ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ಮಾಡಿ ಒಂದು ದಿನವಾಗಿಲ್ಲ ಅಷ್ಟರಲ್ಲೇ ಸಿಟಿ ರವಿ ಪತ್ನಿಯಿಂದ ಗಂಡ ನಡತೆಯ ಬಗ್ಗೆ ಸ್ಪಷ್ಟತೆ
Dec 21, 2024, 11:56 IST
ಬೆಳಗಾವಿ ಸದನದಲ್ಲಿ ನಡೆದ ಕದನದ ಬಗ್ಗೆ ಇದೀಗ ರಾಜ್ಯಾದ್ಯಂತ ಬಾರಿ ಗಮನ ಸೆಳೆದಿದೆ. ಕರ್ನಾಟಕದ ಪವರ್ ಫುಲ್ ಲೀಡರ್ ಸಿಟಿ ರವಿ ಅವರ ಆವೇಶದ ಮಾತಿನಿಂದ ಇದೀಗ ದೊಡ್ಡ ಪ್ರಳಯವೇ ಸೃಷ್ಟಿಯಾಗಿದೆ. ಹೌದು, ಸದನದಲ್ಲಿ ಕದನದ ಬಗ್ಗೆ ಸಿಟಿ ರವಿ ಅವರನ್ನು ಕೋರ್ಟ್ ಗೆ ಹಾಜರು ಮಾಡಿದ್ದ ಪೊಲೀಸರು.
ಕೋರ್ಟ್ ಮೆಟ್ಟಿಲೇರಿದ ಸಿಟಿ ರವಿಗೆ ಬಾರಿ ಗೆಲುವಿನ ತೀರ್ಮಾನ ಹೊರಬಿದ್ದಿದೆ. ಆದರೆ ಆತ ಮಾತಾನಾಡಿರುವ ಬಗ್ಗೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೋರ್ಟ್ ಆದೇಶ ನೀಡಿದೆ. ಆದರೆ ಸಣ್ಣ ವಿಚಾರವನ್ನು ದೊಡ್ಡದಾಗಿ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಟಿ ರವಿ ಕಿಡಿಕಾರಿದ್ದಾರೆ.
<a href=https://youtube.com/embed/A6c4-SWHW1U?autoplay=1&mute=1><img src=https://img.youtube.com/vi/A6c4-SWHW1U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆದರೆ, ಇದೀಗ ಸಿಟಿ ರವಿ ಅವರ ಧರ್ಮಪತ್ನಿ ತನ್ನ ಗಂಡ ಬಗ್ಗೆ ಮೌನ ಮುರಿದಿದ್ದಾರೆ. ' ನನ್ನ ಗಂಡ ಇದುವರೆಗೆ ಯಾವುದೇ ಕೆಟ್ಟ ಪದಬಳಕೆ ಮಾಡಿದವರಲ್ಲ. ಮನೆಯಲ್ಲಿರುವ ಹೆಣ್ಣುಮಕ್ಕಳ ಬಗ್ಗೆ ಇರಲಿ ಅಥವಾ ಅವರ ಕಾರ್ಯಕರ್ತೆಯರ ಬಗ್ಗೆ ಕೂಡ ಇದುವರೆಗೆ ಯಾವುದೇ ಕೆಟ್ಟ ಪದಬಳಕೆ ಬಂದಿಲ್ಲ. ಸುಮಾರು 25 ವರ್ಷ ನನ್ನ ಜೊತೆ ಸಂಸಾರ ಮಾಡಿರುವ ಸಿಟಿ ರವಿ ಅವರು ಏನು ಅಂತ ನನಗೆ ಗೊತ್ತು.
ಬೆಳಗಾವಿ ಪರಿಷತ್ತಿನಲ್ಲಿ ನನ್ನ ಗಂಡ ಹೇಳಿರುವ ಪದಬಳಕೆಯನ್ನು ತಿರುಚಿದ್ದಾರೆ ಎಂದು ರವಿ ಅವರ ಪತ್ನಿ ಸ್ಪಷ್ಟತೆ ಕೊಟ್ಟಿದ್ದಾರೆ. ಇನ್ನು ಇತ್ತಿಚೆಗೆ ಬಂದಿರುವ ಟೆಕ್ನಾಲಜಿ ಪ್ರಕಾರ ಯಾವ ಭಾಷೆಯನ್ನು ಬೇಕಾದರೂ ತಿರುಚಿ ಕೊಳ್ಳಬಹುದು. ಹಾಗಾಗಿ ಸಿಟಿ ರವಿ ಅವರು ನಿಜವಾಗಿಯೂ ಆ ಪದಬಳಕೆ ಮಾಡಿದ್ದರೆ ಕಾನೂತ್ ಮೂಲಕವೇ ಸಾಗಲಿ. ಅದು ಬಿಟ್ಟು ಅವರ ಮೇಲೆ ವೈಯಕ್ತಿಕವಾಗಿ ಹಲ್ಲೆ ಮಾಡುವುದು ಸರಿಯಲ್ಲ ಎಂದಿದ್ದಾರೆ.