ಆತ ನನ್ನನ್ನು ಗರ್ಭಿಣಿ ಮಾಡಿ ಕೈಬಿಟ್ಟ, ನನ್ನ ಮಗಳಿಗೆ ಇದುವರೆಗೂ ಅಪ್ಪ ಯಾರ ಅಂತ ಗೊತ್ತಿಲ್ಲ; ವಾಣಿಶ್ರೀ
Jun 21, 2025, 14:17 IST
ನಟಿ ವಾಣಿಶ್ರೀ, ಕನ್ನಡದ ಹಲವು ಧಾರಾವಾಹಿಗಳು ಮತ್ತು ಸಿನಿಮಾದಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದಾರೆ. ವಾಣಿಶ್ರೀ ಅವರು ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದು, ಕಿರುತೆರೆ ವೀಕ್ಷಕರಿಗೆ ಇವರು ಚಿರಪರಿಚಿತರು. ವಾಣಿಶ್ರೀ ಅವರ ಗಂಡ ಯಾರು ಅನ್ನೋ ಕುತೂಹಲ ಹಲವರಿಲ್ಲಿತ್ತು. ಈ ಬಗ್ಗೆ ಮೊದಲ ಬಾರಿಗೆ ವಾಣಿಶ್ರೀ ಮನಬಿಚ್ಚಿ ಮಾತನಾಡಿದ್ದು, ಡಿವೋರ್ಸ್ ಆಗಿದ್ದೇಕೆ ಎಂಬುದನ್ನು ರಿವೀಲ್ ಮಾಡಿದ್ದಾರೆ.
90ರ ದಶಕದಲ್ಲೇ ವಾಣಿಶ್ರೀ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದರು. ದೂರದರ್ಶನದ ಧಾರಾವಾಹಿಗಳಲ್ಲಿ ನಟಿಸಿದ್ದರು. 'ಓಂ' ಚಿತ್ರದಲ್ಲಿ ಶಿವಣ್ಣನ ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ಹೂಮಳೆ', 'ಸ್ವಸ್ತಿಕ್', ಸ್ಪರ್ಶ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಾಣಿಶ್ರೀ ಮಾತನಾಡಿದ್ದಾರೆ. ತಮ್ಮ ಬಣ್ಣದ ಬದುಕು ಹಾಗೂ ವೈಯಕ್ತಿಕ ಜೀವನದ ಬಗ್ಗೆ ವಿವರಿಸಿದ್ದಾರೆ.
<a href=https://youtube.com/embed/Rd16lSPsAiw?autoplay=1&mute=1><img src=https://img.youtube.com/vi/Rd16lSPsAiw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಪೋಷಕರ ನೋಡಿ ಮಾಡಿದ ಮದುವೆ ಜೀವನದಲ್ಲಿ ಸಮಸ್ಯೆ ಎದುರಾದಾಗ ಪತಿಯಿಂದ ದೂರಾಗಿ ಸ್ವತಂತ್ರವಾಗಿ ಮಗಳನ್ನು ಸಾಕಿ ಬೆಳೆಸಿದ್ದಾರೆ. ಈ ವಿಚಾರವನ್ನು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಅದಾಗಲೇ ಒಂದು ಮದುವೆ ಆಗಿದ್ದರೂ ಸುಳ್ಳು ಹೇಳಿ ತಮ್ಮನ್ನು ಆ ವ್ಯಕ್ತಿ ಮದುವೆ ಆಗಿದ್ದರು ಎಂದು ತಿಳಿಸಿದ್ದಾರೆ. ನನ್ನ ಮಗಳಿಗೆ ಈಗ 21 ವರ್ಷ, ಈವರೆಗೆ ಆಕೆಯ ಮುಖವನ್ನು ನನ್ನ ಮಾಜಿ ಪತಿ ನೋಡಿಲ್ಲ ಎಂದು ವಾಣಿಶ್ರೀ ಹೇಳಿದ್ದಾರೆ.
ನಾನು ಕೆಲಸ ಮಾಡಲು ಆರಂಭಿಸಿದ ದಿನದಿಂದಲೂ ಸ್ವತಂತ್ರ ಮಹಿಳೆಯಾಗಿದ್ದೇನೆ. ನಾನು ನನ್ನದೇ ಹಣದಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿದೆ. ನಾನು ಯಾರೊಟ್ಟಿಗೂ ಪ್ರೀತಿಲಿ ಬಿದ್ದಿಲ್ಲ, ಓಡಿ ಹೋಗಲಿಲ್ಲ. ಅಫೇರ್ಸ್ ಇರಲಿಲ್ಲ. ನಾನು ಮದುವೆಯಾಗಿದ್ದ ವ್ಯಕ್ತಿಯಿಂದ ನನಗೆ ಪ್ರೀತಿ, ವಿಶ್ವಾಸ ಸಿಗಲಿಲ್ಲ. ನನಗೆ ಬಹಳ ನೋವಾಗಿತ್ತು. ನಾನು 5 ತಿಂಗಳ ಗರ್ಭಿಣಿ ಆಗಿದ್ದ ಸಮಯ ಅದು. ಆತನ ವಿರುದ್ಧ ನಾನ್ ಬೇಲಬಲ್ ವಾರಂಟ್ ಇತ್ತು. ನಮ್ಮ ಮದುವೆಗಿಂತ 2 ವರ್ಷದ ಹಿಂದೆ ಬೇರೊಬ್ಬಳ ಜೊತೆ ಆ ವ್ಯಕ್ತಿಗೆ ಮದುವೆ ಆಗಿದ್ದ ವಿಷಯ ಗೊತ್ತಾಯಿತು. ಅದೆಲ್ಲ ನನ್ನನ್ನು ಗಟ್ಟಿಗೊಳಿಸಿತು ಅನ್ನಿಸುತ್ತೆ ಎಂದು ವಾಣಿಶ್ರೀ ಹೇಳಿದ್ದಾರೆ.