'ನಾನು ಹುಟ್ಟಿದ್ದು ಬೆಳೆದಿದ್ದು ತಮಿಳುನಾಡಲ್ಲಿ; ಮಾಧ್ಯಮದ ಮುಂದೆ ಶಿವಣ್ಣ ಗರಂ
ಕರುನಾಡ ಚಕ್ರವರ್ತಿ, ರಾಜಕುಮಾರ್ ಹಿರಿಯ ಪುತ್ರ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ಬೀಡು ಬಿಟ್ಟಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪತ್ನಿಯೊಂದಿಗೆ ಶಿವಮೊಗ್ಗ ಜಿಲ್ಲೆಯನ್ನು ಸುತ್ತಿದ್ದಾರೆ. ಅಬ್ಬರಿಸಿ ಪ್ರಚಾರ ಮಾಡುವ ಭರಾಟೆಯಲ್ಲಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಮತಯಾಚೆನೆಗೆ ಇಳಿದಿದ್ದರು. ಈ ವೇಳೆ ಮಲೆನಾಡಿನಲ್ಲಿ ತಮಿಳು ಭಾಷೆಯಲ್ಲಿ ಭಾಷಣ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡುತ್ತಿದ್ದಂತೆ, ಕನ್ನಡಿಗರ ಕಣ್ಣುಗಳು ಕೆಂಪಗಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ವಿರುದ್ಧ ಕಿಡಿಕಾರುತ್ತಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಈ ಹಿಂದೆ ಕೂಡ ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಚೆನ್ನೈನಲ್ಲಿ. ಆಕ್ಟಿಂಗ್ ಕೋರ್ಸ್ ಮಾಡಿದ್ದು ಇಲ್ಲೇ. ಚೆನ್ನೈ ಎಂದರೆ ಎಮೋಷನಲ್ ಸ್ಥಳ. ನನಗೆ ಚೆನ್ನೈ ತುಂಬಾ ಇಷ್ಟ ಎಂದು ಹೇಳಿದ್ದರು. ಈಗ ಕೂಡ ಈ ಭಾಗದಲ್ಲಿ ತಮಿಳಿನವರು ಹೆಚ್ಚು ಜನ ಇದ್ದಾರೆಂದು ಗೊತ್ತಾಯ್ತು. ನಾನು ಹುಟ್ಟಿದ್ದು ಕೂಡ ಚೆನ್ನೈನಲ್ಲಿ. ಅಲ್ಲೇ ಬೆಳೆದಿದ್ದೇನೆ. ನನ್ನ ಶಿಕ್ಷಣ ಮುಗಿದಿದ್ದು ಕೂಡ ಅಲ್ಲೇನೆ. ಡಾ. ರಾಜ್ಕುಮಾರ್ ಮಕ್ಕಳು ಹುಟ್ಟಿದ್ದು ಕೂಡ ಚೆನ್ನೈನಲ್ಲಿಯೇ ನಮಗೂ ಅಲ್ಲಿ ಮನೆ ಇತ್ತು ಭಾಷಣದಲ್ಲಿ ಹೇಳಿದ್ದಾರೆ.
ಈ ತುಣುಕು ವೈರಲ್ ಆಗುತ್ತಿದ್ದಂತೆ ಶಿವರಾಜ್‌ಕುಮಾರ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.ಈತ ಕರುನಾಡ ದೊರೆಯಲ್ಲ. ಕರುನಾಡಿಗೆ ದೊಡ್ಡ ಹೊರೆ. ಶಿವಣ್ಣ ಶಾಶ್ವತವಾಗಿ ತಮಿಳುನಾಡಿಗೆ ಹೋಗಿ ಬಿಡಲಿ. ತಮಿಳಲ್ಲಿ ಸೆಡ್ ಆಕ್ಟಿಂಗ್ ಮಾಡ್ಕೊಂಡ್ ಇರಲಿ.ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಹಾಗೇ ಇನ್ನೊಬ್ಬರು ಏನಿದು ಶಿವಣ್ಣ. ಇದು ಕರ್ನಾಟಕ. ಕನ್ನಡದಲ್ಲಿ ಮಾತಾಡಿ. ಕೇವಲ ನವೆಂಬರ್ 1ದಂದು ಮಾತ್ರ ಕನ್ನಡ ರಾಜ್ಯೋತ್ಸವ ಅಲ್ಲ. ಎಂದು ಇನ್ನೊಬ್ಬರು ಕಿಡಿಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.