ಕರ್ನಾಟಕದಲ್ಲಿ ಗೋಬಿ ಮಂಚೂರಿ ಬ್ಯಾನ್; ಇದನ್ನು ತಿಂದವರಿಗೆ ಕ್ಯಾನ್ಸರ್ ಖಚಿತ

 

ಸಂಜೆ ಆದ್ರೆ ಸಾಕು ಚಪ್ಪರಿಸಿ ತಿನ್ನುವ ಹಲವರ ಪ್ರಿಯವಾದ ಗೋಬಿ ಮಂಚೂರಿ ಇನ್ಮುಂದೆ ಸಿಗೋದೇ ಡೌಟ್.ಕೆಲ ದಿನಗಳಿಂದ ಚರ್ಚೆಯ ವಿಷಯವಾಗಿದ್ದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಖಾದ್ಯ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಸೋಮವಾರ ನಿರ್ಧಾರ ಪ್ರಕಟಿಸಿದೆ. ಕಲರ್ ಕಾಟನ್ ಕ್ಯಾಂಡಿಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಲಾಗಿದ್ದು, ಗೋಬಿ ಮಂಚೂರಿಯಲ್ಲೂ ಕೃತಕ ಬಣ್ಣ ಬಳಸುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಪ್ರಸಿದ್ಧ ಖಾದ್ಯ ಗೋಬಿ ಮಂಚೂರಿಯು ಸಸ್ಯಹಾರಿ ಪದಾರ್ಥವಾದ ಕಾರಣ ಅದನ್ನು ಬ್ಯಾನ್ ಮಾಡಲಾಗದು. ಆದರೆ ಅದಕ್ಕೆ ಕೃತಕ ಬಣ್ಣ ಬಳಸುವಂತಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯದಲ್ಲಿ 171 ಗೋಬಿ ಮಂಚೂರಿಯನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅದರಲ್ಲಿ 107 ಸ್ಯಾಂಪಲ್ ನಲ್ಲಿ ಕೃತಕ ಬಣ್ಣ ಪತ್ತೆಯಾಗಿದೆ. ಗೋಬಿ ಮಂಚೂರಿಯನ್ ನಲ್ಲಿ ಟಾರ್ ಟ್ರಾಸೈನ್, ಸಮ್ ಸೆಟ್ ಯೆಲ್ಲೋ ಮತ್ತು ಕಾರ್ಮಿಸನ್ ಬಳಕೆ ಮಾಡಲಾಗಿದೆ ಎಂದರು. <a href=https://youtube.com/embed/MjOzd4720F8?autoplay=1&mute=1><img src=https://img.youtube.com/vi/MjOzd4720F8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಗೋಬಿ ಮಂಚೂರಿಯನ್ನು ನಿಷೇಧಿಸುತ್ತಿಲ್ಲ. ಆದರೆ ಕೃತಕ ಬಣ್ಣ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಕೃತಕ ಬಣ್ಣ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಸದಂತೆ ಆದೇಶ ಹೊರಡಿಸಲಾಗಿದೆ. ಆದೇಶ ಉಲ್ಲಂಘನೆ ಮಾಡಿದರೆ 7 ವರ್ಷ ದಿಂದ ಜೀವಾವಧಿ ಶಿಕ್ಷೆ ನೀಡಬಹುದು. ಕಲರ್ ಕಾಟನ್ ಕಾಂಡಿ ರಾಜ್ಯದಲ್ಲಿ ಬ್ಯಾನ್ ಮಾಡ್ತಿದ್ದೇವೆ. ವೈಟ್ ಕಾಟನ್ ಕ್ಯಾಂಡಿ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.

ಹೊರಗಿನ ಫುಡ್ ನಿಂದ ಹೆಚ್ಚಾಗುತ್ತಿದೆ ಕ್ಯಾನ್ಸರ್ ಹಾಗೂ ಅಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದೆ. ಬೀದಿಗಳಲ್ಲಿ ಹಾಗೂ ರೆಸ್ಟೋರಂಟ್ ನಲ್ಲಿ ತಿನ್ನಿತ್ತಿರೋದು ಹೆಚ್ಚಳಕ್ಕೆ ಕಾರಣ ಅಂತ ಹೇಳಬಹುದು. ಆದರೆ ಯಾವ ರೀತಿ ಆಹಾರ ಸೇವನೆ ಮಾಡ್ತಿವಿ ಅದರ ಮೇಲೆ ದುಷ್ಪರಿಣಾಮ ಎನ್ನುವುದು ಗೊತ್ತಿದೆ. ಮಾಲಿನ್ಯಕಾರಕ ಕೆಮಿಕಲ್ಸ್ ಉಪಯೋಗದಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದಲೇ ಈ ಬಗ್ಗೆ ಎಲ್ಲಾ ಕಡೆ ಸರ್ವೆ ಮಾಡಿಸಿ, ಪರೀಕ್ಷೆಗೆ ನೀಡಿ ವರದಿ ಪಡೆದು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.