ಅರ್ಜುನನ್ನು ಕಾಪಾಡಿದ ಈಶ್ವರ್ ಮಲ್ಪೆ ಕುಟುಂಬ ಚಿಂತಾಜನಕ; ಬೆ ಚ್ಚಿಬಿದ್ದ ಕನ್ನಡಿಗರು
Oct 10, 2024, 17:05 IST
ಕಡು ಬಡತನ, ವೈಯಕ್ತಿಕ ಬದುಕಿನ ನೋವನ್ನು ಮೆಟ್ಟಿ ನಿಂತ ಈ ಈಶ್ವರ, ತನ್ನ ಪ್ರಾಣವನ್ನೂ ಲೆಕ್ಕಿಸದೆ ನೀರಲ್ಲಿ ಮುಳುಗಿದ 35 ಮಂದಿಯನ್ನು ರಕ್ಷಿಸಿದ್ದಾರೆ. 280 ಮೃತದೇಹಗಳನ್ನು ನೀರಿನ ಅಡಿಯಿಂದ ತೆಗೆದು ಮೋಕ್ಷದ ಹಾದಿ ತೋರಿಸಿದ್ದಾರೆ.ಮಲ್ಪೆ ಬಲರಾಮ ನಗರದ ಸಮಾಜ ಸೇವಕ ಈಶ್ವರ ಮಲ್ಪೆ ಹಗಲು ಮಾತ್ರವಲ್ಲ ಮಧ್ಯ ರಾತ್ರಿಯಲ್ಲೂ ಕರೆ ಬಂದರೆ ನಿದ್ರೆಯಷ್ಟೇ ಏಕೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ಸಂಕಷ್ಟಕ್ಕೀಡಾದವರ ಮನೆ ಮಗನಂತೆ ನೆರವಿಗೆ ಧಾವಿಸುತ್ತಾರೆ.
ಮಲ್ಪೆ ಬೀಚ್, ಮಲ್ಪೆ ಬಂದರಿನೊಳಗಡೆ ಮಾತ್ರವಲ್ಲ ಕಳಸ, ಶೃಂಗೇರಿ, ಬೀರೂರು, ಶಿವಮೊಗ್ಗ, ಯಗಟಿ ಡ್ಯಾಂ, ತುಮಕೂರಿಗೂ ತೆರಳುವ ಈಶ್ವರ್‌ಗೆ ಅಗ್ನಿ ಶಾಮಕ ಇಲಾಖೆ, ಪೊಲೀಸ್ ಇಲಾಖೆ, ಕೋಸ್ಟ್ ಗಾರ್ಡ್‌ನಿಂದ ಮೊದಲ ಕರೆ ಬರುತ್ತದೆ.
ಆಕ್ಸಿಜನ್ ನೆರವಿಲ್ಲದೆ 40 ಅಡಿ ಆಳಕ್ಕೆ, ಸ್ಕೂಬಾ ಆಕ್ಸಿಜನ್ ಅಳವಡಿಸಿ 85 ಅಡಿ ಆಳಕ್ಕಿಳಿದು ಮುಳುಗಿದವರನ್ನು ಮೇಲಕ್ಕೆತ್ತಿದ್ದಾರೆ. ದೈವ, ದೇವರ ಆಶೀರ್ವಾದ ಹಾಗೂ ಪುಣ್ಯದ ಕೆಲಸ ಮಾಡಿದ್ದಕ್ಕೆ ಜನರ ಹಾರೈಕೆಯೇ ನನ್ನ ಶಕ್ತಿ, ಸಾಮರ್ಥ್ಯವೆನ್ನುವ ಈಶ್ವರ್, ನೀರಿಗಿಳಿವ ಮೊದಲು ಬಲರಾಮನನ್ನು ನೆನೆಯುತ್ತಾರೆ.
<a href=https://youtube.com/embed/cvJxldaPBPk?autoplay=1&mute=1><img src=https://img.youtube.com/vi/cvJxldaPBPk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
15ನೇ ವಯಸ್ಸಿಗೆ ಮಲ್ಪೆ ಕಡಲಿನಿಂದ ಗೆಳೆಯರೊಂದಿಗೆ ಸೈಂಟ್ ಮೇರೀಸ್ ದ್ವೀಪಕ್ಕೆ ಈಜಿನಲ್ಲಿ ತೊಡಗಿ ಪಳಗಿದರು. ಟ್ಯಾಂಕರ್ ಮೂಲಕ ಮೀನುಗಾರಿಕೆಗೆ ತೆರಳುವ ಬೋಟುಗಳಿಗೆ ನೀರು ತುಂಬುವ ಈಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಸತ್ಯದ ತುಳುವೆರ್ ಸಂಘಟನೆ ನೀಡಿದ ಆ್ಯಂಬುಲೆನ್ಸ್ ಮುನ್ನಡೆಸುತ್ತಿದ್ದಾರೆ.
ಊರಿಗೆ ಉಪಕಾರಿಯಾದ ಇವರಿಗೆ ಮೂರೂ ಮಕ್ಕಳು ದಿವ್ಯಾಂಗರಾಗಿದ್ದು, 23 ವರ್ಷದ ನಿರಂಜನ್ ಇತ್ತೀಚೆಗೆ ಅಗಲಿದ್ದರೆ, ಕಾರ್ತಿಕ್ ,ಬ್ರಾಹ್ಮಿಯನ್ನು ಮಡದಿ ನೋಡಿಕೊಳ್ಳುತ್ತಿದ್ದಾರೆ. ಅಮ್ಮ ಕೂಡಾ ಜತೆಗಿದ್ದಾರೆ.
ಹೊರಗಿಂದ ಮನೆಗೆ ಬಂದ ಬಳಿಕ ಮಕ್ಕಳನ್ನೂ ನೋಡಿಕೊಳ್ಳುವ ಈಶ್ವರ್ ಪತ್ನಿಗೆ ತವರು ಸಹಿತ ನೆಂಟರು, ಅನ್ಯರ ಮನೆಗೆ ಹೋಗಲಾಗದಷ್ಟು ಮಕ್ಕಳ ಜವಾಬ್ದಾರಿಯಿದೆ. ಬಡತನ ತಾಂಡವವಾಡುತ್ತಿದೆ. ನೂರಾರು ಮನೆಯ ಜನರ ಮನೆ ದೀಪ ಬೆಳಗುವ ಇವರಿಗೆ ಸರ್ಕಾರದ ಸಹಾಯ ಹಸ್ತ ಚಾಚಲಿ ಎನ್ನುವುದು ಎಲ್ಲರ ಆಶಯ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.