ನನಗೆ ದಿನಕ್ಕೆ ಐದು ಬಾರಿ ಅದು ಬೇಕೇ ಬೇಕು, ಹಿರಿಯ ಸ್ಟಾರ್ ನಟಿ ಬಹಿರಂಗ ಹೇಳಿಕೆ

 

      ಬಾಲಿವುಡ್‌ನ ಎವರ್‌ಗ್ರೀನ್ ನಟಿ ಮೌಶುಮಿ ಚಟರ್ಜಿ ಅವರು ಇತ್ತೀಚೆಗೆ 'ದಿ ಕಪಿಲ್ ಶರ್ಮಾ ಶೋ'ದಲ್ಲಿ ಕಾಣಿಸಿಕೊಂಡರು ಮತ್ತು ತಮ್ಮ ತಮಾಷೆಯ ಹೇಳಿಕೆಗಳಿಂದ ಎಲ್ಲರನ್ನೂ ನಗಿಸಿದರು.

     ಇದಲ್ಲದೆ, ಅವರ ಕೆಲವು ಹೇಳಿಕೆಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಕಾರ್ಯಕ್ರಮದಲ್ಲಿ ವಿವಾಹೇತರ ಸಂಬಂಧಗಳ ಬಗ್ಗೆ ಮಾತನಾಡುತ್ತಾ, ʼನೀವು ನಿಮ್ಮ ಹೆಂಡತಿಯನ್ನು ನೋಡಿಕೊಳ್ಳಲು ಸಾಧ್ಯವಾದರೆ ಮಾತ್ರ ಇನ್ನೊಂದು ಸಂಬಂಧ ಇಟ್ಟುಕೊಳ್ಳಿ.. ಇಲ್ಲವಾದರೆ ಅಂತಹ ಕೆಲಸ ಮಾಡಬೇಡಿ. 
     ಏಕೆಂದರೆ ಮುಂದೆ ಅದು ತುಂಬಾ ಕಷ್ಟಕರವಾಗುತ್ತದೆ.ʼ ಇದನ್ನು ಕೇಳಿದ ಕಪಿಲ್ ಮತ್ತು ಪ್ರೇಕ್ಷಕರು ನಕ್ಕರು.ಮದ್ಯದ ಬಗ್ಗೆ ಮಾತನಾಡುತ್ತಾ, ʼಮದ್ಯ ಕುಡಿಯುವುದು ತಪ್ಪಲ್ಲ, ಆದರೆ ನಾವು ಅದನ್ನು ಹೇಗೆ ಕುಡಿಯುತ್ತೇವೆ ಎಂಬುದು ಮುಖ್ಯ. ಒಂದು ಲೋಟ ವೈನ್ ಅಥವಾ ವಿಸ್ಕಿ ರಕ್ತ ಪರಿಚಲನೆಗೆ ಒಳ್ಳೆಯದು. 
     ಆದರೆ ನಮ್ಮ ಸಮಸ್ಯೆ ಏನೆಂದರೆ ನಾವು ಒಂದು ಲೋಟಕ್ಕೆ ನಿಲ್ಲುವುದಿಲ್ಲ, ಐದು ಗ್ಲಾಸ್‌ ಬೇಕೆಬೇಕು ಎನ್ನುತ್ತೇವೆʼ ಅವರ ಮಾತುಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಟಿಯ ಈ ಮಾತಿಗೆ ಅಭಿಮಾನಿಗಳು..ʼಮೌಸಾಮಿ ಚಟರ್ಜಿ ಡೈಮಂಡ್..‌ʼ ʼಪಂಚ್‌ ಪೆಗ್‌ ಡೈಲಾಗ್‌ ಸೂಪರ್‌ʼ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ..