ಮೈಪೂರ್ತಿ ಪಟಾಕಿ, ಕೈಯಲ್ಲಿ ದೀಪ ಕೊನೆಯಲ್ಲಿ ಎದ್ದುಬಿದ್ದು ಕೆರೆಗೆ ಹಾರಿಬಿಟ್ಟ
Nov 3, 2024, 14:47 IST
ಫೇಮಸ್ ಆಗೋಕೆ ಜನ ಏನ್ ಬೇಕಾದ್ರೂ ಮಾಡ್ತಾರೆ. ಹೌದು ಮೊದಲೆಲ್ಲಾ ಹೀಗಿರಲಿಲ್ಲ. ಅದ್ಯಾವಾಗ ಟಿಕ್ ಟಾಕ್, ಇನ್ಟಾಗ್ರಾಂ ಮುಂತಾದ ಪ್ಲಾಟ್ ಫಾರ್ಮ್ ಬಂತೋ ಆಗಿಂದ ಜನರಿಗೆ ಫೇಮಸ್ ಆಗುವ ಶೋಕಿ ಉಂಟಾಯಿತು.ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಒಂದು ಸಖತ್ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಯುವಕ ಉರ್ಫಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಟ್ಟೆ ಬಿಟ್ಟು ಪಟಾಕಿಯಿಂದ ಅಲಂಕಾರ ಮಾಡಿಕೊಂಡಿದ್ದಾನೆ. ಪಟಾಕಿಗಳನ್ನ ಆಭರಣಗಳನ್ನಾಡಿ ಮಾಡಿಕೊಂಡು ಧರಿಸಿದ್ದಕ್ಕೆ ಈತ ವೈರಲ್ ಆಗಿಲ್ಲ.ಕೈಯಲ್ಲಿ ದೀಪ ಹಿಡ್ಕೊಂಡು ಡಾನ್ಸ್ ಮಾಡಿದ್ದ.ವೈರಲ್ ವೀಡಿಯೊದಲ್ಲಿ, ಯುವಕನೊಬ್ಬ ಬಿಳಿ ಹೊಳೆಯುವ ಲೆಹೆಂಗಾ-ಚೋಲಿಯನ್ನು ಧರಿಸಿದ್ದಾನೆ.
https://www.instagram.com/reel/DBqZVknpH_8/?igsh=MWEzaWM2eWFzMHF1aw==
ಪಟಾಕಿಯ ಮಾಲೆ, ಲಕ್ಷ್ಮಿ ಬಾಂಬ್, ಭೂ ಚಕ್ರ ಕಿವಿಯೋಲೆ, ಬಾಂಬುಗಳ ಹಾರ ಮುಂತಾದ ಪಟಾಕಿ ಆಭರಣಗಳನ್ನು ಧರಿಸುತ್ತಿದ್ದಾನೆ. ಇದಲ್ಲದೆ, ಕೈಯಲ್ಲಿ ಬೆಳಗಿದ ದೀಪವನ್ನು ಸಹ ಹಿಡಿದಿದ್ದನು. ಸಜ್ನಾ ಮೇರಾ ಆಜ್ ಪಗ್ಲಾಯಾ ಹೈ ಹಾಡಿಗೆ ಡಾನ್ಸ್ ಮಾಡಿದ್ದಾನೆ.ಇನ್ನು ಈ ವಿಡಿಯೋ ನೋಡಿದ ಕೆಲವು ನೆಟ್ಟಿಗರು, ಸ್ವಲ್ಪ ಎಚ್ಚರ ತಪ್ಪಿದರೂ ಗಂಭೀರ ಅಪಾಯಕ್ಕೆ ಸಿಲುಕುವ ಸಂಭವವಿದೆ.
ಈ ರೀತಿ ಹುಚ್ಚು ಹುಚ್ಚಾಗಿ ಏನೂ ಮಾಡಬೇಡಿ. ಪಟಾಕಿಯ ಬಳಿ ಉರಿಯುವ ದೀಪವನ್ನು ಹಿಡಿಯುವುದು ಅಪಾಯಕಾರಿ ಅಂತ ಬುದ್ದಿವಾದ ಹೇಳಿದ್ದಾರೆ.ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯುವಕನನ್ನು ಕಂಟೆಂಟ್ ಕ್ರಿಯೇಟರ್ ರವಿಸಾಗರ್ ಎಂದು ಗುರುತಿಸಲಾಗಿದೆ. ಏಳು ದಿನಗಳ ಹಿಂದೆ @ravisagar88 ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಇದುವರೆಗೆ 35 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.