ಬೆಂಗಳೂರಿಗೆ ಬರೋಕೆ ನನ್ನ ಮದುವೆ ಆದ್ಲು, ಇಲ್ಲಿ ಬಂದ ಮೇಲೆ ಬೇರೆ ಅವರ ಜೊತೆ ಹೋದ್ಲು

 

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ಜಾಹ್ನವಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾರಣ, ಅವರ ಮಾಜಿ ಪತಿ ಕಾರ್ತಿಕ್ ನೀಡಿದ ಆಕ್ರೋಶಭರಿತ ಸಂದರ್ಶನ. ಬಿಗ್‌ಬಾಸ್ ಮನೆಯಲ್ಲಿ ಡಿವೋರ್ಸ್ ಕುರಿತು ಜಾಹ್ನವಿ ನೀಡಿದ ಹೇಳಿಕೆಗೆ ಮೊದಲ ಬಾರಿಗೆ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದು, ತಮ್ಮ ಹೊಸ ಜೀವನದ ಮೇಲೆ ಅದರ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾರ್ತಿಕ್ ಅವರ ಪ್ರಕಾರ, ಇಬ್ಬರಿಗೂ ಅಧಿಕೃತವಾಗಿ ಡಿವೋರ್ಸ್ ಆಗಿ ಒಂದು ವರ್ಷ ಕಳೆದಿದೆ. ಈಗ ತಮ್ಮ ಹೊಸ ಸಂಸಾರ, ಹೆಂಡತಿ ಹಾಗೂ 10 ತಿಂಗಳ ಮಗು ಇದ್ದಾರೆ. ಆದರೂ ಜಾಹ್ನವಿ ನಿರಂತರವಾಗಿ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಮಾತನಾಡುವುದರಿಂದ ಮನಸ್ಸಿಗೆ ತೊಂದರೆ ಆಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಾಹ್ನವಿ ನೀಡುತ್ತಿರುವ ಹೇಳಿಕೆಗಳು ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. <a style="border: 0px; overflow: hidden" href=https://youtube.com/embed/l77Kfk53uCk?autoplay=1&mute=1><img src=https://img.youtube.com/vi/l77Kfk53uCk/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಕಾರ್ತಿಕ್ ಅವರು ತಮ್ಮ ತಂದೆ ಮತ್ತು ಮಗನ ಕುರಿತೂ ನೋವು ಹಂಚಿಕೊಂಡಿದ್ದಾರೆ. “ನಮ್ಮ ತಂದೆ ಮೊಮ್ಮಗನನ್ನು ನೋಡಲು ಹೋದಾಗ ಜಾಹ್ನವಿ ಒಳಗೆ ಕರೆಯದೇ ಅವಮಾನ ಮಾಡಿದರು. ಅವರ ಸಾವಿನ ಸಮಯದಲ್ಲೂ ಅವರು ಬರಲಿಲ್ಲ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. “ಜಾಹ್ನವಿ ಈಗಲೂ ನನ್ನ ಬಗ್ಗೆ ಮಾಹಿತಿ ಸಂಗ್ರಹಿಸಿ ತಪ್ಪು ಹೇಳಿಕೆ ನೀಡುತ್ತಿದ್ದಾರೆ. ಇದು ವಿಕೃತ ಮನಸ್ಸಿನ ಲಕ್ಷಣ,” ಎಂದು ಕಿಡಿಕಾರಿದರು. 

ಮಗನ ಶಿಕ್ಷಣಕ್ಕಾಗಿ ನ್ಯಾಯಾಲಯ ಸೂಚಿಸಿದ ಹಣವನ್ನು ನಿಯಮಿತವಾಗಿ ನೀಡುತ್ತಿದ್ದೇನೆ ಎಂದೂ ಅವರು ಸ್ಪಷ್ಟಪಡಿಸಿದರು.ಕಾರ್ತಿಕ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬಿಗ್‌ಬಾಸ್ ಮನೆಯಲ್ಲಿ ಜಾಹ್ನವಿ ನೀಡಿದ ಹೇಳಿಕೆಗೂ ಈ ಪ್ರತಿಕ್ರಿಯೆಗೂ ನೆಟ್‌ಜನರು ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಖಾಸಗಿ ವಿಷಯಗಳು ಮತ್ತೆ ಪಬ್ಲಿಕ್ ಚರ್ಚೆಗೆ ಬಂದಿದ್ದು, ಈ ವಿವಾದ ಇನ್ನಷ್ಟು ಬಿಸಿ ಗಾಳಿ ಎಬ್ಬಿಸಿದೆ.