ಕನ್ನಡದ ಧಾರಾವಾಹಿಗಳಲ್ಲಿ ದೊಡ್ಡ ಮೋಸಗಾರರೆ ಇರೋದು, ಸರಿಯಾದ ಸಂಬಳ ಕೊಡದೆ ಕಾಯಿಸುತ್ತಾರೆ; ರಾಜೇಶ್ ಧ್ರುವ
Jul 16, 2025, 08:25 IST
ನಟ ರಾಜೇಶ್ ಧ್ರುವ ಕನ್ನಡದಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು, ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ.ಅಖಿಲ್ ಆಗಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಾಜೇಶ್ ಧ್ರುವ ಅವರು, ಬಣ್ಣದ ಬದುಕಿನಲ್ಲಿ ಯಶಸ್ವಿ ಹತ್ತು ವರ್ಷ ಪೂರೈಸಿದ್ದಾರೆ.
<a href=https://youtube.com/embed/vj_VeXxTyw0?autoplay=1&mute=1><img src=https://img.youtube.com/vi/vj_VeXxTyw0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೀರೊ ನಂ 1 ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ಮೊದಲ ಬಾರಿ ಬಣ್ಣ ಹಚ್ಚಿದ್ದು ಬದುಕು ಧಾರಾವಾಹಿಯಲ್ಲಿನ ಪಾತ್ರಕ್ಕಾಗಿ. ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್ ಅಲ್ಲಿ 2 ಹೀರೋ ಆಗಿ ಮಿಂಚುತ್ತಿರೋ ಇವರು ಕಿರುತೆರೆಯ ಲೋಕದ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈಗೀಗ ಕೆಲ ಪ್ರೊಡಕ್ಷನ್ ಹೌಸ್‌ನಲ್ಲಿ ಈಗ ಪೇಮೆಂಟ್ ಕೂಡ ತುಂಬಾ ಕಷ್ಟ ಆಗಿದೆ.
ಕಮಿಟ್ ಆಗಬೇಕಾದರೆ ಅವರ ಅಗ್ರಿಮೆಂಟ್‌ಗಳನ್ನು ನಾವು ಸೈನ್ ಮಾಡಿಕೊಂಡು ಹೋಗಬೇಕು. ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ನಿಮ್ಮ ಪೇಮೆಂಟ್ ಬರುತ್ತದೆ. ಜನವರಿಯಲ್ಲಿ ನಾವು ಶೂಟಿಂಗ್ ಮಾಡಿದ್ರೆ ಆ ಪೇಮೆಂಟ್ ಮಾರ್ಚ್ ಕೊನೆಯಲ್ಲಿ ಬರುತ್ತೆ. ನಾಯಕ ನಟರಾಗಿದ್ದವರು ಮಾತ್ರ ಸೀರಿಯಲ್‌ನಿಂದ ದುಡ್ಡು ಮಾಡೋಕೆ ಸಾಧ್ಯ ಅನ್ನೋದು ನನ್ನ ಅಭಿಪ್ರಾಯ ಎಂದು ರಾಜೇಶ್ ಧ್ರುವ ಬೇಸರ ವ್ಯಕ್ತಪಡಿಸಿದ್ದಾರೆ .