ನನಿಗೆ ತುಕಾಲಿ ಅಂತ ಗಂಡ ಬೇಕು, ಮೋಕ್ಷಿತಾ ಪೈ ಮದುವೆ ಆಗೋಕೆ ಈ ಕ್ವಾಲಿಟಿ ಮುಖ್ಯ ‌ಅಂತೆ

 
ಕಾಮಿಡಿಗಳಿಂದಲೇ ಫೇಮಸ್ ಆಗಿರುವ ಕಲಾವಿದ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದರು ಮೊದಲ ಕೆಲವು ವಾರಗಳಲ್ಲಿ ಸಖತ್‌ ಆಯಕ್ವೀವ್‌ ಆಗಿದ್ದ ಮಾನಸ ಸದ್ಯ ಶೋನಿಂದ ಹೊರಬಿದ್ದಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಮಾನಸ, ಬಿಗ್ ಬಾಸ್‌ಗೆ ಹೋಗುವ ಮುನ್ನ ಸಿದ್ಧತೆ ಹೇಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ಇನ್ನು ಈ ವೇಳೆಗೆ ವೇಳೆ ಪಾರು ಖ್ಯಾತಿಯ ಮೋಕ್ಷಿತಾ ಪೈ ಅವರಿಗೆ ತುಕಾಲಿ ಸಂತೋಷ್‌ ರೀತಿಯ ಗಂಡ ಬೇಕಂತೆ ಎನ್ನುವ ವಿಚಾರವನ್ನು ಮಾನಸ ಹೇಳಿದ್ದಾರೆ. ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾನಸ, ಬಿಗ್‌ ಬಾಸ್‌ ಶೋ ಆರಂಭಕ್ಕೆ ಎರಡು ದಿನ ಇರುವಾಗ ನನಗೆ ಕಾಲ್‌ ಬಂದಿದ್ದು. ಅದರ ಮಧ್ಯೆ ನಮ್ಮ ಆರೋಗ್ಯದ ಬಗ್ಗೆ ಒಂದು ರಿಪೋರ್ಟ್‌ ಕೊಡಬೇಕು. ಹೀಗಾಗಿ ಅದನ್ನು ಸಿದ್ಧ ಮಾಡುವುದರಲ್ಲೇ ಒಂದು ದಿನ ಹೋಯ್ತು ಎಂದರು.
ಅಗ್ರಿಮೆಂಟ್, ಪ್ರೋಟೋಕಾಲ್‌, ವಿಡಿಯೋ ಕಾಲ್ ಇವೆಲ್ಲಾ ಮಾತನಾಡುವಷ್ಟರಲ್ಲಿ ಎರಡನೇ ದಿನ ಕೂಡ ಹೋಯ್ತು. ಮೂರನೇ ದಿನಕ್ಕೆ ಬಿಗ್‌ ಬಾಸ್‌ ಮನೆಯಲ್ಲೇ ಇದ್ದೇನೆ. ಹೀಗಾಗಿ ಮನೆಯಲ್ಲಿದ್ದ ಬಟ್ಟೆಗಳನ್ನೇ ಹೋಗುವಾಗ ತುಂಬಿಕೊಂಡು ಹೋಗಿದ್ದೆ. ಮುಂದಿನ ವಾರದಿಂದ ಸಂತು ಬಟ್ಟೆ ಕಳುಹಿಸಲು ಶುರು ಮಾಡಿದರು. ಮೊದಲ ದಿನ ಹೋಗುವಾಗ ನನಗೆ ಅಂತಾ ನಾನು ಏನೂ ತೆಗೆದುಕೊಳ್ಳಲಿಲ್ಲ ಎಂದರು.
ಸಂತು ಹೊಸ ಹೊಸ ಬಟ್ಟೆಗಳನ್ನೇ ಕಳುಹಿಸುತ್ತಿದ್ದರು. ಸಂತು ಬಟ್ಟೆ ಚಪ್ಪಲಿ ಕಳುಹಿಸಿದಾಗ ನಾನೇ ಅಲ್ಲಿ ಬೈಯುತ್ತಿದೆ. ಬರುವ ಸಂಬಳವನ್ನೆಲ್ಲಾ ಇದಕ್ಕೆ ಖುರ್ಚು ಮಾಡುತ್ತಿದ್ದಾರೇನೋ, ಹೊರಗಡೆ ಹೋದ ಮೇಲೆ ಎಲ್ಲಾ ದುಡ್ಡು ಖಾಲಿ ಎನ್ನುತ್ತಾರೇನೋ ಎನ್ನುವ ಭಯ ಇತ್ತು. ಅಷ್ಟೊಂದು ಬಟ್ಟೆ ಕಳುಹಿಸಿದ್ದರು. ಇರುವ ಬಟ್ಟೆಗಳೇ ಸಾಕು ಅನಿಸುತ್ತಿತ್ತು. ಅದಕ್ಕೆ ಹೊರಗಡೆ ಬಂದ ಮೇಲೆ ಎಷ್ಟು ದುಡ್ಡು ಖರ್ಚು ಮಾಡಿದೆ ಅಂತಾ ಫಸ್ಟ್ ಕೇಳಿದೆ ಎಂದು ಹೇಳಿದರು.