ವರ್ಷದಲ್ಲಿ 10 ದಿನ ಗಂಡನ‌ ಜೊತೆ ಇರೋದೇ ಹೆಚ್ಚು; ಸಂಸಾರದ ಗುಟ್ಟು ರಟ್ಟು ಮಾಡಿದ ಛಾಯಾ ಸಿಂಗ್​

 
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ವಿಭಿನ್ನ ಕಥಾಹಂದರ ಹೊಂದಿದ್ದು, ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿದೆ. ಈ ಚಿತ್ರದ ಕಥಾನಾಯಕಿ ಭೂಮಿಕಾ ಹಾಗೂ ಆಕೆಯ ಸುತ್ತ ಸುತ್ತಿರುವ ಮದುವೆಯ ಕಥೆ ಬಲು ರೋಚಕವಾಗಿದೆ. ಅಂದಹಾಗೆ ಬಹುತೇಕರಿಗೆ ತಿಳಿದಿರುವಂತೆ ನಟಿ ಛಾಯಾ ಸಿಂಗ್​ ಸ್ಯಾಂಡಲ್‌ವುಡ್​ ನಟಿ. 
ಮೊನ್ನೆಯಷ್ಟೇ ಇವರ ನಟನೆಗೆ ಭೈರತಿ ರಣಗಲ್​ ಚಿತ್ರ ಭರ್ಜರಿಯಾಗಿ ಓಡುತ್ತಿದೆ. 2000ರಲ್ಲಿ ತೆರೆಕಂಡ ಮುನ್ನುಡಿ ಅವರ ಮೊದಲ ಸಿನಿಮಾ. ವಿಶೇಷವೆಂದರೆ, ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಪ್ರಾರಂಭದ ಮೂರು ವರ್ಷ ಕನ್ನಡದಲ್ಲೇ ಗುರುತಿಸಿಕೊಂಡಿದ್ದ ಅವರು, ಆನಂತರ ತಮಿಳಿಗೆ ಕಾಲಿಟ್ಟರು. ನಂತರ ಮಲಯಾಳಂ, ತೆಲುಗು, ಬೆಂಗಾಲಿ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ.  ಒಟ್ಟೂ 38 ಚಿತ್ರಗಳಲ್ಲಿ ನಟಿಸಿರುವುದಾಗಿ ನಟಿ ತಿಳಿಸಿದ್ದಾರೆ. 
ಇನ್ನು ಮದುವೆಯಾದ ಬಳಿಕ ತಮ್ಮ 20 ವರ್ಷಗಳ ಬಣ್ಣದ ಲೋಕಕ್ಕೆ ಸ್ವಲ್ಪ ಬ್ರೇಕ್​ ಕೊಟ್ಟಿದ್ದರು. ಈಗ ಪುನಃ ಅಮೃತಧಾರೆ ಮೂಲಕ  ಕಿರುತೆರೆಗೆ ಮರಳಿದ್ದಾರೆ.ಇದೀಗ ಇವರು ಕಲಾಮಾಧ್ಯಮ ಯೂಟ್ಯೂಬ್​ ಚಾನೆಲ್​ ಜೊತೆ ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ತೆರೆದಿಟ್ಟಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ತಮ್ಮ ಮತ್ತು ಪತಿ ಕೃಷ್ಣ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಕೃಷ್ಣ ಅವರು ಛಾಯಾ ಅವರಿಗೆ ಪರಿಚಯವಾದದ್ದು ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.
ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. ಆನಂದಪುರತು ವೀಡ್ ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ  ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ  ನಟಿಸಿದ್ದಾರೆ.  ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ ಅವರು ನೆಗೆಟಿವ್ ಪಾತ್ರ ಮಾಡಿದ್ದರು.
2012ರಲ್ಲಿ ಇವರ ಮದುವೆಯಾಗಿದ್ದು, 12 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಇವರ ಮದುವೆಯ ಸ್ಟೋರಿಯೂ ಚೆನ್ನಾಗಿದೆ. ಕೃಷ್ಣ ಮತ್ತು ನಮ್ಮಮ್ಮ ಮಾತನಾಡಿಕೊಳ್ತಿದ್ರು. ನನಗೆ ಗೊತ್ತೇ ಇರಲಿಲ್ಲ. ಅದೊಂದು ದಿನ ಕೃಷ್ಣ ಅವರೇ ನನ್ನ ಅಮ್ಮನ ಬಳಿ ಬಂದು ನಿಮ್ಮ ಹುಡುಗಿಯನ್ನು ಇಷ್ಟಪಟ್ಟಿದ್ದೇನೆ, ಮದ್ವೆಯಾಗ್ತೇನೆ ಎಂದ್ರು. ಅಮ್ಮ ಓಕೆ ಅಂದುಬಿಟ್ರು. ನನಗೆ ಏನು ಆಗ್ತಿದೆ ಎಂದೇ ನಿಜಕ್ಕೂ ಗೊತ್ತಿರಲಿಲ್ಲ. 
ಹೀಗೆ ನಮಗೆ ಮದ್ವೆಯಾಯ್ತು. ಆದರೆ ಕೃಷ್ಣ ಇರುವುದು ಚೆನ್ನೈನಲ್ಲಿ, ಛಾಯಾ ಇರುವುದು ಬೆಂಗಳೂರಿನಲ್ಲಿ. ಇಬ್ಬರೂ ಶೂಟಿಂಗ್​ನಲ್ಲಿ ಬಿಜಿ. ಇದೇ ಕಾರಣಕ್ಕೆ ವರ್ಷದಲ್ಲಿ 10 ದಿನ ಕೂಡ ಒಟ್ಟಿಗೇ ಇರುವುದು ಕಷ್ಟವಾಗುತ್ತಿದೆ ಎಂದು ಸಂದರ್ಶನದಲ್ಲಿ ನೋವು ತೋಡಿಕೊಂಡಿದ್ದಾರೆ ಛಾಯಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.