ದ ರ್ಶನ್ ಫೋಟೋಗೆ ಹಿಂದೂ ಅರ್ಚಕರಿಂದ ಪೂಜೆ; ತಕ್ಷಣ ಅಮಾನತು ಮಾಡಿದ ದೇವಾಲಯದ ಸಂಸ್ಥೆ
Aug 8, 2024, 20:28 IST
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಬಿಡುಗಡೆಗಾಗಿ ಕುಟುಂಬಸ್ಥರು ಶತಪ್ರಯತ್ನ ಮಾಡುತ್ತಿದ್ದರೆ, ಅತ್ತ ಅಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ರಾಜ್ಯದ ಶಕ್ತಿ ಪೀಠಗಳು ಸೇರಿದಂತೆ ವಿವಿಧ ದೇವಾಲಯಗಳಿಗೆ ಪ್ರತಿ ದಿನ ಭೇಟಿ ನೀಡುತ್ತಿದ್ದಾರೆ.
ಜೊತೆಗೆ ದರ್ಶನ್ ಜೈಲಿನಿಂದ ಹೊರಬರಲಿ ಎಂದು ಅಭಿಮಾನಿಗಳು ದೇವರಿಗೆ ಜಪ-ತಪ, ವ್ರತ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಇದೇ ರೀತಿ ಶ್ರಾವಣ ಸೋಮವಾರ ವಿವಿಧೆಡೆ ದರ್ಶನ್ ಬಿಡುಗಡೆಗಾಗಿ ಪೂಜೆಗಳನ್ನು ಮಾಡಲಾಗಿದೆ. ಈ ಪೈಕಿ ಬಳ್ಳಾರಿಯಲ್ಲಿ ದೇವರ ವಿಗ್ರಹದ ಬಳಿ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಲಾಗಿದ್ದು, ಇದೀಗ ಈ ಪೂಜೆ ಅರ್ಚಕರಿಗೆ ಸಂಕಷ್ಟ ತಂದಿಟ್ಟಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದೊಡ್ಡಬಸವೇಶ್ವರ ದೇವರ ಪ್ರಾಣ ಮೂರ್ತಿ ಮುಂದೆ ಅರ್ಚಕರು ನಟ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ. ಡೆವಿಲ್ ಎಂದು ಬರೆದಿರುವ ಪೋಸ್ಟರ್ ಸೇರಿದಂತೆ ದರ್ಶನ್ ವಿವಿಧ ಫೋಟೋಗಳನ್ನು ದೇವರ ಮುಂದೆ ಇಡಲಾಗಿದೆ. ದರ್ಶನ್ ಫೋಟೋದ ಬಳಿಯೂ ಕುಂಕುಮ ಹೂ ಇಟ್ಟು ಪೂಜೆ ಮಾಡಿ ಮಂಗಳಾರತಿ ಎತ್ತಲಾಗಿದೆ.
<a href=https://youtube.com/embed/98DC_5yt3uA?autoplay=1&mute=1><img src=https://img.youtube.com/vi/98DC_5yt3uA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕುರುಗೋಡು ತಾಲೂಕಿನ ದೊಡ್ಡಬಸವೇಶ್ವರ ಅರ್ಚಕ ಮಲ್ಲಿ ಎನ್ನುವವರು ದೇವಸ್ಥಾನದ ಸಂಪ್ರದಾಯಕ್ಕೆ ಧಕ್ಕೆತಂದಿದ್ದಾರೆ. ಅಲ್ಲದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪರವರು ಅರ್ಚಕರನ್ನು ಅಮಾನತು ಮಾಡಿದ್ದು, ವಿಚಾರಣೆ ಮುಗಿಯುವವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದ್ದಾರೆ ಎನ್ನಲಾಗಿದೆ.
ದರ್ಶನ್ ಅಭಿಮಾನಿಗಳು ರಾಜ್ಯದ ಎಲ್ಲೆಡೆ ಪೂಜೆ ಮಾಡಿಸುತ್ತಿದ್ದು, ಈ ಘಟನೆಯಿಂದ ಅಭಿಮಾನಿಗಳು ತಂದು ಕೊಡುವ ಫೋಟೋ ಇಟ್ಟು ಪೂಜೆ ಮಾಡುವ ಅರ್ಚಕರು ಎಚ್ಚೆತ್ತುಕೊಳ್ಳಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.