ಮಾಧ್ಯಮದ ಮುಂದೆ ಉಗಿದ ಇಂದ್ರಜಿತ್ ಲಂಕೇಶ್; ' ಇದೆಲ್ಲಾ ಬೇಕಿತ್ತಾ'

 

ನಟ ದರ್ಶನ್​ ವಿರುದ್ಧದ ಕೂಲೆ ಆರೋಪ ಪ್ರಕರಣದ ತನಿಖೆ ನಡೆಯುತ್ತಿದೆ. ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಇಂತಹ ಸಮಯದಲ್ಲಿ ನಾನು ಕಾಮೆಂಟ್ ಮಾಡಿದರೆ ತಪ್ಪಾಗುತ್ತದೆ ಎಂದು ​ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹೇಳಿದರು. ನಗರದ ಪ್ರೆಸ್​ ಟ್ರಸ್ಟ್​ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ಕ್ಷಣಕ್ಷಣದ ವರದಿಯನ್ನು ನಾನೊಬ್ಬ ವೀಕ್ಷಕನಾಗಿ ನೋಡುತ್ತಿದ್ದೇನೆ ಎಂದರ.

ಇದೇ ವೇಳೆ, 'ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಯವರ ದು:ಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ' ಎಂದು ಬಸವಣ್ಣನವರ ವಚನ ಹೇಳುವ ಮೂಲಕ ಮಾರ್ಮಿಕವಾಗಿ ಉತ್ತರಿಸಿದರು. ಬಳಿಕ, ಈಗ ದರ್ಶನ್​ ವಿಚಾರ ಬೇಡ. ನಮ್ಮ ಅಕ್ಕ ಗೌರಿ ಬಗ್ಗೆ ಮಾತನಾಡೋಣ. ಗೌರಿ ಸಿನಿಮಾ, ಲಂಕೇಶ್​, ಕುವೆಂಪು ಅವರ ಬಗ್ಗೆ ಮಾತನಾಡೋಣ ಎಂದು ಹೇಳಿದರು. <a href=https://youtube.com/embed/qAJQ-0k6gr4?autoplay=1&mute=1><img src=https://img.youtube.com/vi/qAJQ-0k6gr4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ನನ್ನ ಮಗ ಸಮರ್ಜಿತ್​ಗಾಗಿ, ನನ್ನ ಅಕ್ಕ ಗೌರಿ ಅವರ ನೆನಪಿಗಾಗಿ ಸಿನಿಮಾಗೆ ಗೌರಿ ಎಂದು ಹೆಸರಿಟ್ಟಿದ್ದೇನೆ. ನಾಯಕಿಯಾಗಿ ಸಾನ್ಯಾ ಅಯ್ಯರ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ 7 ಜನ ಸಂಗೀತ ನಿರ್ದೇಶಕರಿದ್ದಾರೆ. ನಮ್ಮ ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಹೊಸದಾಗಿ ಚಿತ್ರತಂಗಕ್ಕೆ ಬರುವ ನಟ-ನಟಿಯರು ಒಂದೆರಡು ಚಿತ್ರ ಸಕ್ಸಸ್ ಆದ ತಕ್ಷಣ ಆಕಾಶದಲ್ಲಿ ಹಾರಾಡದೆ, ನಿರ್ದೇಶಕರು ಹೇಳಿದಂತೆ ನಡೆದುಕೊಂಡರೆ ಚೆನ್ನಾಗಿರುತ್ತದೆ ಎಂದು ವಿನಂತಿಸಿದರು.

ಈ ಹಿಂದೆ ಕೂಡ ನಿರ್ಮಾಪಕ ಸಂದೇಶ್​ ಅವರ ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿರುವ ಸಿಬ್ಬಂದಿ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಆರೋಪ ಮಾಡಿದ್ದರು. ಹಾಗಾಗಿ ಈಗ ಕೂಡ ನನಗೆ ಯಾರ ಮೇಲೂ ದ್ವೇಷ ಇಲ್ಲ. ಸಾರ್ವಜನಿಕರಿಗೆ ಅನ್ಯಾಯ ಆಗಬಾರದು ಎನ್ನುವುದು ನನ್ನ ಉದ್ದೇಶ. ಇತ್ತೀಚೆಗೆ ಹಲವಾರು ಘಟನೆ ನಡೀತಾನೆ ಇದೆ. 

ಬಡವರಿಗೆ ಅನ್ಯಾಯ ಆಗ್ತಿದೆ. ಈ ದೃಷ್ಟಿಯಿಂದ ನಾನು ಮುಂದೆ ಬಂದಿದೀನಿ. ತಪ್ಪಾದಾಗ ತಪ್ಪು ಎಂದಿದೀನಿ. ನನ್ನನ್ನು ಯಾರೂ ಎತ್ತಿ ಕಟ್ಟಿಲ್ಲ. ತಪ್ಪು ಮಾಡಿದ ಸೆಲೆಬ್ರಿಟಿಗಳು ತಪ್ಪಿಸಿಕೊಳ್ಳಬಾರದು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.