ನಿಮ್ಮನ್ನ ದೇವತೆಯಂತೆ ನೋಡಿಕೊಳ್ಳುವೆ; ದ ಯವಿಟ್ಟು ನನ್ನ ಮದುವೆ ಆಗಿ ಎನ್ನುತ್ತಿರುವ ಅಭಿಮಾನಿ

 
ನಟಿ ಸಮಂತಾ ರುಥ್‌ಪ್ರಭು ಅವರ ಮಾಜಿ ಗಂಡ ನಾಗ ಚೈತನ್ಯ ಅವರು ಎರಡನೇ ಮದುವೆಯಾಗಲು ಶೋಭಿತಾ ಧೂಲಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಪ್ರಪೋಸ್ ಮಾಡಿದ ಸಾಮಾನ್ಯ ಮಧ್ಯಮ ವರ್ಗದ ಹುಡುಗನನ್ನು ಮದುವೆ ಮಾಡಿಕೊಳ್ಳಲು ನಟಿ ಸಮಂತಾ ಒಪ್ಪಿಗೆ ಸೂಚಿಸಿದ್ದಾಳೆ.
ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅವರ ಮದುವೆ ಡಿವೋರ್ಸ್ ಆಗಿ ಇಲ್ಲಿದೆ ಮೂರು ವರ್ಷಗಳು ಕಳೆದಿವೆ. ಇದೀಗ ಪುನಃ ನಾಗಚೈತನ್ಯ ಅವರು ನಟಿ ಶೋಭಿತಾ ಧೂಲಿಪಾಲ ಅವರೊಂದಿಗೆ ಆ.8ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಕೌಂಟರ್ ಕೊಡಲು ಮುಂದಾದ ನಟಿ ಸಮಂತಾ ಕೂಡ ಮಧ್ಯಮ ವರ್ಗದ ಯುವಕನನ್ನು ಮುದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
 ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಕೇವಲ ಜಿಮ್ ಅನ್ನು ತೋರಿಸಿ ಮದುವೆಯ ಪ್ರಸ್ತಾಪ ಮಾಡಿಕೊಂಡವನಿಗೆ ನಾನು ನಿನ್ನ ಮದುವೆ ಪ್ರಸ್ತಾಪಕ್ಕೆ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾಳೆ.ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಮುಖೇಶ್ ಚಿಂತಾಲ ಎನ್ನುವ ವ್ಯಕ್ತಿ ಮೂಕೇಶ್ ಎಂಬ ಖಾತೆಯ ಮೂಲಕ ವಿಡಿಯೋ ಕ್ರಿಯೇಟರ್ ಆಗಿದ್ದಾರೆ.
 ಈತನೊಬ್ಬ ಮಧ್ಯಮ ವರ್ಗದ ಹುಡುಗನಾಗಿದ್ದು, ಹಲವು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಆದರೆ, ಕಳೆದ ಮೂರು ದಿನಗಳ ಹಿಂದೆ ನಾಗ ಚೈತನ್ಯ ಅವರು ಇನ್ನೊಂದು ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಂತೆ ಸಮಂತಾಗೆ ಪ್ರಪೋಸ್ ಮಾಡಲು ವಿಡಿಯೋ ಮಾಡಿ ಟ್ಯಾಗ್ ಮಾಡಿದ್ದಾನೆ. ನೀವು ನನ್ನನ್ನು ದಯವಿಟ್ಟು ಮದುವೆ ಮಾಡಿಕೊಳ್ಳಿ ಎಂದು ಬೇಡಿಕೊಂಡಿದ್ದಾನೆ. <a href=https://youtube.com/embed/_oyLJms4mZ4?autoplay=1&mute=1><img src=https://img.youtube.com/vi/_oyLJms4mZ4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ವಿಡಿಯೋದಲ್ಲಿ ನಾನು ಸಮಂತಾಳ ಬಳಿಗೆ ಹೋಗುತ್ತಿರುವಾಗ ಅವರು ನನ್ನ ಚಿಂತಿಸುವ ಅಗತ್ಯವಿಲ್ಲ. ನಾನು ಯಾವಾಗಲೂ ಅವರೊಂದಿಗೆ ಇರುತ್ತೇನೆ. ನಾನು ಮತ್ತು ನೀವು ದೇವರು ಸೃಷ್ಟಿಸಿದ ಉತ್ತಮ ಜೋಡಿಗಳು. ನಾನು ನಿಮ್ಮನ್ನು ಮದುವೆಯಾಗಲು ಮುಕ್ತ ಮನಸ್ಸಿನಿಂದ ಸಿದ್ಧವಾಗಿದ್ದೇನೆ. ನನಗೆ ಕೇವಲ 2 ವರ್ಷ ಕೊಡಿ ಆರ್ಥಿಕವಾಗಿ ತುಂಬಾ ಸಬಲನಾಗಿ ನಿಮ್ಮ ಮುಂದೆ ಬಂದು ಮದುವೆ ಮಾಡಿಕೊಳ್ಳುತ್ತೇನೆ. 
ಅಲ್ಲಿಯವರೆಗೂ ಈ ನನ್ನ ಹೃದಯವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಪ್ಲೀಸ್.. ಪ್ಲೀಸ್.. ಪ್ಲೀಸ್.. ನನ್ನನ್ನು ಮದುವೆ ಮಾಡಿಕೊಳ್ಳಿ Please Marry me, pls Marry me Samantha ಎಂದು ಮಂಡಿಯೂರಿ, ಕೈಮುಗಿದು ಬೇಡಿಕೊಂಡಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.