ಮದುವೆಗೆ ಅವಸರ ಪಡುವ ಯುವಕರಿಗೆ ಇರಲಿ‌ ತಾಳ್ಮೆ; ಮೊದಲ ರಾತ್ರಿ ನ ಡೆಯೋದೆ ಬೇ ರೆ

 
ಬಹ
ಅದೊಂದು ಖತರ್ನಾಕ್​ ಗ್ಯಾಂಗ್​​​. ಮದುವೆಯೇ ಅವರ ಬ್ಯುಸಿನೆಸ್​​​.. ರಾತ್ರೋ ರಾತ್ರಿ ಬರ್ತಾರೆ. ಒಂದೇ ದಿನದಲ್ಲಿ ಮದುವೆ ಮುಗಿಸುತ್ತಾರೆ. ಮರುದಿನವೇ ಶಾಸ್ತ್ರ ಅಂತ ಆಭರಣಗಳನ್ನ ಹಾಕೊಂಡೇ ಎಸ್ಕೇಪ್​​ ಆಗ್ತಾರೆ.ಯಸ್​​. ಮದುವೆ ಅನ್ನೋದು ಪ್ರತಿಯೊಬ್ಬರ ಬಾಳಲ್ಲೂ ಒಂದು ಮಹತ್ವದ ಘಟ್ಟ. ಆದ್ರೆ ಇದೇ ಮದುವೆಯನ್ನ ಬ್ಯುಸಿನೆಸ್​ ಮಾಡಿಕೊಂಡ ಅದೊಂದು ಗ್ಯಾಂಗ್​​ ಬರೊಬ್ಬರಿ 5 ಲಕ್ಷದ ವರೆಗೆ ಮಕ್ಮಲ್​ ಟೋಪಿ ಹಾಕಿದೆ.
 ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದ ನಿವಾಸಿ ಪಾಲಾಕ್ಷಯ್ಯ. ವಯಸ್ಸು 55 ವರ್ಷ, ಗ್ರಾಮದಲ್ಲಿ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸುಖಿ ಕುಟುಂಬ ಇವರದ್ದು. ಇನ್ನೂ ಈ ಪಾಲಾಕ್ಷಯ್ಯಗೆ ದಯಾನಂದ್ ಮೂರ್ತಿ ಎಂಬ ಒಬ್ಬ ಗಂಡು ಮಗ, ತನುಜಾ ಎಂಬ ಹಿರಿಯ ಮಗಳಿದ್ದು, ಪಾಲಾಕ್ಷ್ಯನದ್ದು ಚಿಕ್ಕದಾದ ಒಂದು ಸುಂದರ ಕುಟುಂಬ. ಮಗಳು ತನುಜಾಳನ್ನ ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ ಗ್ರಾಮದ ನಿವಾಸಿ ಕುಮಾರ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಯ್ತು. ಇತ್ತ ಮಗಳ ಮದುವೆ ಮುಗಿಸಿದ ಪಾಲಾಕ್ಷಯ್ಯ ನೆಮ್ಮದಿಯ ನಿಟ್ಟೂಸಿರು ಬಿಟ್ಟು, ಮಗನಿಗೆ ಮದುವೆ ಮಾಡಲು ಮುಂದಾದ್ರೂ. ಅಲ್ಲಿಂದಲೇ ನೋಡಿ ಶುರುವಾಗಿದ್ದು ಪಾಲಾಕ್ಷಯ್ಯ ಕುಟುಂಬದ ನೋವಿನ ದಿನಗಳು.
ಮಗನಿಗೆ ಹೆಣ್ಣು ಹುಡುಕಿ ಹುಡುಕಿ  ನೊಂದು ಬೆಂದು ಹೋಗಿದ್ದ ಪಾಲಾಕ್ಷಯ್ಯ ಕುಟುಂಬಕ್ಕೆ ಯಾವುದಾದ್ರೂ ಒಂದು ಹೆಣ್ಣು ಮಗಳು ಸಿಕ್ಕರೇ ಸಾಕು, ಎಷ್ಟು ವರ್ಷ ವಯಸ್ಸಾದ್ರೂ ಪರವಾಗಿಲ್ಲ, ಮಗನ ಮದುವೆಯಾದ್ರೆ ಸಾಕು ಅನ್ನುವಂತಾಗಿತ್ತು. ಪರಿಸ್ಥಿತಿ ಹೀಗಿರುವಾಗಲೇ. ಕುಷ್ಟಗಿ ಮೂಲದ ಬಸವರಾಜು ಮೂಲಕ  ಹುಬ್ಬಳ್ಳಿಯ ಇಂದ್ರಪ್ರಸ್ತ ನಗರದಲ್ಲಿ ವಾಸವಿದ್ದ ಮದುವೆ ಬ್ರೋಕರ್‌ ಲಕ್ಷ್ಮೀಯ ಕಾಂಟ್ಯಾಕ್ಟ್​​​ ಸಿಗುತ್ತೆ.
