ಕಾಂತಾರದಲ್ಲಿ ಈ ನಟನ ಅಭಿನಯಕ್ಕೆ ಹಾಲಿವುಡ್ ನಿರ್ಮಾಪಕರು ಕೂಡ ಬೆರಗಾಗಿದ್ದಾರೆ

 

ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆಯಲ್ಲಿದ್ದ ಕಾಂತಾರ ಅಧ್ಯಾಯ 1 ಚಿತ್ರ ನಿನ್ನೆ ಬಿಡುಗಡೆಯಾಗಿ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ಅಭಿನಯ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿರುವಾಗ, ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ ತಮ್ಮ ಹೃದಯದ ಮಾತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕವಾಗಿ ಬರೆಯುತ್ತಾ ರಕ್ಷಿತ್ ಶೆಟ್ಟಿ, ಇಂದು ನಾನು ಕಾಂತಾರ ಸಿನಿಮಾದಲ್ಲಿ ಅಭಿನಯಿಸುವಂತಾದರೆ ಅದರ ಹಿಂದೆ ಇರುವ ಶಕ್ತಿ ನನ್ನ ಅಣ್ಣ ರಿಷಬ್. ಭದ್ರಾವತಿಯ ಹಳ್ಳಿಯಲ್ಲಿ ಮರೆಯಾಗಬೇಕಾಗಿದ್ದ ನನಗೆ ಜನರ ಗುರುತನ್ನು ಕೊಟ್ಟದ್ದು ರಿಷಬ್ ಅಣ್ಣನೇ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. <a style="border: 0px; overflow: hidden" href=https://youtube.com/embed/qE4P9AXR6sQ?autoplay=1&mute=1><img src=https://img.youtube.com/vi/qE4P9AXR6sQ/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಅವರು ಮುಂದುವರೆದು, ಇದು ಓದುವವರಿಗೆ ಹೆಚ್ಚು ಭಾವೋದ್ರೇಕವಾಗಿ ತೋರಬಹುದು, ಆದರೆ ಇದೇ ನಿಜ. ಅಣ್ಣನಿಗೆ ಥ್ಯಾಂಕ್ ಯು ಎನ್ನುವುದು ತುಂಬಾ ಸಣ್ಣ ಪದ. ನನ್ನ ಮುಂದಿನ ಸಿನಿಮಾದ ಪ್ರತಿಯೊಂದು ಹೆಜ್ಜೆಯೂ ಅಣ್ಣ ತೋರಿಸಿದ ದಾರಿಯೇ. ಪ್ರಗತಿ ಅಕ್ಕನಿಗೂ ಸದಾ ಚಿರಋಣಿ ಎಂದು ಹೇಳಿದ್ದಾರೆ.

ಇನ್ನು ಇದೆ ಸಂದರ್ಭದಲ್ಲಿ ಸಿನಿಮಾದ ಬರಹಗಾರರಾದ ಅನಿರುದ್ಧ, ಶನಿಲ್ ಗುರು ಹಾಗೂ ಅರವಿಂದ್ ಅವರಿಗೆ ಸಹ ಧನ್ಯವಾದ ಅರ್ಪಿಸಿ, ನನ್ನ ಪಾತ್ರ ಚೆಂದವಾಗಿ ಮೂಡಿಬಂದದ್ದು ನಿಮ್ಮೆಲ್ಲರ ಕಾರಣ ಎಂದಿದ್ದಾರೆ.ಚಿತ್ರವನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ ರಕ್ಷಿತ್ ಶೆಟ್ಟಿ, ಪ್ಯಾನ್ ಇಂಡಿಯಾ ಮಾತ್ರವಲ್ಲ, ಪ್ಯಾನ್ ವರ್ಲ್ಡ್ ಮಟ್ಟದ ಚಿತ್ರದಲ್ಲಿ ನಟನಾಗಿ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಹೆಮ್ಮೆಯಿಂದ ಹೇಳಿದ್ದಾರೆ.