ಆನಂದ್ ಮಗಳು ವಂಶಿಕಾಗೆ ನಾನೇ ಅಮ್ಮ, ಕಾಮಿಡಿ ಕಿಲಾಡಿ ನಯಾನ ಹೀಗಂದಿದ್ಯಾಕೆ
Feb 2, 2025, 18:57 IST
ಪಟಾಕಿಯಂತೆ ಮಾತನಾಡುವ ವಂಶಿಕಾ ನೋಡಿದಾಗ ಅಂದುಕೊಳ್ಳುತ್ತಿದೆ. ಯಶು ಅಲ್ಲ ಅದಕ್ಕೆ ಅಮ್ಮ ನಾನು ಅಮ್ಮ ಅಂತಾ. ನನಗೆ ತುಂಬಾ ಹಾಗೆ ಅನಿಸುತ್ತದೆ. ನನಗೆ ವಂಶಿಕಾನ ನೋಡಿದಾಗ ನನ್ನನ್ನೇ ನೋಡಿಕೊಂಡ ಹಾಗೇ ಆಗುತ್ತದೆ ಎಂದು ಕಾಮಿಡಿ ಕಿಲಾಡಿಗಳು ನಯನಾ ಕನ್ನಡದ ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಅವರ ಮಗಳನ್ನು ಮನಸಾರೆ ಕೊಂಡಾಡಿದ್ದಾರೆ.
ಹೌದು ಯಶಸ್ವಿ ಮಾಸ್ಟರ್ ಆನಂದ್ ಅವರ ಕನೆಕ್ಟ್ ಕನ್ನಡ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ಮಗಳನ್ನು ನೋಡಿದಾಗ ಹೀಗಿರುತ್ತಾರಾ ಮಕ್ಕಳು ಅನಿಸುತ್ತದೆ. ಅವಳನ್ನು ಹುಟ್ಟಿದ ದಿನದಿಂದ ನೋಡಿಕೊಂಡು ಬಂದಿದ್ದೇನಲ್ಲಾ, ಅವಳ ಬದಲಾವಣೆಗಳನ್ನು ನೋಡಿದಾಗ ಮಕ್ಕಳು ಹೀಗಿರುತ್ತಾರಾ ಅನಿಸುತ್ತದೆ ಎಂದರು.
<a href=https://youtube.com/embed/p0iZwLqixvQ?autoplay=1&mute=1><img src=https://img.youtube.com/vi/p0iZwLqixvQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನ್ನ ಮಗಳು ಅವಳ ಪಾಡಿಗೆ ಓಡಾಡಿಕೊಂಡು ಇರುತ್ತಾಳೆ. ಅಮ್ಮ-ಅಪ್ಪ ಬೇಕು ಎನ್ನುವುದಿಲ್ಲ. ನನಗೆ ಊಟ ಕೊಟ್ಟು ನೀವು ಗೆಟ್ ಲಾಸ್ಟ್ ಎನ್ನುವ ರೀತಿ ಇರುತ್ತಾಳೆ ನನ್ನ ಮಗಳು. ನನಗೆ ಹಸಿವಾಗುತ್ತಿದೆ ಊಟ ಕೊಡಿ, ನನಗೆ ನಿದ್ದೆ ಬರುತ್ತಿದ್ದೆ ಅಮ್ಮಾ ಅಂತಾ ಬರುತ್ತಾಳೆ. ತೊಟ್ಟಿಲಿಗೆ ಹಾಕಿ ಮೂರು ಸಲ ತೂಗಿದರೆ ಮಲಗುತ್ತಾಳೆ.
ನನ್ನ ಮಗಳಿಗೆ ಹೆಸರು ಇಟ್ಟಿದ್ದು ಮಾಸ್ಟರ್ ಆನಂದ್ ಅವರು. ಅವಿನ್ಯಾ ಶ್ರೇಯಾ ಶೆಟ್ಟಿ ಅಂತಾ ಅವರೇ ಹೆಸರು ಇಟ್ಟಿದ್ದು. ನಮ್ಮ ಮನೆಯ ದೇವರು ಹಾಗೂ ಜಾತಿ ಎಲ್ಲಾ ನೋಡಿಕೊಂಡು ಅವಳಿಗೆ ಆ ಹೆಸರು ಇಟ್ಟರು. ನನ್ನ ಮಗಳದು ಹಾಗೂ ವಂಶಿಕಾದು ರಾಶಿ ನಕ್ಷತ್ರ ಒಂದೇ ಅಂತಾ ಅವರೇ ಹೇಳಿ ಈ ಹೆಸರನ್ನು ನಮಗೆ ಸೂಚಿಸಿದರು.
ಅವಿನ್ಯಾ ಅಂದರೆ ಹೊಸ ಪ್ರಾರಂಭ ಅಂತಾ ಗುರುಗಳೇ ಹೇಳಿದರು. ಅವಳ ಹೊಸ ಪ್ರಾರಂಭನೇ ಆಗಿದ್ದಾಳೆ ಎಂದು ನಯನಾ ಮಗಳ ಬಗ್ಗೆ ಮನಸ್ಸು ಬಿಚ್ಚಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.