ಅವತ್ತು ಶೂಟಿಂಗ್ ಮುಗಿದ ಬಳಿಕ ನನ್ನ ತಾಯಿ ಜೊತೆ ಮಲಗಿದ್ದೆ; ಆದರೂ ನನ್ನ ಬಿಡದೆ ಎ ತ್ತಾಕೊಂಡು ಹೋದ ನಿರ್ಮಾಪಕ
Aug 30, 2024, 13:31 IST
ಮಲಯಾಳಂ ಚಿತ್ರರಂಗ ಅಲ್ಲೋಲ..ಕಲ್ಲೋಲವಾಗಿದೆ. ಚಿತ್ರರಂಗದಲ್ಲಿನ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ಸಲ್ಲಿಸಿದ ವರದಿಯಿಂದ ಮಲಯಾಳಂ ಚಿತ್ರರಂಗದ ಮುಖವಾಡ ಕಳಚಿ ಬಿದ್ದಿದೆ. ಅದು ತೆರೆದಿಟ್ಟಿರುವ ಸತ್ಯ ಕೇವಲ ಮಲಯಾಳಂ ಚಿತ್ರರಂಗವನ್ನಷ್ಟೇ ಅಲ್ಲ, ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
ಇದಕ್ಕೆ ಪೂರಕವಾಗಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿರುವ ಪುರುಷರ ಮನಸ್ಥಿತಿಯ ಕುರಿತು ಕಿಡಿ ಕಾರುತ್ತಿದ್ದಾರೆ. ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನು ನಿಯಂತ್ರಿಸುವ ಪವರ್ ಗ್ರೂಪ್ ಇದೆ ಎಂದಿದ್ದಾರೆ. ಕಲಾವಿದರು ಅವರ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರದಲ್ಲಿ ನಟಿಸುವ ಮಹಿಳೆಯರು ನಿರ್ದೇಶಕರ ವಿರುದ್ಧ ದೂರು ನೀಡಲು ಸಹ ಸಾಧ್ಯವಿಲ್ಲದ ಸ್ಥಿತಿ ಇದೆ ಎಂದು ವರದಿಯಲ್ಲಿ ಹೇಳಲಾಗ್ತಿದೆ. ಇನ್ನು ಈ ಕುರಿತಾಗಿ ಹೇಳಿರುವ ನಟಿ ಶ್ರೀದೇವಿಕಾ ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ. ಚಿತ್ರರಂಗ ಹೊರಗೆ ಮಾತ್ರ ಚೆಂದ ಕಾಣುತ್ತೆ. ಅವಕಾಶ ಪಡೆಯಲು ರಾಜಿ ಮಾಡಿಕೊಳ್ಳಲೇಬೇಕಾದ ಸ್ಥಿತಿ ಇದೆ ಎಂದಿದ್ದಾರೆ.
ಅಂದು ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೆಶಕ ತುಳಸಿದಾಸ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ನಾನು ಹಲವು ಬಾರಿ ಹೇಳಿದರು ಕೇಳದೆ ರಾತ್ರಿ ಇಡೀ ನನ್ನ ರೂಮಿನ ಬಾಗಿಲನ್ನು ಬಡಿದ. ಪಕ್ಕದಲ್ಲೇ ಅಮ್ಮ ಇದ್ದಳು. ಭಯದಿಂದ ಅವರು ಹಿರಿಯ ನಟರೊಬ್ಬರಿಗೆ ಫೋನ್ ಮಾಡಿ ಘಟನೆಯ ಬಗ್ಗೆ ತಿಳಿಸಿದಳು. ಆಗ ಆ ನಟ ತುಲಸಿದಾಸ್ ಗೆ ಕರೆ ಮಾಡಿ ಬೈದರು.ಹಾಗಾಗಿ ಆವರು ಸುಮ್ಮನಾದರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunafu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.