ಮಾತುಕತೆಯಂತೆ ಮರುದಿನ ಅಂದ್ರೆ ನವೆಂಬರ್​​ 20 ರಂದೇ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಮುಂಜಾನೇಯ ಮದುವೆ ಕಾರ್ಯ ನಡೆಯುತ್ತೆ.  ಹೆಣ್ಣಿಗೆ ಚಿನ್ನದ ತಾಳಿ, ಓಲೆ, ಸೇರಿದ್ದಂತೆ 15 ಗ್ರಾಂ ಚಿನ್ನಾಭರಣವನ್ನು ಪಾಲಾಕ್ಷಯ್ಯ ಕುಟುಂಬ ನೀಡುತ್ತೆ. ಜೊತೆಗೆ ಊರಿನ ಗ್ರಾಮದ ಜನರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದಾರೆ. ಮದುವೆ 200ಕ್ಕೂ ಹೆಚ್ಚು ಜನರು ಸೇರಿದ್ದಾರೆ. ಕೊನೆಗೂ ದಯಾನಂದ ಮೂರ್ತಿಗೆ ಮದುವೆ ಆಯ್ತು ಅಂತ ಎಲ್ಲಾರು ಸಂತಸ ಪಡ್ತಾರೆ.
ರಾತ್ರಿ ಮಾತುಕತೆ ಬೆಳಗ್ಗೆ ಮದುವೆ..ಕೊನೆಗೂ ದಯಾನಂದn ಮದುವೆ ಮುಗೀತು.. ಎಲ್ಲರೂ ಮನೆ ಮಗನಿಗೆ ಮದುವೆ ಆಯ್ತು ಅಂತ ಫುಲ್​ ಖುಷಿಯಾಗಿರ್ತಾರೆ.. ಆದರೆ ಆ ಖುಷಿ ಹೆಚ್ಚು ದಿನ ಇರೋದಿಲ್ಲ.. ಕಾರಣ ಆ ಬ್ರೋಕರ್​​ ಲಕ್ಷ್ಮೀಯ ಅಸಲಿಯಾಟ ಶುರುವಾಗೋದೇ ಮದುವೆ ನಂತರ
ಅಂದುಕೊಂಡಂತೆ ಪಾಲಾಕ್ಷಯ ಮಗನ ಮದುವೆ ಮಾಡಿ ಮುಗಿಸಿದ್ರು.. ಮದುವೆ ಖರ್ಚು ಎಲ್ಲಾ ಗಂಡಿನ ಕಡೆಯವರದ್ದೇ ಆದ್ರೂ ಶಾಸ್ತ್ರವೆಲ್ಲಾ ಬ್ರೋಕರ್​ ಲಕ್ಷ್ಮೀ ಹೇಳಿದಂತೆಯೇ ನಡೆಯುತ್ತಿತ್ತು..
ಮದುವೆಯಾದ ಮೇಲೂ ಫಸ್ಟ್​​ ನೈಟ್​​ ಶಾಸ್ತ್ರಕ್ಕೂ ಮುನ್ನ ಒಂದು ಶಾಸ್ತ್ರವಿದೆ ಅಂತ ಹೇಳಿ ವಧುವನ್ನು ಕರೆದುಕೊಂಡು ಊರಿಗೆ ಹೋಗಿ ಬರ್ತೀವಿ ಅಂತ ಹೋದ್ರು. ಅಷ್ಟೇ.. ಮತ್ತೆ ಬ್ರೋಕರ್​​ ಲಕ್ಷ್ಮಿಯದ್ದಾಗಲಿ, ವಧು ಕುಟುಂಬದ ಸುಳಿವು ಸಿಗೋದೆ ಇಲ್ಲ. ಎಲ್ಲಿ ಹುಡುಕಾಡಿದ್ರೂ ಅವರ ಸುಳಿವು ಸಿಗೋದೇ ಇಲ್ಲ. ಮದುವೆಗೆ ಹಾಕಿದ್ದ ಒಡವೆಗಳನ್ನ ಹಾಕೊಂಡು ಅವರು ಎಸ್ಕೇಪ್​ ಆಗಿದ್ರು. ಇನ್ನೂ ಬೇರೆ ದಾರಿ ಕಾಣದೆ ಪೊಲೀಸ್​​ ಕಂಪ್ಲೆಂಟ್​​ ಕೊಡ್ತಾರೆ.. ಆಗಲೇ ನೋಡಿ ಈ ಗ್ಯಾಂಗ್​ ಮದುವೆಯನ್ನೇ ಬ್ಯುಸಿನೆಸ್​​ ಮಾಡಿಕೊಂಡಿತ್ತು ಅಂತ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.