ನಾನು‌ ಬಿಗ್ ಬಾಸ್ ಮನೆಯಲ್ಲಿ ಯಾರನ್ನು ಕೂಡ ಕಣ್ಣೆತ್ತಿ ನೋಡಿಲ್ಲ, ಆದರೆ ನನ್ನ ಬಾಡಿ ನೋಡಿ ಅವರೇ  ಜೊಲ್ಲು ಸೇರಿಸುತ್ತಿದ್ದರು; ಕರಿಬಸಪ್ಪ

 

ಬಿಗ್‌ಬಾಸ್ ಕನ್ನಡ ಸೀಸನ್ 12 ಪ್ರೇಕ್ಷಕರಿಗೆ ಪ್ರತಿ ವಾರವೂ ಆಕರ್ಷಕ ಸುಳ್ಳು-ಸತ್ಯದ ಆಟ ಮತ್ತು ಮನರಂಜನೆಯಿಂದ ತುಂಬಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್ ಕರಿಬಸಪ್ಪ ಈ ಬಾರಿ ಸ್ಪರ್ಧಿಯಾಗಿ ಮನೆಯಲ್ಲಿ ಪ್ರವೇಶಿಸಿದ್ದರು, ಆದರೆ ಮೊದಲ ವಾರವೇ ಬಿಗ್‌ಬಾಸ್ ಮನೆಯಿಂದ ಹೊರಹೋಗಬೇಕಾಯಿತು. ಹೊರಬಂದ ನಂತರ ಮಾಧ್ಯಮಗಳಿಗೆ ದೈನಂದಿನ ಬದುಕಿನ ಅನುಭವ, ಆಟದ ನಿಯಮಗಳು ಮತ್ತು ಏಕೆ ಅವರು ಎಲಿಮಿನೇಟ್ ಆಗಿದ್ದರು ಎಂಬುದನ್ನು ಬಹಿರಂಗಪಡಿಸಿದರು.

ಕರಿಬಸಪ್ಪ ತಮ್ಮ ಎಲಿಮಿನೇಷನ್ ಬಗ್ಗೆ ಹೇಳುತ್ತಾ ಬಿಗ್‌ಬಾಸ್ ಮನೆಯಲ್ಲಿ ಊಟ ನನಗೆ ಸಾಕಾಗುತ್ತಿರಲಿಲ್ಲ. ಮನೆಗೆ ಒಳಗೆ ಅರಸ ಮತ್ತು ಸೇವಕರು ಇದ್ದರೂ ನಾವು ಸೇವಕರಂತೆ ಭಾವಿಸುತ್ತಿದ್ದೇವೆ. ಅರ್ಧ ಚಪಾತಿ ಅಥವಾ ಪೂರಿ ಮಾತ್ರ, ಜೀವನವನ್ನು ಕಳೆಯಬೇಕಾಯಿತು. ಆದರೆ ನನಗೆ ಮುಖ್ಯವಾದುದು ಊಟವಲ್ಲ; ಎಲ್ಲರಲ್ಲೂ ನಗು ತರಬೇಕು ಎಂಬುದು ಮುಖ್ಯ. ಆದರೆ ಅಲ್ಲಿ ಯಾರೂ ನನ್ನೊಂದಿಗೆ ಓಪನ್‌ಅಪ್ ಆಗಿರಲಿಲ್ಲ. ಇದು ನನ್ನ ಹಸಿವಿಗಿಂತ ಹೆಚ್ಚಾಗಿ ಬೇಸರವಾಗಿದೆ ಎಂದಿದ್ದಾರೆ.

ಅವರು ಮನೆಯಲ್ಲಿ ಜಂಟಿ ಆಟಗಳು ಹೇಗಾಗುತ್ತವೆ ಎನ್ನುವುದರ ಬಗ್ಗೆ ಹೇಳಿದ್ದಾರೆ: “ನಾನು ಆಟ, ವ್ಯಕ್ತಿತ್ವ ಪ್ರದರ್ಶನ ಮತ್ತು ಮನರಂಜನೆಗಾಗಿ ಮನೆಯಲ್ಲಿ ಇದ್ದೆ. ಆದರೆ ಉಳಿದವರು ನಮ್ಮ ಜಂಟಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮೊದಲಿಗೆ ನಾನು ಬಾಡಿಬಿಲ್ಡಿಂಗ್ ಕಾಲದಲ್ಲಿ ಡಯಟ್ ಪ್ಲಾನ್ ಪಾಲಿಸುತ್ತಿದ್ದೆ, ಈಗ ಎರಡು ಮಕ್ಕಳ ತಂದೆ. ಅದಕ್ಕಿಂತ ಹೆಚ್ಚು ಊಟ ಸಾಧ್ಯವಿಲ್ಲ.ಹೊಟ್ಟೆ ಹಸಿವು ಕಾಡ್ತಿತ್ತು ಎಂದಿದ್ದಾರೆ. <a style="border: 0px; overflow: hidden" href=https://youtube.com/embed/tDvJXkcFV2Q?autoplay=1&mute=1><img src=https://img.youtube.com/vi/tDvJXkcFV2Q/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಅವರಿಗೆ ಮನೆಯಲ್ಲಿ ಬದುಕಲು  ಸಾಧ್ಯವಾಗದ ಮತ್ತೊಂದು ಅಸಮಾಧಾನವೆಂದರೆ ಹುಡುಗಿ ಜೊತೆಗೆ ಇದ್ದರೆ ನಾನು ಪಾರಾಗುತ್ತಿದ್ದೆ. ನನ್ನ ಜೊತೆಗೆ ಒಂದು ಮುದ್ದಾದ ಹುಡುಗಿ ಇದ್ದರೆ, ಅವರು ಆಟವಾಡದೇ ಇದ್ದರೂ, ಅವರ ಸ್ಮೈಲ್ ನಮಗೂ ಪಾರು ಮಾಡುತ್ತಿತ್ತು. ನಾನು ಮತ್ತು ಅಮಿತ್ ಸ್ಟ್ರಾಂಗ್ ಸ್ಪರ್ಧಿಗಳಾಗಿದ್ದರೂ, ಬೇರೆ ಜಂಟಿಗಳು ಹುಡುಗ-ಹುಡುಗಿ ಇದ್ದ ಕಾರಣ ನಾವು ಹೊರಹೋಗಬೇಕಾಯಿತು ಎಂದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಬಿಗ್ಬಾಸ್ ಮನೆಯಲ್ಲಿ ಸ್ಟ್ರಾಟರ್ಜಿ ಮಾಡೋದು ಪಕ್ಕಾ ಅಂದ ಹಾಗಿದೆ.