'ಪ್ರಕಾಶ್ ರಾಜ್ ಮೊದಲ ಪತ್ನಿ ಎಷ್ಟು ಮುದ್ದಾಗಿದ್ದಾರೆ ಗೊ ತ್ತಾ' ದೇವಲೋಕದ ಅಪ್ಸರೆ

 
ಉತನ್ನ ಚಿತ್ರ ವಿಚಿತ್ರ ಹೇಳಿಕೆಗಳಿಂದ ಸುದ್ದಿಯಾಗುವ ನಟ ಅಂದ್ರೆ ಅದು ಪ್ರಕಾಶ್ ರಾಜ್ ಹೌದು ಹಿರಿಯ ನಟ ಪ್ರಕಾಶ್ ರಾಜ್ ಸಿನಿಮಾಗಳ ಜೊತೆಗೆ ವೈಯಕ್ತಿಕ ವಿಚಾರಗಳಿಗೂ ಆಗಾಗ ಸುದ್ದಿ ಆಗ್ತಿದ್ದಾರೆ.  2009ರಲ್ಲಿ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಗೆ ವಿಚ್ಛೇದನ ನೀಡಿದ್ದರು. ಆ ನಂತರ ಪೋನಿ ವರ್ಮಾಳನ್ನು ಮದುವೆಯಾದ್ರು. 
ಇದೀಗ ತಮಿಳಿನ ಸೆಲೆಬ್ರಿಟಿ ಜಯಂತಿ ಕಣ್ಣಪ್ಪನ್ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್ ಮತ್ತು ಮೊದಲ ಪತ್ನಿ ಲಲಿತಾ ಅವರ ವಿಚ್ಛೇದನದ ಬಗ್ಗೆ ಮಾತಾಡಿದ್ದಾರೆ. ಪ್ರಕಾಶ್ ರಾಜ್ ಮತ್ತು ಲಲಿತಾ ಅವರ ಪರಿಚಯ, ಮದುವೆ ಮತ್ತು ವಿಚ್ಛೇದನದ ಬಗ್ಗೆ ಜಯಂತಿ ವಿವರಿಸಿದ್ದಾರೆ. ಪ್ರಕಾಶ್ ರಾಜ್ ಮದುವೆಯಾದ ಮೊದಲ ಪತ್ನಿ ಲಲಿತಾ ಡಿಸ್ಕೋ ಶಾಂತಿ ಸಹೋದರಿ ಆಗಿದ್ದಾರೆ. ಬೇರೆ ರಾಜ್ಯಗಳಿಂದ ಬರುವ ನಟರಿಗೆ ಡಿಸ್ಕೋ ಶಾಂತಿ ಅವರು ಉಳಿದುಕೊಳ್ಳಲು ಮನೆಗಳನ್ನು ನೀಡುತ್ತಿದ್ದರು.
ಪ್ರಕಾಶ್ ರಾಜ್ ಕರ್ನಾಟಕದಿಂದ ತಮಿಳುನಾಡಿಗೆ ಬರುತ್ತಿದ್ದರು. ಆಗ ಡಿಸ್ಕೋ ಶಾಂತಿ ಸಹೋದರಿ ಲಲಿತಾ  ಅವರನ್ನು ಭೇಟಿಯಾದರು. ಆ ನಂತರ ಪ್ರಕಾಶ್ ಮತ್ತು ಲಲಿತಾ ಪ್ರೀತಿ ಮೂಡಿತು. ಬಳಿಕ ಇಬ್ಬರು ಹಿರಿಯರನ್ನು ಒಪ್ಪಿಸಿ ಮದುವೆ ಕೂಡ ಮಾಡಿಕೊಂಡ್ರು. ಈ ದಂಪತಿಗೆ ಮೂರು ಮಕ್ಕಳು ಜನಿಸಿದ್ರು. ಅವರಲ್ಲಿ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು, ತುಂಬು ಸಂಸಾರದ ಜೊತೆ ಪ್ರಕಾಶ್​ ಹಾಗೂ ಲಲಿತಾ ತುಂಬಾ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದರು ಎಂದು ಜಯಂತಿ ಕಣ್ಣಪ್ಪನ್ ಹೇಳಿದ್ದಾರೆ. <a href=https://youtube.com/embed/biagFq9a0Zo?autoplay=1&mute=1><img src=https://img.youtube.com/vi/biagFq9a0Zo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಪ್ರಕಾಶ್ ರಾಜ್ ಮತ್ತು ಲಲಿತಾ ಅವರ ಹಿರಿಯ ಪುತ್ರ ಸಿದ್ದು  2004ರಲ್ಲಿ ಮೃತಪಟ್ಟಿದ್ದರು. ಗಾಳಿಪಟ ಹಿಡಿಯಲು ಹೋಗಿ ಮಹಡಿ ಮೇಲಿನಿಂದ ಬಿದ್ದು ಸಿದ್ದು ಸಾವನ್ನಪ್ಪಿದ. ಅಂದಿನಿಂದ ಪ್ರಕಾಶ್ ಮತ್ತು ಲಲಿತಾ ನಡುವೆ ಭಿನ್ನಾಭಿಪ್ರಾಯ ಹೆಚ್ಚಿತು. ಅವರ ನಡುವಿನ ಅಂತರ ಕೂಡ ಹೆಚ್ಚಾಗಿದೆ. ಕೊನೆಗೆ 2009ರಲ್ಲಿ ಪ್ರಕಾಶ್ ಲಲಿತಾಗೆ ವಿಚ್ಛೇದನ ನೀಡಿದ್ರು. 2010 ರಲ್ಲಿ, ಅವರು ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು 2ನೇ ಮದುವೆ ಮಾಡಿಕೊಂಡ್ರು. 
ಆದ್ರೆ ತಮ್ಮ ಮಗನ ಸಾವು ಪ್ರಕಾಶ್ ಮತ್ತು ಲಲಿತಾ ಅವರಿಗೆ ತೀವ್ರ ನೋವುಂಟು ಮಾಡಿತ್ತು ಎಂದು ಜಯಂತಿ ಕಣ್ಣಪ್ಪನ್ ಹೇಳಿದ್ದಾರೆ. ಅಲ್ಲದೇ ಪೋನಿ ವರ್ಮಾ ಜೊತೆಗಿನ ಸಂಬಂಧ ತಿಳಿದು ಲಲಿತಾ ದೂರವಾದರು ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.