ಇರ್ಫಾನ್ ಪಠಾಣ್ ಮಾಡಿದ ಕೆಲಸಕ್ಕೆ 9 ವರ್ಷದಿಂದ ಬೇರೆ ಗಂಡಸರ ಜೊತೆ ಮ ಲಗಿಲ್ಲ

 

ವರ್ಷಧಾರೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಎಲ್ಲರ ಮನಕದ್ದ ಚಲುವೆ ಪಾಯಲ್ ಘೋಷ್. ಹೌದು ವರ್ಷಧಾರೆ.. ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದ ಸಿನಿಮಾ. 2010ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದವರು ಪಾಯಲ್ ಘೋಷ್.

ತೆಲುಗಿನಲ್ಲಿ ಒಂದೆರಡು ಹಿಂದಿಯಲ್ಲಿ ಒಂದ್ಮೂರು ಸಿನಿಮಾವನ್ನೂ ಮಾಡಿರುವ ಕೋಲ್ಕತ್ತಾ ಮೂಲದ ಈ ಪಾಯಲ್ ಘೋಷ್‌ಗೆ ಒಂದು ರೀತಿಯ ಪ್ರಚಾರದ ಹುಚ್ಚು. ಕುಂತರೂ ನಿಂತರೂ ಸದಾ ಸುದ್ದಿಯಲ್ಲಿರಬೇಕು ಎಂಬ ಹಂಬಲ. ಇದಕ್ಕೆ ಸಾಕ್ಷಿ ಅನ್ನುವಂತೆ 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಬಾಲಿವುಡ್‌ನ ನಿರ್ದೇಶಕ ಅನುರಾಗ್ ಕಶ್ಯಪ್ ಅನು ದಿನ ಅನು ಕ್ಷಣ ಕೆಂಡ ಕಾರುತ್ತಿದ್ದ ಸಮಯದಲ್ಲಿ ಅದೆಲ್ಲಿಂದಾನೋ ಧುತ್ತೆಂದು ಬಂದ ಪಾಯಲ್ ಘೋಷ್ ನೇರಾನೇರವಾಗಿ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರು.

ಆ ನಂತರ ರಿಚಾ ಚಡ್ಡಾ ಮತ್ತು ಅನುರಾಗ್ ಕಶ್ಯಪ್ ನಡುವೆ ಸಂಬಂಧ ಇದೆ ಅಂದರು. ಆದರೆ.. ಇವೆರಡು ಪ್ರಕರಣದಿಂದ ಪಾಯಲ್ ಹೆಸರು ಚಾಲ್ತಿಗೆ ಬಂದು ಕೆಲ ದಿನ ಇವರು ಸುದ್ದಿಯಾದರೆ ಹೊರತು ಬೇರೇನೂ ಆಗಲಿಲ್ಲ. ಬದಲಿಗೆ ಮುಂಬೈ ಹೈ ಕೋರ್ಟ್‌ನಲ್ಲಿ ರಿಚಾ ಚಡ್ಡಾ ಬೇಷರತ್ತ್ ಕ್ಷಮೆಯಾಚಿಸಬೇಕಾಯಿತು. ಅನುರಾಗ್ ಕಶ್ಯಪ್ ವಿರುದ್ಧ ಮಾಡಿದ್ದ ಆರೋಪ ಕೂಡ ಸಾಬೀತು ಆಗಲಿಲ್ಲ. 

ಆದರೆ ಈ ಆರೋಪದ ನಂತರ, ರಾಮದಾಸ್ ಅಟಾವ್ಲೆ ಅವರ ರಾಜಕೀಯದ ಪಕ್ಷವನ್ನು ಪಾಯಲ್ ಘೋಷ್ ಸೇರಿಕೊಂಡರು. ಈ ಕಡೆ ಅನುರಾಗ್ ಕಶ್ಯಪ್ ಕೇಂದ್ರ ಸರ್ಕಾರವನ್ನ ಠೀಕಿಸುವುದನ್ನೇ ನಿಲ್ಲಿಸಿದರು ಅನ್ನುವುದು ಬೇರೆ ವಿಚಾರ.

ಇಂಥ ಪಾಯಲ್ ಘೋಷ್ ಈಗ ನಾನು ಕಳೆದ 09 ವರ್ಷಗಳಿಂದ ಹುಡುಗರ ಜೊತೆ ನಾನು ಹಾಸಿಗೆ ಹಂಚಿಕೊಂಡಿಲ್ಲ ಅಂದಿದ್ದಾರೆ. ಭಾರತದ ಮಾಜಿ ಕ್ರಿಕೆಟ್ ಪ್ಲೇಯರ್ ಇರ್ಫಾನ್ ಪಠಾಣ್ ಅವರ ಜೊತೆ ಮಲಗಿ ಎದ್ದಿದ್ದೇ ಕೊನೆ ಬೇರೆ ಪುರುಷರ ಜೊತೆ ದೈಹಿಕ ಸಂಪರ್ಕವನ್ನ ಬೆಳೆಸಿಲ್ಲ ಎಂದಿದ್ದಾರೆ. ಈ ಮೂಲಕ ಹೆಚ್ಚು ಕಡಿಮೆ ಒಂದೂವರೆ ವರ್ಷದಿಂದ ಕಾಣೆಯಾಗಿದ್ದ ಪಾಯಲ್ ಘೋಷ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.