'ಜೈ ಶ್ರೀರಾಮ್ ಎನ್ನುತ್ತ' ಆಯೋಧ್ಯೆಗೆ ಪಾದಯಾತ್ರೆ ಹೊರಟ ಅಪ್ಪಟ ಮುಸ್ಲಿಂ ಹೆಣ್ಣುಮಗಳು

 

ತಮ್ಮ ಧಾರ್ಮಿಕ ನಂಬಿಕೆಗಾಗಿ ಸಾವಿರಾರು ಜನರು ಒಂದಿಲ್ಲೊಂದು ಪವಿತ್ರ ಕ್ಷೇತ್ರಕ್ಕೆ ಯಾತ್ರೆ ತೆರಳುತ್ತಾರೆ. ಆದರೆ ಶ್ರೀರಾಮನ ಭಕ್ತೆಯಾದ ಮುಸ್ಲಿಂ ಮಹಿಳೆಯೊಬ್ಬರು, ಮಹಾರಾಷ್ಟ್ರದಿಂದ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸುವ ಮೂಲಕ ಧರ್ಮದ ಕಟ್ಟಳೆಗಳನ್ನು ಮೀರಿದ ಭಕ್ತಿ ಪ್ರದರ್ಶಿಸಿದ್ದಾರೆ.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ.ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.

 ಈಗಾಗಲೇ ಸಾವಿರಾರು ಗಣ್ಯರಿಗೆ ರಾಮಮಂದಿರ ಟ್ರಸ್ಟ್‌ನಿಂದ ಆಹ್ವಾನ ಕಳುಹಿಸಲಾಗಿದೆ. ಭರದ ಸಿದ್ಧತೆಯನ್ನೂ ನಡೆಸಲಾಗುತ್ತಿದೆ.ಇದರ ಬೆನ್ನಲ್ಲೇ, ಶ್ರೀರಾಮನ ದರ್ಶನಕ್ಕಾಗಿ ಮುಂಬೈನ ಮುಸ್ಲಿಂ ಯುವತಿ ಶಬನಮ್‌ ಶೇಖ್‌ ಅವರು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಮಾರ್ಗದ ಮಧ್ಯೆ ಶ್ರೀರಾಮನ ಭಕ್ತರನ್ನು ಭೇಟಿಯಾಗುತ್ತ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತ ಸಾಗುತ್ತಿರುವ ಇವರ ವಿಡಿಯೊಗಳು ಭಾರಿ ವೈರಲ್‌ ಆಗಿವೆ.

ನಿತ್ಯವೂ ಪಾದಯಾತ್ರೆಯ ವಿಡಿಯೊಗಳನ್ನು ಶಬನಮ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಮುಸ್ಲಿಂ ಧರ್ಮೀಯಗಳಾಗಿದ್ದರೂ, ಶ್ರೀರಾಮನ ಕುರಿತಾದ ವಿಶೇಷ ಭಕ್ತಿ ಆಕೆಯ ಈ ಪಾದಯಾತ್ರೆಗೆ ಪ್ರೇರಣೆ. ರಾಮನನ್ನು ಆರಾಧಿಸಲು ಅವರು ಹಿಂದುವೇ ಆಗಿರಬೇಕಿಲ್ಲ; ಅವರು ಒಳ್ಳೆಯ ಮಾನವೀಯ ವ್ಯಕ್ತಿಯಾಗಿರಬೇಕು ಎನ್ನುವುದು ಶಬನಮ್ ಅಭಿಪ್ರಾಯ. 
 
ಮುಂಬಯಿಯಿಂದ ಕಾಲ್ನಡಿಗೆ ಯಾತ್ರೆ ಆರಂಭಿಸಿರುವ ಶಬನಮ್, ಪ್ರತಿ ದಿನ 25- 30 ಕಿಮೀ ನಡೆಯುತ್ತಾ, ಪ್ರಸ್ತುತ ಮಧ್ಯಪ್ರದೇಶದ ಸಿಂಧವಾಕ್ಕೆ ತಲುಪಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.