ಹಿರಿಯ ನ ಟಿ ಮಂಜುಳಾ ಸಾ ವನ್ನಪ್ಪಿದ್ದು ಹೇಗೆ ಗೊ ತ್ತಾ; ‌ಡೈರೆಕ್ಟರ್ ಗಳು ಎಂತಹ ಕೆಲಸ ಮಾಡಿದ್ದಾ ರೆ

 

ಕನ್ನಡದ ಅದ್ಭುತ ಕಲಾವಿದೆಯರಲ್ಲಿ ಒಬ್ಬರಾದ ನಟಿ ಮಂಜುಳಾ ಅವರು 1986 ಸೆಪ್ಟೆಂಬರ್ 12 ರಂದು ನಿಧನರಾದರು. ಆದರೆ ಅದಕ್ಕೂ ಒಂದು ವಾರ ಮೊದಲು ಅವರ ಮೈಗೆ ಬೆಂಕಿ ತಗುಲಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ತೀವ್ರ ಹೋರಾಟ ನಡೆಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮಂಜುಳಾ ಅಸುನೀಗಿದ್ದಾರೆ ಎನ್ನಲಾಗಿದೆ. ಆದರೆ, ಮಂಜುಳಾ ಮೈಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಗ್ಯಾಸ್ ಸ್ಟೌವ್ ಸಿಡಿದು ಬೆಂಕಿ ಹೊತ್ತಿಕೊಂಡಿದ್ದು, ಅದೇ ಕಾರಣಕ್ಕೆ ಅವರು ಸತ್ತಿದ್ದು ನಿಜವೇ ಸುಳ್ಳೇ ಎಂಬ ಬಗ್ಗೆ ಇಂದಿಗೂ ಹಲವರಲ್ಲಿ ಸಂದೇಹವಿದೆ. 

ನಟಿಯಾಗಿ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಮಂಜುಳಾರಿಗೆ ಅಂದಿನ ಕಾಲದ ಎಲ್ಲ ನಟರೊಂದಿಗೂ ನಟಿಸುವ ಚಾನ್ಸ್ ದೊರಕಿತ್ತು. ಡಾ ರಾಜ್‌ಕುಮಾರ್ , ಡಾ ವಿಷ್ಣುವರ್ಧನ್ ,ಕಲ್ಯಾಣ್‌ ಕುಮಾರ್, ಶ್ರೀನಾಥ್ ಮುಂತಾದ ಸಮಕಾಲೀನ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಮಂಜುಳಾ ಅಂದು ಬಹುಬೇಡಿಕೆಯ ಸ್ಟಾರ್ ನಟಿಯಾಗಿದ್ದರು. ಆದರೆ ಕೇವಲ 32ನೇ ವಯಸ್ಸಿನಲ್ಲಿಯೇ ತೀರಿಕೊಂಡರು. ಮಂಜುಳಾ ಅವರು ಚಿತ್ರರಂಗ ಹಾಗು ಅಪಾರ ಅಭಿಮಾನಿಗಳನ್ನು ಅಗಲಿ ದೂರ ಹೋಗಿಬಿಟ್ಟರು.  <a href=https://youtube.com/embed/SC4QjbGrukA?autoplay=1&mute=1><img src=https://img.youtube.com/vi/SC4QjbGrukA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮಂಜುಳಾ ಸಾವಿನ ಬಗ್ಗೆ ಇಂದಿಗೂ ಹಲವರು ಸಂದೇಹ ವ್ಯಕ್ತಪಡಿಸುತ್ತಾರೆ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಸಾವಿಗೆ ಶರಣಾದ ನಟಿ ಮಂಜುಳಾರಿಗೆ, ಅದಾಗಲೇ ಮದುವೆಯಾಗಿ ಒಬ್ಬ ಮಗ ಇದ್ದರು ಎನ್ನಲಾಗಿದೆ. ತಮಿಳುನಾಡಿನ ಎಂ ಕರುಣಾನಿಧಿ  ಅಕ್ಕನ ಮಗ ಅಮೃತಂ ಜತೆ ವಿವಾಹವಾಗಿದ್ದರು ನಟಿ ಮಂಜುಳಾ. ಅವರಿಗೊಬ್ಬ ಮಗನೂ ಹುಟ್ಟಿದ. ಆದರೆ, ಕಾಲಕಳೆದಂತೆ ಗಂಡ-ಹೆಂಡತಿ ನಡುವೆ ಅನ್ಯೋನ್ಯತೆ ಇರಲಿಲ್ಲ, ಅಮೃತಂ ಮಂಜುಳಾರನ್ನು ಬಿಟ್ಟು ಶಾಶ್ವತವಾಗಿ ಮದ್ರಾಸ್ ಸೇರಿಕೊಂಡಿದ್ದರು ಎನ್ನಲಾಗಿದೆ.

ಆ ಬಳಿಕ ಒಬ್ಬಂಟಿಯಾಗಿದ್ದ ಮಂಜುಳಾ ಚಾಮರಾಜನಗರದ  ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದರು. ಆದರೆ, ಪ್ರೀತಿಸಿಯೇನೋ ಆಗಿತ್ತು, ಜತೆಯಲ್ಲಿ ಓಡಾಡುತ್ತಲೂ ಇದ್ದ ಆ ಹುಡುಗ ಮಂಜುಳಾರನ್ನು ಮದುವೆಯಾಗಲು ಮಾತ್ರ ನಿರಾಕರಿಸಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಬೇಸತ್ತಿದ್ದ ನಟಿ ಮಂಜುಳಾ ಸ್ವತಃ ತಾವೇ ಗ್ಯಾಸ್ ಲೀಕ್ ಮಾಡಿಕೊಂಡು, ಕಡ್ಡಿ ಗೀರಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ತಕ್ಷಣಕ್ಕೆ ಪ್ರಾಣಪಕ್ಷಿ ಹಾರಿ ಹೋಗಲಿಲ್ಲ, ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿಕೊಂಡು ಅಲ್ಲಿ ವಾರಗಟ್ಟಲೇ ನರಳಿ ಸತ್ತರು' ಎನ್ನುತ್ತಾರೆ ಕೆಲವರು. ಆದರೆ ಅದು ಹೌದು ಎನ್ನಲು ಯಾವುದೇ ಸಾಕ್ಷಿಯಿಲ್ಲ. ಒಟ್ಟಿನಲ್ಲಿ ನಟಿ ಮಂಜುಳಾ ದುರಂತ ಸಾವು ಕಂಡಿದ್ದಂತೂ ನಿಜ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.