'Instagram ನಲ್ಲಿ ಮೈಕುಣಿಸಿ 5 ಕೋಟಿ ಬೆಲೆಯ Lamborghini ಕಾರು ಖರೀದಿ ಮಾಡಿದ ಜೋಡಿ' ಇದಲ್ಲವೇ ಸಾಧನೆ
ರೀಲ್ಸ್ ಮಾಡಿ ಕೂಡ ಕೋಟ್ಯಾಧಿಪತಿ ಆಗ್ಬಹುದು ಹೌದು ಲಕ್ಷುರಿ ಕಾರುಗಳು ಎಂದ ಕೂಡಲೇ ನಮಗೆ ನೆನಪಾಗುವುದು ಲ್ಯಾಂಬೋರ್ಗಿನಿ. ಸ್ಪೋರ್ಟಿ, ಅಗ್ರೆಸಿವ್ ಡಿಸೈನ್ ಮತ್ತು ಬೆಂಕಿಯಂತಹ ಪರ್ಫಾಮೆನ್ಸ್‌ಗಳಿಂದ ನೋಡುಗರನ್ನು ಮೊದಲ ನೋಟದಲ್ಲಿಯೇ ಆಕರ್ಷಿಸುತ್ತದೆ. ಪ್ರತಿಯೊಬ್ಬರಿಗೂ ಸೂಪರ್ ಕಾರು ಕೊಳ್ಳುವುದಾದರೆ ಅದೊದು ಲ್ಯಾಂಬೋರ್ಗಿನಿ ಆಗಿರಬೇಕು ಎಂಬ ಕನಸಿರುತ್ತದೆ. ಕೆಲವರ ಆ ಕನಸು ನನಸಾಗುತ್ತದೆ. ಕೆಲವರದು ಹಾಗೇ ಉಳಿಯುತ್ತದೆ.
ಕನಸಿನ ಲ್ಯಾಂಬೋರ್ಗಿನಿ ಕಾರನ್ನು ತಮ್ಮದಾಗಿಸಿಕೊಂಡ ಸಾಮಾಜಿಕ ಜಾಲತಾಣ ಸೆಲೆಬ್ರಿಟಿಯ ಕುರಿತಾಗಿ ನೋಡಲಿದ್ದೇವೆ. ಲ್ಯಾಂಬೋರ್ಗಿನಿ ಉರುಸ್ ಪರ್ಫಾಮಂತೆ ಕಾರನ್ನು ಇವರು ತಮ್ಮದಾಗಿಸಿಕೊಂಡಿದ್ದು ೨೦೨೨ ರಲ್ಲಿ ಲ್ಯಾಂಬೋರ್ಗಿನಿ ತನ್ನ ಪ್ರಸಿದ್ದ ಎಸ್‌ಯುವಿ ಮಾಡೆಲ್ ಆದ ಉರುಸ್‌ನ ಪರ್ಫಾಮಂತೆ ಎಂಬ ವೇರಿಯೆಂಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಈ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೌದು, ಗಂಡ ಹೆಂಡತಿಯಾಗಿರುವ ಈ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಪ್ರಸಿದ್ದರಾಗಿದ್ದರು. ಇವರನ್ನು ಕೃತಿ ಸಿಂಗ್ ರಹೇಜಾ ಮತ್ತು ಅವರ ಗಂಡ ರೋಹಿತ್ ರಹೇಜಾ ಎಂದು ಗುರುತಿಸಲಾಗಿದ್ದು, ಇಬ್ಬರೂ ಸಹ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಪ್ರಸಿದ್ದರಾಗಿದ್ದಾರೆ. ಲೈಫ್‌ಸ್ಟೈಲ್ ಮತ್ತು ಫ್ಯಾಷನ್ ಕುರಿತಾದ ವಿಷಯಗಳನ್ನು ಬಳಸಿಕೊಂಡು ವಿಡಿಯೋಗಳನ್ನು ಮಾಡಿ ಜನರ ಮನ ಗೆದ್ದಿದ್ದಾರೆ. ಜನರ ಬೆಂಬಲದೊಂದಿಗೆ ಅತ್ಯಂತ ದುಬಾರಿ ಐಷಾರಾಮಿ ಎಸ್‌ಯುವಿ ಒಂದನ್ನು ತಮ್ಮ ಮನೆಗೆ ತಂದಿದ್ದಾರೆ.
ಇವರು ಕೊಂಡಿರುವ ಈ ಉರುಸ್ ಪರ್ಫಾಮಂತೆ ವಿಯೋಲಾ ಪಾಸಿಫೆ ಬಗ್ಗೆ ಹೇಳುವುದಾದರೆ ಪರ್ಫಾಮಂತೆ ಎಂಬುವುದು ಲ್ಯಾಂಬೋರ್ಗಿನಿ ತನ್ನ ಕಾರುಗಳ ಪವರ್‌ಫುಲ್ ಮಾದರಿಗೆ ಇಎಉವಂತಹ ಹೆಸರು. 2022 ರಲ್ಲಿ ಅವರು ಈ ಉರುಸ್ ಎಸ್‌ಯುವಿಯ ಪರ್ಫಾಮಂತೆ ಮಾದರಿಯನ್ನು ಭಾರತದಲ್ಲಿ ಲಾಂಚ್ ಮಾಡಿದ್ದರು. ಈ ಕಾರಿನ ಬೆಲೆ ಆರಂಭವಾಗುವುದೇ 4.22 ಕೋಟಿ ರೂಪಾಯಿಗಳಿಂದ .
1980ರಲ್ಲೊ Rambo Lambo LM 002 ಎಂಬ ಹೆಸರಿನ ಎಸ್‍ಯುವಿಯೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿತು. ನಂತರದಲ್ಲಿ ಲ್ಯಾಂಬೊರ್ಗಿನಿ ಸಾಲು ಸಾಲು ಸೂಪರ್ ಕಾರುಗಳು ಬಿಡುಗಡೆಗೊಂಡಿತು. ಅವುಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತು. ನಂತರ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯು ಹೊಸ ದಾಖಲೆಗಳನ್ನು ಸೃಷ್ಟಿಸಿತು. ಈ ಉರುಸ್ ಎಸ್‍ಯುವಿ ಕನ್ನಡ ಚಲಚಿತ್ರ ಸೆಲಬ್ರಿಟುಗಳು ಸೇರಿದಂತೆ ಹಲವು ಸೆಲಬ್ರಿಟಿಗಳ ಮೆಚ್ಚಿನ ಕಾರ್ ಆಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.