ಕನ್ನಡದ ಖ್ಯಾತ ನಟ ಕಿರಣ್ ರಾಜ್ ಗೆ ಅಪ ಘಾತ, ಕಿತ್ತು ಬಂದ ಕಾರಿನ ಚಕ್ರ

 
 ಕನ್ನಡತಿ ಧಾರಾವಾಹಿ ಮೂಲಕ ಇಡೀ ಕರುನಾಡ ಮನೆ ಹಾಗೂ ಮನವನ್ನು ತಲುಪಿದ ಕಿರಣ್​​​ ರಾಜ್ ಕಾರು ಭೀಕರ ಅಪಘಾತಕ್ಕೊಳಗಾಗಿದ್ದು​ ಆಸ್ಪತ್ರೆಗೆ ದಾಖಲಾಗಿದ್ದಾರೆ.ರಾನಿ ಚಿತ್ರದ ನಾಯಕ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ. ಅಪಘಾತದಲ್ಲಿ ಕಾರು ಫುಲ್ ಜಖಂ ಆಗಿದ್ದು, ಘಟನೆಯಲ್ಲಿ ಕಿರಣ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ .
ಸದ್ಯ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಕಿರಣ್ ರಾಜ್​ ಗೆಚಿಕಿತ್ಸೆ ಮುಂದುವರೆದಿದ್ದು, ಕಿರಣ್ ಎದೆ ಭಾಗಕ್ಕೆ ಭಾರೀ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ ನಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಟನ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ನಿಂದಾಗಿ ಸೇಫ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. <a href=https://youtube.com/embed/cX6aCqOvsY8?autoplay=1&mute=1><img src=https://img.youtube.com/vi/cX6aCqOvsY8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕಿರುತೆರೆಯಿಂದ ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಟ್ಟಿದ್ದ ನಟ ಕಿರಣ್​​ ರಾಜ್​ ಅವರ ಸಿನಿಮಾ ರಾನಿ ನಾಳೆ ರಿಲೀಸ್​ ಆಗಲಿದೆ. ಸಿನಿಮಾದ ಬಗ್ಗೆ ಸಾಕಷ್ಟು ಆಸೆ ಕನಸ್ಸುಗಳನ್ನು ಇಟ್ಟುಕೊಂಡಿದ್ದ ನಟ ಕಿರಣ್​​ ರಾಜ್​ ಆಸ್ಪತ್ರೆಗೆ ದಾಖಲಾಗಿದ್ದು ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ.
ಕಿರಣ್ ರಾಜ್ ಅವರು ರಾನಿ ಸಿನಿಮಾ ಮೂಲಕ ಆಕ್ಷನ್ ಹೀರೋ ಆಗಿ ದೊಡ್ಡ ಪರದೆ ಮೇಲೆ ಮಿಂಚಲು ಸಕಲ ತಯಾರಿ ಆಗಿತ್ತು. ತುಂಬ ಕನಸು ಇಟ್ಟುಕೊಂಡಿದ್ದ ರಾನಿ ಸಿನಿಮಾ ರಿಲೀಸ್‌ಗೆ ಒಂದು ದಿನ ಇರುವಾಗಲೇ ಈ ಚಿತ್ರದ ಹೀರೋ ಕಿರಣ್ ರಾಜ್ ಅವರಿಗೆ ಅಪಘಾತ ಆಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಅನ್ನೊದನ್ನು ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.