಂದ ತಮ್ಮ ನೆಚ್ಚಿನ ನಟರಿಗೆ ತಮ್ಮಿಷ್ಟ ಬಂದಂತೆ ಕರೀತಾರೆ. ಕೆಲವರು ಅಣ್ಣಾ ಅಂತಾರೆ. ಇನ್ನೂ ಕೆಲವರು ಬಾಸ್ ಅಂತಾರೆ. ಆದ್ರೆ ಸ್ಯಾಂಡಲ್‌ವುಡ್ ಸ್ಟಾರ್ ನಟ ತಮ್ಮನ್ನು ಬಾಸ್ ಅಂತ ಕರೀಬೇಡಿ ಅಂತ ಫ್ಯಾನ್ಸ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಹೌದು ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ. ದಯವಿಟ್ಟು ನನ್ನನ್ನು ಜಿ ಬಾಸ್ ಅಂತೆಲ್ಲಾ ಕರೆಯಬೇಡಿ. ಪ್ರೀತಿಯಿಂದ ಗೋಲ್ಡನ್ ಸ್ಟಾರ್ ಅಂತ ಕೊಟ್ಟಿದ್ದೀರಾ ಅಷ್ಟೇ ಸಾಕು ನನಗೆ ಎಂದಿದ್ದಾರೆ ಗಣೇಶ್.ಕೃಷ್ಣ ಪ್ರಣಯ ಸಖಿ ಸಿನಿಮಾ ನೋಡಲು ಹೋದಾಗ ಚಿತ್ರಮಂದಿರದ ಬಳಿ ಅಭಿಮಾನಿಗಳು ಜಿ ಬಾಸ್ ಅಂತ ಕೂಗಿರೋದು ಗಣೇಶ್ ಅವರ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಗಣೇಶ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
<a href=https://youtube.com/embed/QM15i5EWWFE?autoplay=1&mute=1><img src=https://img.youtube.com/vi/QM15i5EWWFE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕೃಷ್ಣಂ ಪ್ರಣಯ ಸಖಿ ಚಿತ್ರ ಮೊನ್ನೆ ಆಗಸ್ಟ್-15 ರಂದು ರಿಲೀಸ್ ಆಗಿದೆ. 300ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ ಆಗಿದೆ. ಹಾಗೆ ಮೊದಲ ದಿನವೇ ಒಳ್ಳೆ ಓಪನಿಂಗ್ ಕೂಡ ಪಡೆದುಕೊಂಡಿದೆ. ಮೊದಲ ದಿನವೇ ಈ ಚಿತ್ರಕ್ಕೆ 125 ಕೋಟಿ ಕಲೆಕ್ಷನ್ ಆಗಿದೆ ಅನ್ನೋ ಸುದ್ದಿನೂ ಇದೆ.ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಜೀವನದಲ್ಲಿ ಸಕ್ಸಸ್ ಕಂಡು ಹೆಚ್ಚು ಕಡಿಮೆ ಹಲವು ವರ್ಷಗಳೆ ಆಗಿವೆ.
ಅವರೇ ಹೇಳೂವಂತೆ ಕಳೆದ 10 ವರ್ಷಗಳಿಂದ ಥಿಯೇಟರ್ ವಿಜಿಟ್ ಕೂಡ ಮಾಡಿಲ್ಲ ನೋಡಿ. ಆದರೆ, ಕೃಷ್ಣಂ ಪ್ರಣಯ ಸಖಿ ಚಿತ್ರದ ಒಳ್ಳೆ ಓಪನಿಂಗ್ ಮತ್ತು ರೆಸ್ಪಾನ್ಸ್ ನೋಡಿಯೇ ನರ್ತಕಿ ಥಿಯೇಟರ್‌ಗೂ ಬಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkanrunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.