ರಾತ್ರಿ ಆದ ತಕ್ಷಣ ಅವ್ನು ಏನು ಮಾಡ್ತಾನೆ ಅಂತನೇ ಅರ್ಥ ಆಗಲ್ಲ; ಬಿಗ್ ಬಾಸ್ ಸ್ಪರ್ಧಿ
ಕೆಲವೊಂದು ಸಾರಿ ಬಿಗ್ ಬಾಸ್ ಮನೆಯ ಕಾರ್ಯಕ್ರಮವನ್ನು ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಆ ದೊಡ್ಡ ಮನೆಯ ಸಣ್ಣ ಸಂಗತಿಗಳು ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬ ಪ್ರಶ್ನೆ ಕಾಡುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಮೊನ್ನೆಯ ದಿವಸ ಹಿಂದಿ ಬಿಗ್ ಬಾಸ್ ನೋಡುವಾಗ ಅನೇಕರು ಮುಜುಗರಕ್ಕೀಡಾಗಿದ್ದಾರೆ. ಕೆಲವರು ಈಗ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.
ಹೌದು, ಅಸಲಿಗೆ.. ಬಿಗ್‌ಬಾಸ್ ಶೋನ ಪ್ರತಿಯೊಂದು ಸೀಸನ್‌ನಲ್ಲಿಯೂ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಈ ಬಾರಿಯ ಬಿಗ್ ಬಾಸ್ ಕೂಡಾ ಇದರಿಂದ ಹೊರತಾಗಿಲ್ಲ. ಇಬ್ಬರು ಪತ್ನಿಯರ ಮುಂದಿನ ಗಂಡ ಅರ್ಮಾನ್ ಮಲ್ಲಿಕ್ ಎಂಬಾಂತನಂತೂ ಪ್ರೇಕ್ಷಕರಿಗೇ ಅಸಹ್ಯ ಹುಟ್ಟಿಸಿದ್ದಾನೆ. ಇಂಥಾ ಅರ್ಮಾನ್ ಮಲ್ಲಿಕ್ ಮೊನ್ನೆ ತನ್ನ ಎರಡನೇ ಪತ್ನಿ ಕೃತಿಕಾ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿ ಈಗ ಸುದ್ದಿಯಾಗಿದ್ದಾನೆ. ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಅಂದ್ಹಾಗೇ ಬಿಗ್ ಬಾಸ್ ಮನೆ ಕ್ಯಾಮರಾ ಕಣ್ಗಾವಲಿನಲ್ಲಿರುತ್ತೆ. ಬಾತ್ ರೂಮ್‌ವೊಂದನ್ನು ಹೊರತು ಪಡಿಸಿದರೆ ಮನೆಯ ಮೂಲೆ ಮೂಲೆಯಲ್ಲಿ ಕ್ಯಾಮರಾಗಳಿರುತ್ತವೆ. ಮನೆಯೊಳಗೆ ಇರುವ ಅರ್ಮಾನ್ ಮಲ್ಲಿಕ್ ಗೆ ಈ ವಿಚಾರ ಚೆನ್ನಾಗಿಯೇ ಗೊತ್ತು. ಆದರೂ. ಅರ್ಮಾನ್ ಮಲ್ಲಿಕ ತನ್ನ ಪತ್ನಿಯ ಎದುರು ಪ್ರಣಯದ ಕವಿತೆ ಹಾಡುವ ಪ್ರಯತ್ನ ಮಾಡಿದ್ದಾನೆ.
ಹೀಗಾಗಿಯೇ ಇದೆಲ್ಲವೂ ಟಿ.ಆರ್.ಪಿಯ ಲೆಕ್ಕಾಚಾರ ಎನ್ನುವ ಮಾತು ಕೇಳಿ ಬರುತ್ತಿದೆ. ಸಲ್ಮಾನ್ ಖಾನ್ ಇಲ್ಲದೇ ಸೊರಗುತ್ತಿರುವ ಬಿಗ್ ಬಾಸ್‌ನ ಹೇಗಾದರೂ ಮಾಡಿ ನಂಬರ್ 01 ಪಟ್ಟಕ್ಕೆ ಪ್ರತಿಷ್ಠಾಪಿಸಬೇಕೆಂದು ಮಾಡಲಾಗುತ್ತಿರುವ ಕಸರತ್ತು ಇದು ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಉದ್ದೇಶಪೂರ್ವಕವಾಗಿಯೇ ಈ ಚಟುವಟಿಕೆಯನ್ನೂ ವೈರಲ್ ಮಾಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.