ಕೋಟಿ ಬೆಲೆಬಾಳುವ ಮನೆಯಲ್ಲಿ ವಾಸವಿದ್ದಾರೆ ಕನ್ನಡದ ಸೀರಿಯಲ್ ನಟ ವಿಜಯ್ ಸೂರ್ಯ, ಇ‍ದೆಲ್ಲಾ ಹೆಂಡತಿಗಾಗಿ ಎಂದ ನಟ

 
ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಆದರೆ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ ವಿಜಯ್ ಸೂರ್ಯ ಬೆಳ್ಳಿ ಪರದೆಗೆ ಕಾಲಿಟ್ಟು ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಆದರೆ, ತುಂಬಾ ದಿನಗಳು ಸೈಕಲ್ ತುಳಿದರೂ ನಿರೀಕ್ಷಿತ ಯಶಸ್ಸು ಸಿಗದ ಹಿನ್ನೆಲೆಯಲ್ಲು ಪುನಃ ಕಿರುತೆರೆಗೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಕಲರ್ಸ್ ಕನ್ನಡ ವಾಹಿನಿಯ ಹೊಸ ಧಾರಾವಾಹಿ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಖಡಕ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಕನ್ನಡ ಕಿರುತೆರೆ ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಮನಸ್ಸು ಗೆದ್ದ ವಿಜಯ್ ಸೂರ್ಯ ಸಿನಿಮಾದಲ್ಲಿಯೂ ಸಿಗದ ಮಾಸ್ ಲುಕ್ ಮೂಲಕ ಪುನಃ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಸೂರ್ಯ ಅವರುಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಈಗಾಗಲೇ ದೃಷ್ಟಿಬೊಟ್ಟ ಆರಂಭವಾಗುತ್ತಿದ್ದು, ನಾಯಕನಾಗಿ ವಿಜಯ್ ಸೂರ್ಯ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ವಿಜಯ್ ಸೂರ್ಯನನ್ನು ನೋಡಿದ ಅಭಿಮಾನಿಗಳು ಹೋ... ದತ್ತಾ ಭಾಯ್... ವಿಜಯ್ ಸೂರ್ಯ ಈಸ್ ಬ್ಯಾಕ್ ಎಂದು ಪ್ರೇರಣೆ ನೀಡಿದ್ದಾರೆ. <a href=https://youtube.com/embed/6B2xHeBOAxI?autoplay=1&mute=1><img src=https://img.youtube.com/vi/6B2xHeBOAxI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಧಾರಾವಾಹಿಗಳಿಂದ ಬೆಳ್ಳಿ ತೆರೆಗೆ ಕಾಲಿಟ್ಟಿದ್ದ ನಟ ವಿಜಯ್ ಸೂರ್ಯ ಅವರು ಕ್ರೇಜಿಲೋಕದಲ್ಲಿ ನಟಿಸಿದ್ದರು. ಈ ಸಿನಿಮಾದ ಅಭಯ್ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದರು. ನಂತರ ಇಷ್ಟಕಾಮ್ಯ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ ಕೆಲವು ಚಿತ್ರಗಳ ಆಫರ್‌ಗಳೂ ಬಂದವು. ಕದ್ದುಮುಚ್ಚಿ, ಗಾಳಿಪಟ-2 ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಆದರೆ, ವಿಜಯ್ ಸೂರ್ಯಗೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾದಲ್ಲಿ ಯಶಸ್ಸು ಸಿಗಲಿಲ್ಲ. ಪ್ರಸ್ತುತ ವೀರಪುತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಖಡಕ್ ಲುಕ್‌ನಲ್ಲಿ ದೃಷ್ಟಿಬೊಟ್ಟು ಧಾರಾವಾಹಿಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ವಿಜಯ್ ಅವರ ಮದುವೆ ಲೈಫ್‌ ಕುರಿತು ಹೇಳುವುದಾದರೆ, ಇವರ ರಿಯಲ್​ ಪತ್ನಿ ಹೆಸರು ಚೈತ್ರಾ ಶ್ರೀನಿವಾಸ. 2019ರ ಫೆಬ್ರವರಿ 14ರಂದು  ಚೈತ್ರಾ ಶ್ರೀನಿವಾಸ್ ಅವರನ್ನು ವಿಜಯ್ ಮದುವೆ ಆಗಿದ್ದರು. ಇವರದ್ದು ಅರೇಂಜ್ಡ್‌ ಮ್ಯಾರೇಜ್. ಚೈತ್ರಾ ಅವರು ಸಾಫ್ಟ್‌ವೇರ್ ಉದ್ಯೋಗಿ. ಕ್ಯಾಮರಾ, ಸಾರ್ವಜನಿಕ ಜೀವನದಿಂದ ಚೈತ್ರಾ ಅವರು ತುಂಬ ದೂರ ಇದ್ದಾರೆ.   2020ರ ಫೆಬ್ರವರಿ 14ರಂದು ವಿಜಯ್ ಸೂರ್ಯ, ಚೈತ್ರಾ ಶ್ರೀನಿವಾಸ್ ಅವರಿಗೆ ಗಂಡು ಮಗು ಜನಿಸಿತ್ತು. ಕಳೆದ ವರ್ಷ ಎರಡನೇ ಮಗು ಜನಿಸಿದೆ. ಮೊದಲ ಮಗನಿಗೆ ಸೋಹನ್ ಸೂರ್ಯ ಎಂದು ಹೆಸರಿಟ್ಟಿದ್ದರು. ಎರಡನೇ ಮಗುವಿಗೆ ಕಾರ್ತಿಕೇಯ ಸೂರ್ಯ ಎಂದು ನಾಮಕರಣ ಮಾಡಿದ್ದರು. ಇವರಿಗೆ ಬೆಂಗಳೂರಿನಲ್ಲಿ ಸ್ವಂತ ಮನೆಯಿದ್ದು ತಾಯಿ, ಹೆಂಡತಿ ಮಕ್ಕಳೊಡನೆ ಚಂದವಾಗಿ ಜೀವನ ನಡೆಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.