ಆ ಒಂದು ಖಾಯಿಲೆಗೆ ಭಯಪಟ್ಟು ಆತ್ಮಾಹ ತ್ಯೆ ಮಾಡಿಕೊಂಡ ಗುರುಪ್ರಸಾದ್

 
 ಕನ್ನಡ ಚಿತ್ರರಂಗಕ್ಕೆ ಹಿಟ್‌ ಸಿನಿಮಾಗಳನ್ನು ನೀಡಿದ ​ಸ್ಟಾರ್ ನಿರ್ದೇಶಕ ಗುರು ಪ್ರಸಾದ್ ಸಾವಿಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್​ಮೆಂಟ್​ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿರ್ದೇಶಕ ಗುರು ಪ್ರಸಾದ್ ದೇಹ ಪತ್ತೆ ಆಗಿದ್ದು, ಅಂತ್ಯಸಂಸ್ಕಾರ ಕೂಡ ನೆರವೇರಿದೆ. ನಿರ್ದೇಶಕ ಗುರು ಪ್ರಸಾದ್ ಸಾವಿನ ಬಗ್ಗೆ ಅನೇಕ ಊಹಾಪೋಹಗಳಿದ್ದವು.
ಹೌದು,ಆ ಒಂದು ಕಾಯಿಲೆಗೆ ಹೆದರಿ ಅವರು ಜೀವ ಕಳೆದುಕೊಂಡರು ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ.ಈ ಬಗ್ಗೆ ನಿರ್ದೇಶಕ ಗುರು ಪ್ರಸಾದ್ ಆಪ್ತೆ ಚೈತ್ರಾ ಕೊಟ್ಟೂರು ಮಾತನಾಡಿದ್ದಾರೆ. 'ಗುರು ಪ್ರಸಾದ್ ಅವರು ಡಿಪ್ರೆಷನ್‌ನಲ್ಲಿ ಇದ್ದರು. ಅವರು ಡಿಪ್ರೆಷನ್‌ಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಡಾಕ್ಟರ್‌ ಹತ್ತಿರ ಸಲಹೆ ಪಡೆದುಕೊಂಡೇ ತೆಗೆದುಕೊಳ್ಳುತ್ತಿದ್ದರು. ಸುಮಾರು ಮೂರು-ನಾಲ್ಕು ವರ್ಷದಿಂದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದರು. <a href=https://youtube.com/embed/yH30JnheM9s?autoplay=1&mute=1><img src=https://img.youtube.com/vi/yH30JnheM9s/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಡಿಪ್ರೆಷನ್‌ ಜೊತೆಗೆ ಗುರು ಪ್ರಸಾದ್ ಅವರಿಗೆ ಸೋರಿಯಾಸಿಸ್‌ ಇತ್ತು. ದೇಹದಿಂದ ತುಂಬಾ ರಕ್ತ ಎಲ್ಲಾ ಬರುತ್ತಿತ್ತು. ಚರ್ಮ ಎದ್ದೇಳುತ್ತಿತ್ತು. ತಲೆ ಹಾಗೂ ದೇಹದ ಇತರ ಭಾಗಗಳಲ್ಲಿ ಪಿಂಪಲ್ಸ್ ತರ ಆಗಿ ಚರ್ಮಗಳು ಕಿತ್ತು ಹೋಗುತ್ತಿತ್ತು. ಸಿಕ್ಕಾಪಟ್ಟೆ ಆಗಿತ್ತದ್ದು, ಗುರು ಪ್ರಸಾದ್ ಅವರಿಗೆ ಸೋರಿಯಾಸಿಸ್‌ ಗಂಭೀರವಾಗಿಯೇ ಇತ್ತು ಎಂದು ಚೈತ್ರಾ ಕೊಟ್ಟೂರು ಹೇಳಿದ್ದಾರೆ.
ಡಿಪ್ರೆಷನ್‌, ಸೋರಿಯಾಸಿಸ್‌ ಬಿಟ್ಟರೆ ಬೇರೆ ಕಾಯಿಲೆ ಏನೂ ಇರಲಿಲ್ಲ. ಅಂತಹದ್ದೇನೋ, ತೀರಾ ಬೇಡವಾಗಿದ್ದೇನೋ ಕಾಯಿಲೆ ಅವರಿಗೆ ಇರಲಿಲ್ಲ. ಜನರಿಗೆ ಅದರ ಬಗ್ಗೆ ಕೂಡ ಅನುಮಾನ ಇರುತ್ತದೆ. ಎಲ್ಲೋ ಮಾರಣಾಂತಿಕ ಕಾಯಿಲೆ ಬಂದು ಎಲ್ಲಿ ಜನರಿಗೆ ಗೊತ್ತಾದರೆ ನನ್ನ ಮಾನ ಹೋಗುತ್ತದೆ ಅಂತಾ ಮೊದಲೇ ಸತ್ತು ಹೋಗಿ ಬಿಟ್ರಾ ಎನ್ನುವ ಅನುಮಾನ ಕೆಲವರಿಗಿರುತ್ತದೆ.
ನನ್ನ ಪ್ರಕಾರ ಅವರು ಅಷ್ಟು ಚೀಪ್‌ ಅಲ್ಲ. ಎಲ್ಲೆಲ್ಲೋ ಹೋಗಿ ಏನೋ ಮಾಡಿ ಏನನ್ನೋ ಬರಿಸಿಕೊಳ್ಳುವ ಮನುಷ್ಯ ಅವರಲ್ಲ. ಸಾಲ ಇರಬಹುದು ಬೇರೆ ಇರಬಹುದು ಆದರೆ ಬದುಕಿರುವ ತನಕ ತನ್ನ ಮಟ್ಟಿಗೆ ಸ್ಟಾಂಡರ್ಡ್‌ ಆಗಿಯೇ ಬದುಕಿದವರು ಅವರು. ಅವರಿಗೆ ವಿದ್ಯೆ ಇತ್ತು. ಪುಸ್ತಕಗಳನ್ನು ಓದುತ್ತಿದ್ದರು. ತುಂಬಾ ತಿಳಿದುಕೊಂಡಿದ್ದರು. ಅಂತವರು ತೀರಾ ಆ ಮಟ್ಟಕ್ಕೆ ಹೋಗಲ್ಲ ಎಂದು ಗುರು ಪ್ರಸಾದ್ ಅವರಿಗೆ ಡಿಪ್ರೆಷನ್‌, ಸೋರಿಯಾಸಿಸ್‌ ಬಿಟ್ಟರೆ ಬೇರೆ ಕಾಯಿಲೆ ಏನೂ ಇರಲಿಲ್ಲ ಎನ್ನುವುದನ್ನು ಗ್ಯಾರಂಟಿ ನ್ಯೂಸ್‌ ಜೊತೆ ಮಾತನಾಡುತ್ತಾ ಚೈತ್ರಾ ಕೊಟ್ಟೂರು ಸ್ಪಷ್ಟಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.