ಸುದೀಪ್ ಜೊತೆ ದರ್ಶನ್ ಸ್ನೇಹ ಇದ್ದಿದ್ರೆ ಈ ಗತಿ‌ ಬರ್ತಾ ಇರ್ಲಿಲ್ಲ, ದರ್ಶನ್ ಫ್ಯಾನ್ಸ್

 
 ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ಈಗಾಗಲೇ ಪೊಲೀಸ್ರು ಕೇಸ್​ ಸಂಬಂಧ ಕೋರ್ಟ್​​ಗೆ ಚಾರ್ಜ್​ಶೀಟ್​ ಕೂಡ ಸಲ್ಲಿಸಿದ್ದಾರೆ. ಚಾರ್ಜ್​ಶೀಟಲ್ಲಿ ಆಘಾತಕಾರಿ ವಿಚಾರಗಳ ಬೆಳಕಿಗೆ ಬಂದಿವೆ. ಇದರ ಮಧ್ಯೆ ನಟ ದರ್ಶನ್​​​ ಮತ್ತು ಕಿಚ್ಚ ಸುದೀಪ್​ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಎಂಬ ಪ್ರಶ್ನೆಗೆ ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ದಾಸ ದರ್ಶನ್ ಮತ್ತು ಕಿಚ್ಚ ಸುದೀಪ್ ಗೆಳೆತನಕ್ಕೆ ಸಾಟಿನೇ ಇರಲಿಲ್ಲ. ಈ ಗೆಳೆಯರನ್ನ ಕುಚಿಕು ಗೆಳೆಯರು ಅಂತಾನೂ ಕರೆಯುತ್ತಿದ್ದರು. ಇನ್ನು ಇವರ ಸ್ನೇಹದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾವುದೇ ಕಾರ್ಯಕ್ರಮಗಳಿರಲಿ, ಕ್ರಿಕೆಟ್​ ಇರಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು.ಆದರೆ, ಅದ್ಯಾರ ಕಣ್ಣು ಬಿತ್ತೋ ಏನೋ? ಜೊತೆಯಾಗಿದ್ದವರ ಸ್ನೇಹ ಬಿರುಕು ಬಿಟ್ಟು ಹಲವು ವರ್ಷಗಳೇ ಕಳೆದಿವೆ. <a href=https://youtube.com/embed/OrF9wBmQ5W4?autoplay=1&mute=1><img src=https://img.youtube.com/vi/OrF9wBmQ5W4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದಕ್ಕೆ ಕಾರಣ ಏನು ಅನ್ನೋದು ಹೆಚ್ಚಿನವರಿಗೆ ಗೊತ್ತೊರಲಿಲ್ಲ. ಸಂಗೊಳ್ಳಿ ರಾಯಣ್ಣ ಸಿನಿಮಾ ಆದ್ಮೇಲೆ ಇವರ ದೋಸ್ತಿ ಮುಗಿದೆ ಹೋಯಿತು. ಅಂದಿನಿಂದ ಇಂದಿನವರೆಗೂ ಇಬ್ಬರ ನಡುವೆ ಮಾತುಕತೆಯೇ ಇರಲಿಲ್ಲ.ಆದರೆ ಇತ್ತೀಚೆಗೆ ನಡೆದ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಅವರು ದರ್ಶನ್​ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. 
ಈ ವೇಳೆ ದರ್ಶನ್​ ಮತ್ತು ಸುದೀಪ್​ ಅವರ ಆತ್ಮೀಯತೆ ಬಗ್ಗೆ ಕೇಳಿದಾಗ, ಆ ವೇಳೆ ಹೌದು, ಚೆನ್ನಾಗಿಯೇ ಇದ್ದೆವು. ಒಬ್ಬ ಫ್ರೆಂಡ್​ ಅಂದಾಗ ಎಲ್ಲವೂ ನಿಶ್ಕಳಂಕವಾಗಿರಬೇಕಾಗುತ್ತದೆ. ನಾನು ದೊಡ್ಡವನು, ನೀನು ದೊಡ್ಡವನು ಅನ್ನೋ ಮಾತು ಬರಲ್ಲ ಎಂದಿದ್ದಾರೆ.
ದರ್ಶನ್ ಸಂಘ ಕೆಟ್ಟದ್ದು. ಇನ್ನು ಅವನ ತಂಡದಲ್ಲಿ ಇರೋ ಜನರೇ ರೌಡಿ ಅಂತವರು. ಈ ಮೊದಲು ಸೃಜನ್ ಲೋಕೇಶ್ , ನೆನಪಿರಲಿ ಪ್ರೇಮ್, ಧರ್ಮ ಮೊದಲಾದವರು ಇದ್ದರು. ಆದರೆ ಬೇರೆಯವರ ಮಾತುಕೇಳಿ ದರ್ಶನ್ ಹಾಳಾಗಿ ಹೋದ. ಕೆಟ್ಟವರ ಸಹವಾಸ ದೋಷದಿಂದ ಅವನಿಂದು ಜೈಲು ಸೇರೋ ಹಗಾಗಿದೆ ಒಂದು ವೇಳೆ ಸುದೀಪ್ ಸ್ನೇಹದಲ್ಲೇ ಇದ್ದರೆ ಈ ಕೊಲೆ ಪ್ರಕರಣವೇ ಇರುತ್ತಿರಲಿಲ್ಲ ಎಂದು ಗಣೇಶ್ ಕಾಸರಗೋಡು ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.