ಕನ್ನಡದ ಖ್ಯಾತ ಯೂಟ್ಯೂಬರ್ ಬಿಗ್ ಬಾಸ್ ಮನೆಗೆ ನೇರ ಎಂಟ್ರಿ
Sep 23, 2024, 13:32 IST
ಬಿಗ್ ಬಾಸ್ ಸೀಸನ್ 11 ಇದೇ ಸೆಪ್ಟೆಂಬರ್ ಕೊನೆಯವಾರ ಶುರುವಾಗೋದು ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಅವರೇ ಹೋಸ್ಟ್ ಎನ್ನೋದು ಕೂಡ ಕನ್‌ಫರ್ಮ್ ಆಗಿದೆ. ಸದ್ಯ ಸಂಭಾವ್ಯ ಪಟ್ಟಿ ವೈರಲ್ ಆಗಿದೆ. ಇನ್ನು ಹುಲಿ ಕಾರ್ತಿಕ್ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ. ಜತೆಗೆ ತುಕಾಲಿ ಮಾನಸ ಹೆಸರೂ ಕೂಡ ಕೇಳಿ ಬರುತ್ತಿದೆ.
ಇದರ ಬೆನ್ನಲ್ಲೇ ಲೇಖಿ ರೈಡರ್ ಎಂಬ ಯೂಟ್ಯೂಬ್ ಚಾನಲ್‌ನಿಂದ ಖ್ಯಾತಿಗಳಿಸಿರುವ ಲೇಖಿ ಗೋಸ್ವಾಮಿ ಈ ಬಾರಿ ‘ಬಿಗ್ ಬಾಸ್’ ಸ್ಪರ್ಧಿಯಾಗಿ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.ಲೇಖಿ ಗೋಸ್ವಾಮಿ ಸಾಮಾಜ ಸೇವೆ ಮೂಲಕ ಸಾಕಷ್ಟು ಹೆಸರು ಗಳಿಸಿದವರು. ದೇಶ, ವಿದೇಶದಲ್ಲೆಡೆ ಇವರಿಗೆ ಫ್ಯಾನ್ಸ್ ಇದ್ದಾರೆ. ಈಗಾಗಲೇ ಅವರಿಗೆ ಇನ್ಸ್‌ಸ್ಟಾದಲ್ಲಿ ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಕಷ್ಟ ಇದ್ದವರಿಗೆ ಸಹಾಯ ಹಸ್ತು ಚಾಚುವಲ್ಲಿ ಲೇಖಿ ಗೋಸ್ವಾಮಿ ಎತ್ತಿದ ಕೈ. ಇದೀಗ ಲೇಖಿ ಗೋಸ್ವಾಮಿ ಬಿಗ್ ಬಾಸ್ ಮನೆಗೆ ಬಂದರೆ ಚೆನ್ನಾಗಿ ಇರತ್ತೆ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ.ಮಾತ್ರವಲ್ಲ ಲೇಖಿ ಗೋಸ್ವಾಮಿ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಾಕಷ್ಟು ಪ್ರಮೋಟ್ ಕೂಡ ಮಾಡ್ತಿದ್ದಾರೆ. ಈ ಬಾರಿ ಇವರು ಮಾತ್ರವಲ್ಲ ಈ ಬಾರಿ ಯುಟ್ಯೂಬ್ ಶಾರ್ಟ್ ಫಿಲ್ಮ್ಸ್ ಸ್ಟಾರ್ ಎಂದೇ ಖ್ಯಾತಿ ಪಡೆದ ಗೌರವ್ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಸಂಭಾವ್ಯ ಪಟ್ಟಿಯಲ್ಲಿ ರೀಲ್ಸ್ ರೇಷ್ಮಾ, ಚಂದ್ರಪ್ರಭ, ರಾಘವೇಂದ್ರ, ಶರ್ಮಿತಾ ಗೌಡ, ಪದ್ಮಾವತಿ ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ಗೌತಮಿ ಜಾಧವ್, ಶರತ್ ಕುಮಾರ್ ಹೆಸರುಗಳೂ ಇವೆ.ಮಗಳು ಜಾನಕಿ’ ಸೀರಿಯಲ್‌ನಲ್ಲಿ ನಟಿಸಿದ್ದವರು ಐಶ್ವರ್ಯಾ ರಂಗರಾಜನ್. ಇವರು ಖ್ಯಾತ ಗಾಯಕಿ ಕೂಡ. ಇದೀಗ ಐಶ್ವರ್ಯಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಬಾರಿಯ ಸೀಸನ್‌ನಲ್ಲಿ ಕ್ರೀಡೆ, ರಾಜಕೀಯ, ಮನರಂಜನೆ ಸೇರಿದಂತೆ ಯುಟ್ಯೂಬ್ ಕಟೆಂಟ್ ಕ್ರಿಯೇಟರ್ಸ್‌ಗಳಿಗೂ ಸ್ಪರ್ಧಿಸುವ ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.