ತುಲಾ ರಾಶಿವರಿಗೆ ಎ ಚ್ಚರಿಕೆಯ ಸಮಯ; ಈ ಪೂಜೆ ಮಾಡಿದರೆ ಮಾತ್ರ ಅದೃಷ್ಟ ಕೂಡಿ ಬರುತ್ತದೆ

 
2024ರ ಒಂಭತ್ತನೇ ತಿಂಗಳಾದ ಸಪ್ಟೆಂಬರ್ ನಲ್ಲಿ ಗ್ರಹಗತಿಗಳ ಬದಲಾವಣೆ ಶುಭಾಶುಭವನ್ನು ನೀಡಲಿವೆ. ಸೂರ್ಯ ತನ್ನ ಸ್ವಕ್ಷೇತ್ರದಿಂದ ನೀಚಸ್ಥಾನದ ಕಡೆ ಹೋಗುವನು. ಬುಧನೂ ಸ್ವರಾಶಿ ಮತ್ತು ಉಚ್ಚಸ್ಥಾನವನ್ನು ಪ್ರವೇಶಿಸುವನು. ಶುಕ್ರನು ನೀಚ ಸ್ಥಾನದಿಂದ ಹೊರಬಂದು ಸ್ವ ಕ್ಷೇತ್ರದಲ್ಲಿ ನೆಲೆಸಿದ್ದಾನೆ. ಕುಜನೂ ಶತ್ರು ಸ್ಥಾನದಲ್ಲಿ ಇರುವ ಕಾರಣ ಶುಭಾಶುಭ ಫಲಗಳು ಮಿಶ್ರವಾಗಿ ಇರುತ್ತವೆ. ಅಶುಭಸ್ಥಾನದವರು ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. 
ರಾಶಿ ಚಕ್ರದ ಏಳನೇ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ ಅಶುಭ ಫಲ. ರಾಶಿಯ ಅಧಿಪತಿಯೂ ಅಷ್ಟಮಾಧಿಪತಿಯೂ ನಿಮ್ಮ ರಾಶಿಗೆ ಬರುವ ಕಾರಣ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣುತ್ತದೆ ಮತ್ತು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಯಶಸ್ವಿಯಾಗುವಿರಿ. ಬುಧನು ದ್ವಾದಶ ಸ್ಥಾನಕ್ಕೆ ತನ್ನ ಉಚ್ಚ ಸ್ಥಾನಕ್ಕೆ ಬಂದರೂ ನಿಮಗೆ ಕಷ್ಟಗಳು ತಪ್ಪಿದ್ದಲ್ಲ. ಗುರು ಹಿರಿಯರಿಂದ ಅನಾದರ ಸಿಗುವುದು. 
ಎಲ್ಲದಕ್ಕೂ ಅಡ್ಡಿಗಳು, ಬಂಧಿಗಳಿಂದ ನಿಮಗೆ ಕುಹಕಗಳು ಬರಲಿವೆ. ಶತ್ರುಗಳೂ ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುವರು. ಮಕ್ಕಳ‌ ಕಾರಣದಿಂದ ವಿದೇಶಕ್ಕೆ ಹೋಗುವ ಪ್ರಸಂಗ ಬರುವುದು. ದೈವಾನೂಕೂಲಕ್ಕೆ ವಿಶೇಷ ಕಾರ್ಯಗಳನ್ನು ಮಾಡುವುದು ಉತ್ತಮ. ತಿಂಗಳ‌ ಮಧ್ಯಭಾಗದ ವರೆಗೆ ಉತ್ತಮವಾಗಿದ್ದು, ಅನಂತರ ಆರೋಗ್ಯದಲ್ಲಿ ಏರುಪೇರು ಕಾಣಿಸುವುದು. ಮಹಾಗೌರಿಯ ಉಪಾಸನೆ ಅಗತ್ಯ ಮಾಡಬೇಕು.
ಸಾಹಿತ್ಯ ಕ್ಷೇತ್ರ ಅಥವಾ ಬೋಧಕ ವರ್ಗದವರಿಗೆ ಸ್ಥಾನ ಗೌರವಗಳು ಸಿಗಲಿದೆ. ನೀರಿಗೆ ಸಂಬಂಧಿಸಿ ಉದ್ಯಮದಲ್ಲಿ ಆದಾಯ ಸಿಗುವುದು. ಸಂಸಾರವನ್ನು ನಡೆಸುವ ಜವಾಬ್ದಾರಿಯು ನಿಮ್ಮ ಮೇಲೆ ಬರುವುದು. ಬೇಡ ವಿಚಾರಕ್ಕೆ ಹಣಕಾಸು ನಷ್ಟವಾಗುವುದು. ನಿಮ್ಮ ಆದಾಯವು ಸರಿಯಾದ ಮಾರ್ಗದಿಂದ ಬರುತ್ತಿದೆಯೇ ಎಂದು ಖಚಿತ ಮಾಡಿಕೊಳ್ಳಿ.  <a href=https://youtube.com/embed/Yk5rpQq1y_I?autoplay=1&mute=1><img src=https://img.youtube.com/vi/Yk5rpQq1y_I/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಸೂರ್ಯ ನಿಮ್ಮ ರಾಶಿಗೆ ಬರಲಿದ್ದು ತಿಂಗಳ ಮಧ್ಯದಿಂದ ಜ್ವರಾದಿ ರೋಗಗಳಲ್ಲಿ ಕಾಣಿಸಿಕೊಳ್ಳುವುದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಆಗದು. ಶತ್ರುಭಯವು ನಿಮಗೆ ದೂರಾಗಲಿದೆ. ಮಕ್ಕಳಿಂದ ಸಿಗಬೇಕಾದ ಗೌರವಗಳು ನಿಮಗೆ ಸಿಗಲಿದೆ. ಮಾತಿನಲ್ಲಿ ಯಾರನ್ನಾದರೂ ಮರುಳುಮಾಡಿ ಕಾರ್ಯವನ್ನು ಸಾಧಿಸುವಿರಿ. ಲಕ್ಷ್ಮೀ ನಾರಾಯಣರ ಸ್ತೋತ್ರದಿಂದ ನಿಮಗೆ ಎದುರಾಗುವ ಸಂಕಷ್ಟಗಳು ತಪ್ಪುವುವು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.