'ಕರಿಮಣಿ' ಧಾರಾವಾಹಿ ನಿರ್ದೇಶಕ ಇಹಲೋಕ; ಕಾರಣ ಯಾ ರು ಗೊ ತ್ತಾ

 

ಸಿನಿಮಾ ಹಾಗೂ ಕಿರುತೆರೆಯಲ್ಲಿ ನಿರ್ದೇಶಕರಾಗಿ ಗುರಿತಿಸಿಕೊಂಡಿದ್ದ ವಿನೋದ್ ದೊಂಡಾಳೆ ಇಂದು ನಿಧನ ಹೊಂದಿದ್ದಾರೆ. ನಾಗವಾರದ ತಮ್ಮ ಮನೆಯಲ್ಲಿ ವಿನೋದ್ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿನಿಮಾಕ್ಕಾಗಿ ಮಾಡಿದ್ದ ಸಾಲ ಅತಿಯಾಗಿ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 

ವಿನೋದ್ ನಿಧನದ ಬೆನ್ನಲ್ಲಿನಲ್ಲಿಯೇ ಚಿತ್ರರಂಗದ ಹಲವರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನಿರ್ಮಿಸಬೇಕೆಂಬ ಕನಸೇ ಇಂದು ನಿರ್ದೇಶಕನನ್ನು ಬಲಿ ತೆಗೆದುಕೊಂಡಿದೆ.ವಿನೋದ್ ದೋಂಡಾಳೆ ಎಂಬ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ; ಅವರದೇ ಸಿನೆಮಾ. 

‘ಅಶೋಕ ಬ್ಲೇಡ್’ ಅಂತ ಹೆಸರಿಟ್ಟಿದ್ದರು. ಅದು ಬದುಕನ್ನು ಕುಯ್ದು ಕೊಂದಿತು. ಪಿ ಶೇಷಾದ್ರಿ ಅವರ ಜೊತೆ 8 ವರ್ಷ ಸಿನೆಮಾ, ಧಾರಾವಾಹಿಗಳನ್ನು ಮಾಡಿ ನಂತರ ಮುಕ್ತ ದಾರಾವಾಹಿಗೆ ಟಿ ಎನ್ ಸೀತಾರಾಮ್ ಸರ್ ಜೊತೆಯಾದವರು ವಿನೋದ್. ಅಲ್ಲಿಂದ ನರಹರಿರಾವ್, ದೀಪಕ್ ಮತ್ತು ವಿನೋದ್ ತಮ್ಮದೇ ಪ್ರೊಡಕ್ಷನ್ ಹೌಸ್ ಕಟ್ಟಿದರು. <a href=https://youtube.com/embed/Yp8tSM0dLno?autoplay=1&mute=1><img src=https://img.youtube.com/vi/Yp8tSM0dLno/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಒಬ್ಬ ಕೆಮರಾಮನ್, ಒಬ್ಬ ನಿರ್ದೇಶಕ ಮತ್ತೊಬ್ಬ ಪ್ರೊಡಕ್ಷನ್ ಮ್ಯಾನೇಜರ್ . ಈ ಕಾಂಬಿನೇಶನ್ ವರ್ಕಾಗುವಾಗ ದೀಪಕ್ ಇಲ್ಲವಾದರು. ವಿನೋದ್ ಮತ್ತು ನರಹರಿ ಮುಂದುವರೆದರು. ಯಶಸ್ವೀ ಧಾರಾವಾಹಿಗಳನ್ನು ನೀಡಿದರು. ಟಿಸಿಲೊಡೆದು, ಛಲ ಬಿಡದೆ ಅವರು ಮುಂದುವರೆಯುವಾಗ ಎಲ್ಲರಿಗೂ ಖುಷಿಯಾಗಿತ್ತು. ಯಾವುದೋ ಧಾರಾವಾಹಿ ಮಾಡುವ ಬಗ್ಗೆ ಕೆಲವ ತಿಂಗಳ ಹಿಂದೆ ಮಾತಾಡಿದಾಗ, ಈ ಸಿನೆಮಾ ಮುಗಿಯಲಿ ಅಂದಿದ್ದರು. 

ಧಾರಾವಾಹಿಯ ಮೂಲಕ ಸ್ವಂತ ಸಿನೆಮಾ ಮಾಡುವಷ್ಟು ಬೆಳೆದರಲ್ಲಾ ಅಂತ ಬಹಳ ಖುಷಿಯಾಗಿತ್ತು. ಬಹುಶಃ ಧಾರಾವಾಹಿಯೇ ಮಾಡಿಕೊಂಡಿದ್ದರೆ ಎಲ್ಲವೂ ಚೆನ್ನಾಗೇ ಇರುತ್ತಿತ್ತೇನೋ. ಆದರೆ…ಸಿನೆಮಾ ಕನಸು ಅಂತೊಂದಿದೆಯಲ್ಲಾ…ಅದು ಎಲ್ಲರ ಪಾಲಿಗೂ ನನಸಾಗುವ ಸವಿಗನಸೇ ಅಲ್ಲ, ದುಃಸ್ವಪ್ನವೂ ಆಗಬಹುದು. ಅದಕ್ಕೆ ವಿನೋದ್ ಸರ್‌ ಸಾವು ಉದಾಹರಣೆಯಾಗಬಾರದಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.