ಅವನು ಬಂದು ಎದೆ ಮುಟ್ಟಿದ್ರು ನಾನು ಸುಮ್ನೆ ಇರ್ಬೇಕಾ, ರೊಚ್ಚಿಗೆದ್ದ ಸಾನಿಯಾ ಅಯ್ಯರ್;

 

ನಟಿ ಸಾನಿಯಾ ಅಯ್ಯರ್ ರವರು ಮೊನ್ನೆಯಷ್ಟೆ ದಕ್ಷಿಣ ಕನ್ನಡದ ಪುತ್ತೂರಿನ ಕಂಬಳ ಕಾರ್ಯಕ್ರಮಕ್ಕೆ ಬಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಸಾನಿಯಾ ಅಯ್ಯರ್ ರವರನ್ನು ಪುತ್ತೂರಿನ ಕಾಂಗ್ರೇಸ್ ಮುಖಂಡರು ಸಿನಿಮಾ ತಾರೆಯರನ್ನು ಕರೆಸಿಕೊಂಡು ಕಂಬಗಳ ಗದ್ದೆಯಲ್ಲಿ‌ ದೊಡ್ಡ ಸದ್ದು ಮಾಡುತ್ತಿದ್ದರು.

ಆದರೆ, ಮೊನ್ನೆಯ ಕಂಬಳ ಗದ್ದೆಯಲ್ಲಿ ಕಲಾವಿದರ ತಂಡದಲ್ಲಿದ್ದ ಸಾನಿಯಾ ಅಯ್ಯರ್ ಹಾಗೂ ಆಕೆಯ ಸ್ನೇಹಿತೆ ಸ್ಟೇಜ್ ಮೇಲೆ ಕಂಬಳ ವೀಕ್ಷಣೆ ಮಾಡುವ ಸಂಧರ್ಭದಲ್ಲಿ ಯುವಕನೊಬ್ಬ ಸಾನಿಯಾ ಅಯ್ಯರ್ ಸ್ನೇಹಿತೆಯ ಮೈ ಕೈ ಮುಟ್ಟಿ ಮಾತಾನಾಡಿಸಿದ್ದಾನೆ. ಇದನ್ನು ಗಮನಿಸಿದ ಸಾನಿಯಾ ಅಯ್ಯರ್ ಸ್ನೇಹಿತೆ ಆ ಯುವಕನ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ. ಜೊತೆಗೆ ಆ ಯುವಕ ಕೂಡ ಸಾನಿಯಾ ಅಯ್ಯರ್ ಸ್ನೇಹಿತೆಗೆ ತಿರುಗಿ ಬಾರಿಸಿದ್ದಾನೆ ಎನ್ನಲಾಗಿದೆ.

ಇದೀಗ ವಿಚಾರ ಇಡೀ ಕರ್ನಾಟಕದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ತುಳುನಾಡಿನಲ್ಲಿ ಜನಪ್ರಿಯವಾಗಿರುವ ಕಂಬಳ ಗದ್ದೆಯಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಆಘಾತ ತಂದಿದೆ ಎನ್ನುತ್ತಾರೆ ತುಳುನಾಡಿನ ಜನರು. ಇದೀಗ ಈ ವಿಚಾರವಾಗಿ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಜೊತೆಗೆ ಸಾನಿಯಾ ಅಯ್ಯರ್ ಕೂಡ ಈ ದೌರ್ಜನ್ಯದ ಬಗ್ಗೆ ಮೀಡಿಯಾ ಮುಂದೆ ಸ್ಪಷ್ಟತೆ ಕೂಡ ಕೊಟ್ಟಿದ್ದಾರೆ.

ಹೆಣ್ಣುಮಕ್ಕಳು ಹೊರಗಿನ ಪ್ರಪಂಚದಲ್ಲಿ ಬೆರೆತಾಗ ಇಂತಹ ದೌರ್ಜನ್ಯ ಹೆಚ್ಚಾಗಿ ಕಂಡುಬರುತ್ತದೆ. ಇತ್ತಿಚೆಗೆ ಕೆಲವೊಂದು ಕಾರ್ಯಕ್ರಮಕ್ಕೆ ಹೋದಾಗ ಎದೆ ಮುಟ್ಟಿ ನೋಡುತ್ತಾರೆ ಎಂದು ಮೀಡಿಯಾ ಮುಂದೆ ಓಪನ್‌ ಹೇಳಿಕೆ ಕೊಟ್ಟಿದ್ದಾರೆ ಸಾನಿಯಾ ಅಯ್ಯರ್. ಇದೀಗ ತುಳುನಾಡಿನ ಕಂಬಳ ಗದ್ದೆಯಲ್ಲಿ ಇಂತಹ ದೌರ್ಜನ್ಯ ನಡೆದಿರುವುದು ಎಲ್ಲಾ ಕಡೆ ಬಾರಿ ವೈರಲ್ ಆಗುತ್ತಿದೆ. ಕಂಬಳ ಎಂಬುವುದು ತುಳುನಾಡಿನ ನೆಚ್ಚಿನ ಸಂಸ್ಕ್ರತಿ. 

ಈ ಕಂಬಳ ಗದ್ದೆಗೆ ಕೋಟ್ಯಾಂತರ ಜನರು ಬರುತ್ತಾರೆ. ಇಂತಹ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ದೌರ್ಜನ್ಯ ನಡೆದಾಗ ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಬೇಕು ಎಂಬುವುದು ಕನ್ನಡಿಗರ ಆಶಯ.
(ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.