ಗೋವಾಗೆ ಹೋಗಿ ದಪ್ಪವಾದ ಸೋನು; ಅಂತಹದ್ದು ಏನು ತಿಂದ್ರು ಎಂದ ನೆಟ್ಟಿಗರು
Aug 19, 2024, 08:02 IST
ಒಂದಷ್ಟು ವಿವಾದಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿ, ಪ್ರಭಾವಿಯಾದವರ ಪೈಕಿ ಸೋನು ಶ್ರೀನಿವಾಸ್ ಗೌಡ ಅವರೂ ಒಬ್ಬರು. ಇತ್ತೀಚಿನ ದಿನಗಳಲ್ಲಿ ಪುಟಾಣಿ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡು, ಆ ಬಾಲಕಿಯ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲೂ ಪೋಸ್ಟ್ ಮಾಡಿ, ಜೈಲು ಸೇರಿದ್ದರು ಸೋನು.
ಅಷ್ಟೇ ಅಲ್ಲ ಅದಕ್ಕೂ ಮೊದಲು ಬಿಗ್ ಬಾಸ್ ಕನ್ನಡದ ಮೊದಲ ಒಟಿಟಿ ಶೋಗೂ ತೆರಳಿ ತಮ್ಮ ನೇಮು ಫೇಮು ಹೆಚ್ಚಿಸಿಕೊಂಡಿದ್ದರು.ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಸೋನು, ಪಾಸಿಟಿವ್ ವಿಚಾರಕ್ಕಿಂತ ನೆಗೆಟಿವ್ ವಿಚಾರಕ್ಕೇ ಸದ್ದು ಮಾಡುತ್ತಿರುತ್ತಾರೆ. ಇದೀಗ ಇದೇ ಸೋನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರಾ? ಹೀಗೊಂದು ಅನುಮಾನ ಇದೀಗ ಎಲ್ಲರಲ್ಲೂ ಮೂಡಿದೆ.
ಅದಕ್ಕೆ ಪುಷ್ಠಿ ನೀಡುವಂತೆ, ಯುವಕನೊಂದಿಗಿನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಸೋನು ಶ್ರೀನಿವಾಸ್ ಗೌಡ. ಹೀಗೆ ಫೋಟೋಗಳನ್ನು ಶೇರ್ ಮಾಡಿದ್ದೇ ತಡ, ತರಹೇವಾರಿ ಕಾಮೆಂಟ್‌ಗಳು ಹರಿದುಬಂದಿವೆ. ಇನ್ನು ಗಣೇಶ್ ಅಭಿನಯದ ಹೊಸ ಸಿನಿಮಾಗೆ ಕೂಡ ಸೋನು ಶ್ರೀನಿವಾಸ್ ಥಿಯೇಟರ್ ಬಂದು ಹೋಗಿದ್ದಾರೆ.
ಇನ್ನು ವಿವಾದಗಳಿಂದಲೇ ಹೆಸರುವಾಸಿ ಆಗಿರೋ ಇವರು ಕೆಲ ದಿನಗಳ ಹಿಂದಷ್ಟೇ ತಮ್ಮ 24ನೇ ವರ್ಷದ ಜನ್ಮದಿನದ ಆಚರಿಸಿಕೊಂಡಿದ್ದಾರೆ ಬರ್ತ್‌ಡೇ ಪ್ರಯುಕ್ತ ಸೋನು ಶ್ರೀನಿವಾಸ್ ಗೌಡ ತಮ್ಮ ಮನೆದೇವರು ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಸರಳವಾಗಿ ಜನುಮದಿನ ಆಚರಿಸಿಕೊಂಡ ಸೋನು ಶ್ರೀನಿವಾಸ್ ಗೌಡ ತಮ್ಮ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.