ಸ್ನೇಹಿತನನ್ನು ಪರಿಚಯವಾದ ಒಂದೇ ತಿಂಗಳಲ್ಲಿ ನಾನು ಗರ್ಭಿಣಿಯಾದೆ; ಅಮಲಾ ಪೌಲ್
Nov 10, 2024, 19:49 IST
ಕೆಲವೊಮ್ಮೆ ಏನೋ ಹೇಳೋಕೆ ಹೋಗ್ತೀವಿ ಆದರೆ ಏನೋ ಹೇಳಿ ಪಜೀತಿ ಪಡ್ತೇವೆ. ಹೌದು ಇಂತಹದೇ ಒಂದು ಮಾತನ್ನು ಹೇಳಿ ನಟಿ ಅಮಲಾ ಪೌಲ್ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಕನ್ನಡದ ಹೆಬ್ಬುಲಿ ಚಿತ್ರದಲ್ಲೂ ನಟಿಸಿರುವ ಮಲಯಾಳಂ ಬೆಡಗಿ ನಟಿ ಅಮಲಾ ಪೌಲ್ ಅವರು ಇದೀಗ ಸಖತ್ ಸುದ್ದಿಯಾಗುತ್ತಿದ್ದಾರೆ. ಅವರು ತಮ್ಮ ಗಂಡನ ಬಗ್ಗೆ ಹೇಳಿರುವ ಹೇಳಿಕೆ ಇದೀಗ ಸಖತ್ ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಯಾರೂ ತಮ್ಮ ಗಂಡನ ಬಗ್ಗೆ ಹಾಗೆ ಹೇಳಿಕೊಳ್ಳೋದಿಲ್ಲ! ಹೇಳೊದಿಲ್ಲ ಅನ್ನೋದಕ್ಕಿಂತ ಅದು ಹೇಳಿಕೊಳ್ಳೋ ಸಂಗತಿಯೆ ಅಲ್ಲ ಅನ್ನಬಹುದು. ಆದರೆ ನಟಿ ಅಮಲಾ ಪೌಲ್ ಹೇಳಿಕೊಂಡಿದ್ದಾರೆ. ಹಾಗಿದ್ರೆ ಅವ್ರು ಅದೇನ್ ಹೇಳಿದಾರೆ ಗೊತ್ತಾ?ಗಂಡನನ್ನು ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ. ಅಷ್ಟು ಆತುರ ಅವರಲ್ಲಿತ್ತು..' ಎಂದಿದ್ದಾರೆ ಅಮಲಾ ಪೌಲ್.
ಅಷ್ಟಕ್ಕೂ ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮ್ಮ ಲವ್, ಮದುವೆ ಹಾಗೂ ಮಗುವಿನ ಮಾತನಾಡುತ್ತ ನಟಿ ಅಮಲಾ ಪೌಲ್ ಹೀಗೆ ಹೇಳಿದ್ದಾರೆ. ಆದರೆ ಅವರ ಹೇಳಿಕೆಯನ್ನು ಕೇಳಿ ಕೆಲವರು ಮುಸಿಮುಸಿ ನಕ್ಕರೆ ಇನ್ನೂ ಕೆಲವರು ಅವೆಲ್ಲವನ್ನೂ ಯಾರಾದ್ರೂ ಮೀಡಿಯಾ ಮುಂದೆ ಹೇಳ್ತಾರಾ ಅಂತ ಅವರಿಗೆ ಬಾಯಿಗೆ ಬಂದಂತೆ ಬೈಯ್ತಿದಾರೆ.
ಇನ್ನು ಯಾರೋ ಒಬ್ಬರು ಅಮಲಾ ಪೌಲ್ ಮಾತಿಗೆ ಕೆಲವು ಹೆಣ್ಮಕ್ಕಳಿಗೆ ಏನ್ ಹೇಳ್ಬೇಕು ಏನ್ ಹೇಳ್ಬಾರ್ದು ಅಂತಾನೇ ಗೊತ್ತಾಗಲ್ಲ ಗುರುವೇ.. ಸ್ಟಾರ್ಸ್ ಅನ್ನೋ ಕಾರಣಕ್ಕೆ ಇವೆಲ್ಲಾ ಹೇಳ್ಕೋಬೇಕಾ? ಛೀ, ಥೂ ಅಸಹ್ಯ..' ಎಂದಿದ್ದಾರೆ. ಕೆಲವರು ಹಣೆ ಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ. ಇನ್ನೂ ಕೆಲವರು ನಿಮ್ಮ ಮೊದಲ ಗಂಡನಾ ಅಥವಾ ಎರಡನೇ ಗಂಡನಾ ಅಷ್ಟು ಆತುರಗಾರ?' ಎಂದು ಕೇಳಿದ್ದಾರೆ. ಆದರೆ, ಅದಕ್ಕಿನ್ನೂ ಅಮಲಾ ಉತ್ತರ ಕೊಟ್ಟಿಲ್ಲ ಬಿಡಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.