ಅಕುಲ್ ಬಾಲಾಜಿ ‌ಮಾಡದಿರುವ ಕೆಲಸವಿಲ್ಲ, ಕೌಂಟರ್ ಕೊಟ್ಟ ಕಿಚ್ಚ ಸುದೀಪ್

 
ಮಾತಿನ ಮಲ್ಲ ಕನ್ನಡ ಜನಪ್ರಿಯ ನಿರೂಪಕ ಅಕುಲ್‌ ಬಾಲಾಜಿ ಎಂತಹ ಮಾತಿನ ಮೋಡಿಗಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಂತಹದ್ದೇ ಕಾರ್ಯಕ್ರಮಗಳನ್ನು ಕೊಟ್ಟರೂ ಅದನ್ನು ಯಶಸ್ವಿಯಾಗಿ ಮುಗಿಸಿಕೊಡುವ ಚತುರತೆ ಅಕುಲ್‌ ಬಾಲಾಜಿಗೆ ಇದೆ. 
ಒಂದು ಸಮಯದಲ್ಲಿ ರಿಯಾಲಿಟಿ ಶೋ ಎಂದಾಕ್ಷಣ ಥಟ್ ಅಂತಾ ನೆನಪಿಗೆ ಬರುತ್ತಿದ್ದ ಹೆಸರೇ ಅಕುಲ್‌ ಬಾಲಾಜಿ. ಅಷ್ಟರ ಮಟ್ಟಿಗೆ ಕಿರುತೆರೆ ಲೋಕದಲ್ಲಿ ಅಕುಲ್‌ ಮಿಂಚಿದ್ದರು. ಬರೀ ಶೋಗಳಲ್ಲಿ ಅಲ್ಲ ಅಕುಲ್‌ ನಿಜ ಜೀವನದಲ್ಲಿಯೂ ಎಂತಹ ಚತುರ ಎನ್ನುವುದರ ಬಗ್ಗೆ ನಟ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. <a href=https://youtube.com/embed/5c0_Jy1JiDE?autoplay=1&mute=1><img src=https://img.youtube.com/vi/5c0_Jy1JiDE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅನುಶ್ರೀ ಆ್ಯಂಕರ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್‌, ಅಕುಲ್‌ ತುಂಬಾ ಬಜೆಟ್‌ಅಲ್ಲಿ ಜೀವನ ಮಾಡುವವರು. ಅವನ ದುಡ್ಡು ಅಂತಾ ಬಂದಾಗ ಅಕುಲ್‌ ತುಂಬಾ ಬಜೆಟ್‌ ಅಲ್ಲಿ ಲೈಫ್‌ ಲೀಡ್‌ ಮಾಡ್ತಾನೆ. ಅವರು ಬಂದು ಬಿಟ್ಟು ಏನಾದರೂ ಒಂದು ವಸ್ತು ಬಗ್ಗೆ ಹೇಳ್ತಾರೆ. ಕಿಚ್ಚ ಬ್ರೋ ನೀವು ಇದನ್ನು ನೋಡಿದ್ದೀರಾ ಅಂತಾ. ಅವರು ಯಾವ ತರ ಮಾತಾಡ್ತಾರೆ ಅಂದರೆ ಅವರೇ ನಾಳೆ ಕಳುಹಿಸಿಕೊಟ್ಟು ಬಿಡ್ತಾರೆ ಅನ್ನೋ ತರ ಮಾತಾಡ್ತಾರೆ. ಕೊನೆಯಲ್ಲಿ ಲಿಂಕ್‌ ಕಳುಹಿಸುತ್ತೇನೆ. ನೀವು ಆರ್ಡರ್‌ ಮಾಡಿ ಅಂತಾ ಹೇಳಿ ನಿಬ್ಬೆರಗಾಗಿಸುತ್ತಾರೆ.
ಬಿಗ್ಬಾಸ್ ಅಲ್ಲಿ ಶೈನ್ ಆಗಿದ್ದ ಒಂದು ರೆಸಾರ್ಟ್‌ ಮಾಡಿದ್ದೇನೆ. ತುಂಬಾ ಚೆನ್ನಾಗಿ ಮಾಡಿದ್ದೇನೆ ಅಂತಾ ಹೇಳಿ ಫೋಟೋಗಳನ್ನು ತೋರಿಸಿದರು. ಆಗ ನಾನು ಇದ್ಯಾವುದೋ ಬಿಗ್‌ ಬಾಸ್‌ ಪ್ರಾಪರ್ಟಿ ಇದ್ದ ಹಾಗೇ ಇದ್ಯಾಲ್ಲ ಅಂದೆ. ಅದಕ್ಕೆ ಅವರು ನಾನು ಅಲ್ಲಿಂದಾನೇ ತಂದಿದ್ದು ಅಂತಾ ಹೇಳಿ ಬಿಟ್ಟರು. ಅವರು ಹೇಗೂ ಆ ಹಳೆಯ ಪ್ರಾಪರ್ಟಿಗಳನ್ನು ಬಳಸುದಿಲ್ಲ ಅಂತಾ ಗೊತ್ತಾದಾಗ ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ.
ಇಡೀ ಬಿಗ್‌ ಬಾಸ್‌ ಮನೆಯೊಳಗಿದ್ದ ಪ್ರಾಪರ್ಟಿಗಳನ್ನು ತೆಗೆದುಕೊಂಡು ಹೋಗಿ ರೆಸಾರ್ಟ್‌ಗೆ ಹಾಕಿ ಬಿಟ್ಟಿದ್ದಾರೆ. ನಾನು ನಮ್ಮ ತಲೆಗೆ ಇಂತಹ ಐಡಿಯಾಗಳು ಬರಲ್ವಲ್ಲಾ ಅಂದುಕೊಂಡೆ. ನಮ್ಮ ಬುಡದಿಂದ ತೆಗೆದುಕೊಂಡು ಹೋಗಿ ಬ್ಯುಸಿನೆಸ್‌ ಅನ್ನೇ ಶುರು ಮಾಡಿದ್ದಾರೆ. ಅವರು ಸೂಪರ್‌ ಸ್ಮಾರ್ಟ್‌. 
ಅಕುಲ್‌ ಇವತ್ತಿನ ವರೆಗೂ ಮಾಡದೇ ಇರುವ ಒಂದೇ ಒಂದು ಕೆಲಸ ಅಂದರೆ ನನ್ನ ವಸ್ತುಗಳನ್ನು ತಂದು ನನಗೆ ಮಾರಿಲ್ಲ. ಇನ್ನೆಲ್ಲಾ ಮಾಡಿದ್ದಾರೆ' ಎಂದು ಅಕುಲ್‌ ಚತುರತೆ ಬಗ್ಗೆ ಕಿಚ್ಚ ಸುದೀಪ್‌ ಹೊಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.