ಆ ಕೆಲಸ ಮಾಡಲು ಒತ್ತಾಯ ಮಾಡಿದ್ದು ಯುವನೇ; ನಾನು ಬೇಡ ಅಂದರು ಬಿಡಲಿಲ್ಲ

 

ಚಂದನ್ ಶೆಟ್ಟಿ - ನಿವೇದಿತಾ ಗೌಡ ವಿಚ್ಛೇದನದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಡಿವೋರ್ಸ್ ಕೇಸ್‌ ಸಾಕಷ್ಟು ಸದ್ದು ಮಾಡುತ್ತಿದೆ. ಡಾ ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜ್‌ ಕುಮಾರ್‌ ಕುಟುಂಬದ ವಿರುದ್ಧ ಶ್ರೀದೇವಿ ತಂದೆ ಭೈರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಯುವ ರಾಜ್​ಕುಮಾರ್​ ವಿಚ್ಛೇದನದ ಕುರಿತು ಯುವ ಪತ್ನಿ ಶ್ರೀದೇವಿ ತಂದೆ ಭೈರಪ್ಪ ಅವರು ಮಾತನಾಡಿ, ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ. ನನ್ನ ಮಗಳು ನವೆಂಬರ್​ನಲ್ಲಿ ಅಮೆರಿಕದಿಂದ ಬಂದಾಗ ಅವರು ಗಲಾಟೆ ಮಾಡಿದ್ದಾರೆ. ಅವರ ಟಾರ್ಚರ್​ಗೆ ಹೆದರಿಕೊಂಡು ನನ್ನ ಮಗಳು ಆಸ್ಪತ್ರೆಗೆ ದಾಖಲಾಗಿದ್ದಳು. ಈಗಲೂ ಅವಳು ಅಲ್ಲಿ ಇರುವುದು ನನಗೆ ಇಷ್ಟ ಇಲ್ಲ ಎಂದು ಶ್ರೀದೇವಿ ತಂದೆ ಭೈರಪ್ಪ ಹೇಳಿದ್ದಾರೆ. <a href=https://youtube.com/embed/Y5mkZIve2oo?autoplay=1&mute=1><img src=https://img.youtube.com/vi/Y5mkZIve2oo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">


ಅವರು ದೊಡ್ಮನೆ ಅಂತ ಹೇಳಿಕೊಳ್ಳಬಾರದು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ನನ್ನ ಮಗಳು ನವೆಂಬರ್​ನಲ್ಲಿ ಅಮೆರಿಕದಿಂದ ಬಂದಾಗ ಅವರು ಗಲಾಟೆ ಮಾಡಿದ್ದಾರೆ. ಆಗ ನನ್ನ ಮಗಳು ಅತ್ತುಕೊಂಡು ಫೋನ್​ ಮಾಡಿದ್ದಳು. ಆಗ ಮಾತನಾಡಲು ಅವರ ಮನೆಗೆ ಹೋದಾಗ ಯುವ ಜೊತೆ ಮಾತನಾಡೋಕೆ ಅವರ ತಂದೆ-ತಾಯಿ ನಮ್ಮನ್ನು ಬಿಡಲೇ ಇಲ್ಲ. ಆತ ಕೂಡ ತನಗೆ ಬಿಡುವು ಇಲ್ಲ ಅಂತ ಹೇಳಿ ಹೊರಟುಹೋದ್ರು ಎಂದು ಯುವ ಜೊತೆಗಿನ ಮನಸ್ಥಾಪದ ಬಗ್ಗೆ ಮಾತನಾಡಿದ್ದಾರೆ.

ನನ್ನ ಮಗಳು ಕಿರುಕುಳ ಮಾಡುತ್ತಾಳೆ ಅಂತ ಆರೋಪ ಹೊರಿಸಿದ್ದಾರೆ. ನನ್ನ ಮಗಳು ಕಿರುಕುಳ ನೀಡುವಂತವಳಲ್ಲ, ಡಿಸೆಂಬರ್​ನಲ್ಲಿ ಇಲ್ಲಿಗೆ ಬರ್ತೀನಿ ಅಂದ್ರು. ಬಂದು ಸುಮ್ಮನೇ ಕುಳಿತಿದ್ದರು. ಮಗಳ ತಪ್ಪು ಏನು ಅಂತ ನಾನು ಕೇಳಿದ್ದಕ್ಕೂ ಉತ್ತರ ಕೊಡಲಿಲ್ಲ. ನನ್ನ ಮಗಳು ವಿದ್ಯಾವಂತೆ. ದುಡಿದು ತಿನ್ನುವಂತಹ ಶಕ್ತಿ ಇರುವಂತವಳು. ಆ ಹುಡುಗ ಎಸ್​ಎಸ್​ಎಲ್​ಸಿ. ಆದ್ರೂ ನಾವು ಮದುವೆ ಮಾಡಿದ್ದೇವೆ ಎಂದು ಶ್ರೀದೇವಿ ತಂದೆ ಬೈರಪ್ಪ ಹೇಳಿದ್ದಾರೆ.

ಇನ್ನೂ ನನ್ನ ಮಗಳು ತನ್ನ ಬಗ್ಗೆ ಕೆಟ್ಟ ಮಾತು ಆಡುತ್ತಾರೆ ಎಂದು ನಮಗೆ ಯಾವತ್ತೂ ಹೇಳಲಿಲ್ಲ. ನವೆಂಬರ್​ನಲ್ಲಿ ಅವರ ಮನೆಯಲ್ಲೇ ಇದ್ದಳು. ಬಳಿಕ ಅಕಾಡೆಮಿಗೆ ಕಳಿಸಿದೆ. ನಂತರ ಫ್ರೆಂಡ್​ ಮನೆಗೆ ಹೋದಳು. ಅಲ್ಲಿಂದ ಅವಳನ್ನು ಕರೆದುಕೊಂಡು ಹೋಟೆಲ್​ಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟ. ಮರುದಿನ ಅವಳು ಅಮೆರಿಕಗೆ ಹೋದಳು. ಮನೆಯಲ್ಲಿ ತುಂಬ ಕೆಟ್ಟ ಮಾತು ಆಡುತ್ತಿದ್ದರು ಅಂತ ನನ್ನ ಮಗಳು ನನಗೆ ಹೇಳಿದ್ದಳು ಎಂದು ಭೈರಪ್ಪ ಅವರು ತಿಳಿಸಿದ್ದಾರೆ.