ರಸ್ತೆ ಅಪ,ಘಾತದಿಂದ ಕನ್ನಡದ ಖ್ಯಾತ ನಟಿ ಆಸ್ಪತ್ರೆಗೆ ದಾಖಲು

 

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ತಮಿಳಿನ ಖ್ಯಾತ ನಟಿ ಅರುಂಧತಿ ನಾಯರ್ ಅವರ ಆರೋಗ್ಯ ಸ್ಥಿತಿ ಈಗ ಮತ್ತಷ್ಟು ಚಿಂತಾಜನಕವಾಗಿದೆ. ಸದ್ಯ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿಲಾಗಿದ್ದು, ಚಿಕಿತ್ಸೆಯು ಮುಂದುವರಿದಿದೆ. ಮಾರ್ಚ್‌ 14ರಂದು ನಟಿ ಅರುಂಧತಿ ನಾಯರ್‌ ಅವರಿಗೆ ಅಪಘಾತವಾಗಿತ್ತು.

ನಟಿ ಅರುಂಧತಿ ನಾಯರ್‌ ಅವರು ಮಾರ್ಚ್‌ 14ರಂದು ತಮ್ಮ ಸಹೋದರನ ಜೊತೆಗೆ ಕೊಚ್ಚಿಯ ಕೋವಲಂ ಬೈಪಾಸ್ ರಸ್ತೆಯಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ನಡೆದ ಅಪಘಾತದಲ್ಲಿ ಅವರು ಗಾಯಗೊಂಡರು. ಅರುಂಧತಿ ನಾಯರ್‌ ಅವರು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿ ವಾಪಸಾಗುವಾಗ ಈ ಘಟನೆ ಸಂಭವಿಸಿತ್ತು. 

ಅಪಘಾತದಲ್ಲಿ ಅರುಂಧತಿ ನಾಯರ್‌ ತೀವ್ರವಾಗಿ ಗಾಯಗೊಂಡು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಅವರನ್ನು ತಿರುವನಂತಪುರದ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ.ಅತ್ತ ವೆಂಟಿಲೇಟರ್‌ನಲ್ಲಿ ಜೀವನ್ಮರಣದ ನಡುವೆ ನಟಿ ಅರುಂಧತಿ ನಾಯರ್ ಅವರು ಹೊರಾಡುತ್ತಿದ್ದರೆ, ಇತ್ತ ಅವರ ಕುಟುಂಬ ಸದಸ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.  <a href=https://youtube.com/embed/EqLuz2BfJ5U?autoplay=1&mute=1><img src=https://img.youtube.com/vi/EqLuz2BfJ5U/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ತಮ್ಮ ಸಹೋದರಿಯ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡಿ ಎಂದು ಅರುಂಧತಿ ಸಹೋದರಿ ಆರತಿ ನಾಯರ್ ಅವರು ಮನವಿ ಮಾಡಿಕೊಂಡಿದ್ದಾರೆ.ನಾವು ಆರ್ಥಿಕ ಸಹಾಯವನ್ನ ನಿರೀಕ್ಷೆ ಮಾಡುತ್ತಿದ್ದೇವೆ. ನನ್ನ ಸಹೋದರಿಯ ವೈದ್ಯಕೀಯ ವೆಚ್ಚಗಳಿಗೆ ಸಹಾಯ ಮಾಡಲು ಬಯಸುವರು ನಮ್ಮ ಖಾತೆಗೆ ಹಣವನ್ನು ಹಾಕಬಹುವುದು. ನಮ್ಮ ಪರಿಸ್ಥಿತಿಯನ್ನು ನೀವೆಲ್ಲರೂ ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ನನ್ನ ಸಹೋದರಿಯ ಚೇತರಿಕೆಗಾಗಿ ನೀವೆಲ್ಲರೂ ಪ್ರಾರ್ಥಿಸಿ ಎಂದು ನಿಮ್ಮಲ್ಲಿ ನಾನು ಬೇಡಿಕೊಳ್ಳುತ್ತೇನೆ ಎಂದು ಆರತಿ ನಾಯರ್ ಹೇಳಿದ್ದಾರೆ.

28 ವರ್ಷದ ನಟಿ ಅರುಂಧತಿ ನಾಯರ್ ಅವರು ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. 2014ರಲ್ಲಿ ತೆರೆಕಂಡ 'ಪೋಂಗಿ ಎಳು ಮನೋಹರ' ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಅರುಂಧತಿ ಅವರು, ಆನಂತರ ವಿರುಮಂದಿಕ್ಕುಂ ಸಿವನಂದಿಕ್ಕುಂ,ಕನ್ನಿ ರಾಸಿ,ಪಿಸ್ತಾ,ಆಯಿರಂ ಪೊರ್ಕಾಸುಕಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ.ವಿಜಯ್ ಆಂಟನಿ ಅಭಿನಯದ ಸೈತಾನ್ ಸಿನಿಮಾದಲ್ಲಿ ಪತ್ನಿಯಾಗಿ ಕಾಣಿಸಿಕೊಂಡಿದ್ದ ಅರುಂಧತಿ ನಾಯರ್‌ಗೆ ಸಿಕ್ಕಾಪಟ್ಟೆ ಹೆಸರು ಸಿಕ್ಕಿತ್ತು. 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.