ನಾನು ಅವನು ಸರಿಯಿಲ್ಲ ಇದ್ದಿದ್ರೆ ನೋಡೋಕೆ ಹೋಗ್ತಿದ್ದೆ, ಕಿಚ್ಚ ಸುದೀಪ್
Sep 12, 2024, 14:45 IST
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ವಿಚಾರಧೀನ ಕೈದಿಯಾಗಿ ಸದ್ಯ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಈಗಾಗಲೇ ಈ ಪ್ರಕರಣದ ಬಗ್ಗೆ ಸುದೀಪ್ ಒಮ್ಮೆ ಮಾತನಾಡಿದ್ದರು. ಇದೀಗ ಮತ್ತೊಮ್ಮೆ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ಈ ಕುರಿತು ಮಾತನಾಡಿರುವ ನಟ ಸುದೀಪ್, ದರ್ಶನ್ ಗೂ ಕುಟುಂಬ ಇದೆ.
ಅಭಿಮಾನಿಗಳಿಗೆ ನೋವಾಗುವುದು ಬೇಡ. ನನಗೆ ದೇಶದ ಕಾನೂನು, ಸರ್ಕಾರದ ಮೇಲೆ ನಂಬಿಕೆ ಇದೆ. ಮಾಧ್ಯಮಗಳ ಮೂಲಕ ನಮಗೆ ಎಲ್ಲಾ ವಿಚಾರ ಗೊತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.ದರ್ಶನ್ ಪ್ರಕರಣದಲ್ಲಿ ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ. ಪ್ರಕರಣದ ಬಗ್ಗೆ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ನಾನು ಏನು ಹೇಳಬೇಕೋ.. ತುಂಬಾ ಹಿಂದೆ ಹೇಳಾಗಿದೆ. ಮತ್ತೆ ಅದನ್ನೇ ಕೆದಕಿ ಮಾತಾಡಲು ಇಷ್ಟ ಪಡಲ್ಲ. ಯಾರ ಮನಸ್ಸನ್ನೂ ನೋಯಿಸಲು ಇಷ್ಟ ಪಡಲ್ಲ. ಅವರಿಗೆ ಅಂತ ಫ್ಯಾನ್ಸ್ ಊರೆಲ್ಲಾ ಇದ್ದಾರೆ. ಅವರದ್ದು ಅಂತ ಒಂದು ಕುಟುಂಬ ಇದೆ. ನಾವು ಮಾತಾಡೋದ್ರಿಂದ ಅವರಿಗೆ ನೋವಾಗೋದು ಬೇಡ. ಫ್ಯಾಮಿಲಿಗೂ ನೋವು ಕೊಡೋದು ಬೇಡ ಎಂದರು ಕಿಚ್ಚ ಸುದೀಪ್
ನಾವು ಮಾತಾಡಿಕೊಂಡು ಇದ್ದಿದ್ದರೆ ಹೋಗ್ತಾಯಿದ್ದೆ. ಮಾತಾಡ್ತಾ ಇಲ್ವಲ್ಲ?! ನಾವು ಒಳ್ಳೆಯದ್ದನ್ನ ಬಯಸ್ತೀವಿ ಎಂದ ಮಾತ್ರಕ್ಕೆ ಪ್ರತಿಯೊಂದು ನಮ್ಮದಾಗಬೇಕಿಲ್ಲ. ನಾವು ಡಿಸ್ಟೆನ್ಸ್ ಮೇನ್ಟೇನ್ ಯಾಕೆ ಮಾಡ್ತೀವಿ ಅಂದ್ರೆ.. ನಾವು ಸರಿ ಇಲ್ಲ, ಅವರು ಸರಿ ಇಲ್ಲ ಅನ್ನೋದಲ್ಲ. ನಾವಿಬ್ಬರೂ ಒಟ್ಟಿಗೆ ಸರಿ ಇಲ್ಲ. ಸೂರ್ಯ ಬೆಳಗ್ಗೆ ಬಂದರೆನೇ ಬೆಟರ್. ಚಂದ್ರ ರಾತ್ರಿ ಇದ್ದರೆನೇ ಬೆಟರ್. ಎರಡೂ ಒಟ್ಟಿಗೆ ಸೇರಿದ ದಿನ ಪ್ರಾಬ್ಲಂ ಆಗುತ್ತೆ. ಅದು ಬೇಡ. ಹಾಗಂತ ವ್ಯಕ್ತಿತ್ವದಲ್ಲಿ ತೊಂದರೆ ಇದೆ ಅಂತ ನಾನು ಹೇಳ್ತಿಲ್ಲ.
<a href=https://youtube.com/embed/AVfw4lNYNFk?autoplay=1&mute=1><img src=https://img.youtube.com/vi/AVfw4lNYNFk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಾನು ಡಿಫರೆಂಟ್ ಪರ್ಸನ್. ಅವರು ಡಿಫರೆಂಟ್ ಪರ್ಸನ್ ವಿತ್ ಡಿಫರೆಂಟ್ ಟೇಸ್ಟ್. ಹಾಗಂದ ಮಾತ್ರಕ್ಕೆ ನಾವು ಕೋ-ಎಕ್ಸಿಸ್ಟ್ ಆಗೋಕೆ ಆಗಲ್ಲ ಅಂತಲ್ಲ. ನಾಟಕೀಯವಾಗಿ ಇರೋಕೆ ನನಗೆ ಬರಲ್ಲ. ಮನಸ್ಸಿನಿಂದ ಬಂದರೆ ಖಂಡಿತ ಮಾಡ್ತೀನಿ. ಅವರಿಗೆ ಅವಮಾನ ಆದಾಗ ಎಲ್ಲರೂ ಟ್ವೀಟ್ ಮಾಡಿದರು. ನಾನು ಲೆಟರ್ ಬರೆದಿದ್ದೇನೆ. ಅದನ್ನ ಮರೆಯಬಿಡಿ. ಅದರ ಅವಶ್ಯಕತೆ ಇರಲಿಲ್ಲ. ಲೆಟರ್ ಬರೆದಿದ್ದು ಯಾರನ್ನೂ ಮೆಚ್ಚಿಸೋದಕ್ಕಲ್ಲ. ನನ್ನ ಮನಸ್ಸಿಗೆ ಬಂದಿದ್ದಕ್ಕೆ ಬರೆದೆ. ಯಾವ ಕಲಾವಿದರಿಗೂ ಹಾಗೆ ಆಗಬಾರದು ಅಂತ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.