ಮನೆಯಿಂದ ಹೊರಬರುವಂತಿಲ್ಲ, ಯುವಕರು ನನ್ನ ಆ ಭಾ ಗವನ್ನೇ ನೋಡುತ್ತಾರೆ; ಜಾನ್ವಿ ಕಪೂರ್

 

ದಿವಂಗತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್‌ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಆದರೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಟ್ಟಿದ್ದಾರೆ. ಇದೀಗ ದಕ್ಷಿಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಜೊತೆ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಜಾನ್ವಿ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿ ಆಗಿದ್ದರು. ಸಹೋದರಿ ಖುಷಿ ಕಪೂರ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಶ್ರೀದೇವಿ ಪುತ್ರಿ ಉತ್ತರ ಕೊಟ್ಟಿದ್ದಾರೆ. ಯಾಮಾರಿ ತಮ್ಮ ಬಾಯ್‌ಫ್ರೆಂಡ್ ಹೆಸರನ್ನು ಹೇಳಿಬಿಟ್ಟಿದ್ದರು. ಇನ್ನು ಜಾನ್ವಿ ಸೀಕ್ರೆಟ್ಸ್ ಖುಷಿ, ಅದೇ ರೀತಿ ಖುಷಿ ಸೀಕ್ರೆಟ್ಸ್ ಜಾನ್ವಿ ಹೇಳಿದ್ದರು ಭಾರೀ ವೈರಲ್ ಆಗಿತ್ತು. ಜೊತೆಗೆ ಡೀಪ್‌ಫೇಕ್ ವಿಡಿಯೋ ವಿವಾದದ ಬಗ್ಗೆಯೂ ಬಾಲಿವುಡ್ ಬೆಡಗಿ ಮಾತನಾಡಿದ್ದಾರೆ.

ಮಾದಕ ಮೈಮಾಟದಿಂದ ಜಾನ್ವಿ ಕಪೂರ್ ಸದಾ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಹಾಟ್‌ ಹಾಟ್‌ ಫೋಟೊಶೂಟ್‌ಗಳನ್ನು ಮಾಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು 2 ಕೋಟಿಗೂ ಅಧಿಕ ಮಂದಿ ಆಕೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇದರಿಂದ ಒಳ್ಳೆ ಆದಾಯ ಕೂಡ ಬರುತ್ತದೆ ಎಂದು ಈ ಹಿಂದೆ ಜಾನ್ವಿ ಕಪೂರ್ ಹೇಳಿಕೊಂಡಿದ್ದರು. <a href=https://youtube.com/embed/myxa2CurWoU?autoplay=1&mute=1><img src=https://img.youtube.com/vi/myxa2CurWoU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸದ್ಯ ಕಾಫಿ ವತ್ ಕರಣ್ ಶೋನಲ್ಲಿ ಬೋಲ್ಡ್ ಪ್ರಶ್ನೆಗಳಿಗೂ ಜಾನ್ವಿ ಉತ್ತರ ಕೊಟ್ಟಿದ್ದಾರೆ. ರ್ಯಾಪಿಡ್ ಫೈಯರ್ ರೌಂಡ್‌ನಲ್ಲಿ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ. ಹುಡುಗರು ನಿಮ್ಮನ್ನು ನೋಡಿದಾಗ ಮೊದಲು ಗಮನಿಸೋದು ಏನು? ಎಂದು ಕರಣ್ ಕೇಳಿದ್ದಾರೆ. ಕೂಡಲೇ ಉತ್ತರಿಸಿರುವ ಆಕೆ ನನ್ನ ಕಣ್ಣುಗಳನ್ನು ನೋಡುವುದಾಗಿ ಎಲ್ಲರೂ ಹೇಳುತ್ತಾರೆ. ಆದ್ರೆ, ಅವರ ಕಣ್ಣು ಬೇರೆ ಕಡೆ ಇರುತ್ತದೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ನಿಮ್ಮ ಸ್ಪೀಡ್ ಡಯಲ್‌ನಲ್ಲಿ ಇರುವ ಮೂವರ ಹೆಸರು ಹೇಳಿ ಎಂದು ಕರಣ್ ಜೋಹರ್ ಕೇಳಿದ್ದಾರೆ. ಕೂಡಲೇ ಉತ್ತರಿಸಿದ ಜಾನ್ವಿ, ಮೊದಲು ನನ್ನ ತಂದೆ ಬೋನಿ ಕಪೂರ್, ತಂಗಿ ಖುಷಿ ಎಂದ ಬಳಿಕ ಬಾಯ್ತಪ್ಪಿ ಶಿಖು (ಶಿಖರ್ ಪಹಾರಿಯಾ) ಎಂದು ಹೇಳಲು ಹೋಗಿ ನುಂಗಿಕೊಂಡಿದ್ದಾರೆ. ಬಳಿಕ ಅಯ್ಯಯ್ಯೋ ಬಾಯ್ತಪ್ಪಿ ಹೇಳಿಬಿಟ್ನಾ? ಎಂದು ಶಾಕ್ ಆಗಿದ್ದಾರೆ. ಕರಣ್‌ ಜೋಹರ್ ಇದನ್ನು ಕೇಳಿ ಫುಲ್ ಎಕ್ಸೈಟ್ ಆಗಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.