20 ಲಕ್ಷ ಕೊಡದಿದ್ದರೆ ತುಕಾಲಿಗೆ ಜೈ.ಲು ಫಿಕ್ಸ್; ಅಪಘತಕ್ಕೆ ಕಾರಣ ಯಾರು‌ ಗೊ.ತ್ತಾ

 

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಫೈನಲಿಸ್ಟ್‌ ಮತ್ತು ಗಿಚ್ಚಿಗಿಲಿಗಿಲಿ ಶೋ ಖ್ಯಾತಿಯ ತುಕಾಲಿ ಸಂತೋಷ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬುಧವಾರ ರಾತ್ರಿ ಸಂತೋಷ್‌ ಅವರಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ತೀವ್ರ ಗಾಯಗಳಿಂದ ಆಸ್ಪತ್ರೆ ಸೇರಿದ್ದ ಚಾಲಕ  ಜಗದೀಶ್ ಸಾವನ್ನಪ್ಪಿದ್ದಾರೆ.

ಕುಣಿಗಲ್ ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯದ 44 ವರ್ಷದ ಜಗದೀಶ್‌ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಜಗದೀಶ್‌, ಬುಧವಾರ ರಾತ್ರಿ ಹೊನ್ನೆನಹಳ್ಳಿ ಬಳಿ ತುಕಾಲಿ ಸಂತೋಷ್ ಕಾರು ಹಾಗೂ ಆಟೋ ನಡುವೆ ಅಪಘಾತ ನಡೆದಿತ್ತು ಅಪಘಾತದಲ್ಲಿ ಆಟೋಚಾಲಕ ಜಗದೀಶ್‌ಗೆ ತೀವ್ರ ಗಾಯಗಳಾಗಿದ್ದವು.

ಕೂಡಲೇ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗುರುವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಆಟೋಚಾಲಕ ಜಗದೀಶ್ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ವೇಳೆ ಆಟೋಚಾಲಕ ಜಗದೀಶ್ ಮದ್ಯಪಾನ ಮಾಡಿದ್ದ ಎಂದು ಹೇಳಲಾಗ್ತಿತ್ತು. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇನ್ನು ಮೃತ ಜಗದೀಶ್ ಪತ್ನಿ ತುಕಾಲಿ ಸಂತೋಷ ಅವರಬಳಿ ಗಂಡನ ಸಾವಿಗೆ ಪರಿಹಾರವಾಗಿ 20 ಲಕ್ಷ ರೂಪಾಯಿ ಕೇಳಿದ್ದಾಳೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಬಿಗ್ಬಾಸ್ ಮನೆಯಿಂದ ಬಂದ ಹಣದಲ್ಲಿ ಕಾರ್ ಕೊಂಡಿದ್ದು ಇತ್ತೀಚೆಗಷ್ಟೇ ಅಂದರೆ, ಮಾರ್ಚ್‌ ಮೊದಲ ವಾರದಲ್ಲಿಯೇ ಕಿಯಾ ಕಂಪನಿಯ ಹೊಸ ಕಾರನ್ನು ಖರೀದಿಸಿದ್ದರು ತುಕಾಲಿ ಸಂತೋಷ್‌. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು, ಕನಸೊಂದು ನನಸಾಗಿದೆ ಎಂದು ಬರೆದಿಕೊಂಡಿದ್ದರು. 

ಈದೀಗ ಈ ಘಟನೆ ಸಂಭವಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.