ಮಂಗಳೂರು ಜನರ ಮುಂದೆ ತುಳುವಿನಲ್ಲಿ ಮಾತನಾಡಿದ ಕಿಚ್ಚ; ನಾನು ಮೂಲತಃ ತುಳುವ ಎಂದ ಸುದೀಪ್

 

ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ಮಂಗಳೂರಿಗೆ ಬಂದಿದ್ದರು. ಇಲ್ಲಿಯ ಯಕ್ಷ ಧ್ರುವ ಪಟ್ಲ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಇಲ್ಲಿ ಇವರಿಗೆ ಒಂದು ಮಾತು ತುಂಬಾನೆ ಬೇಸರ ತರಿಸಿತ್ತು. ಆ ಮಾತು ಅವರಿಗೆ ಅದ್ಯಾಕೋ ತಾವು ಹೊರಗಿನವರು ಅನ್ನುವ ಫೀಲ್ ಬರುವಂತೆ ಮಾಡಿತ್ತು.

ಹಾಗಂತ ಅದನ್ನ ಮನದಲ್ಲಿಯೇ ಇಟ್ಟುಕೊಂಡು ಕಿಚ್ಚ ಸುದೀಪ್ ಸುಮ್ನೆ ಕೂಡಲಿಲ್ಲ. ಅದನ್ನ ವೇದಿಕೆ ಮೇಲೆ ಹೇಳಿಯೇ ಬಿಟ್ಟರು. ಕಿಚ್ಚನ ಈ ಒಂದು ಮಾತಿನ ವಿಡಿಯೋವನ್ನ ಕಿಚ್ಚನ ಫ್ಯಾನ್ಸ್ ತುಂಬಾನೇ ಚೆನ್ನಾಗಿ ಕಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಹಾಕಿದ್ದಾರೆ. <a href=https://youtube.com/embed/AVUuODy4Nrk?autoplay=1&mute=1><img src=https://img.youtube.com/vi/AVUuODy4Nrk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕಿಚ್ಚ ಸುದೀಪ್ ತುಂಬಾನೆ ಸೆನ್ಸಿಬಲ್ ಆಗಿಯೇ ಮಾತನಾಡುತ್ತಾರೆ. ಇವರ ಮಾತಿನಿಂದ ಯಾರಿಗೂ ಹರ್ಟ್ ಆಗೋದಿಲ್ಲ. ಆದರೆ ಹೇಳೋ ವಿಚಾರ ನೇರವಾಗಿಯೇ ನಯವಾಗಿಯೆ ಹೇಳಿ ಮುಗಿಸಿ ಬಿಡ್ತಾರೆ. ಮಂಗಳೂರಿನ ಈ ಯಕ್ಷ ಧ್ರುವ ಪಟ್ಲ ಸಂಭ್ರಮದಲ್ಲಿ ಆಗಿರೋದು ಅದೇನೇ ನೋಡಿ.

ತುಳುನಾಡು ಬೇರೆ ಅಲ್ಲ. ಕರ್ನಾಟಕ ಬೇರೆ ಅಲ್ಲ ಎರಡೂ ಒಂದೇನೆ ಅಲ್ವೇ..? ತುಳುನಾಡಿನ ನಂಟು ನನಗೂ ಇದೆ. ನಮ್ಮ ತಾಯಿ ತುಳುನಾಡಿನವರೇ ಆಗಿದ್ದಾರೆ. ತುಂಬಾನೆ ಚೆನ್ನಾಗಿಯೇ ಅಮ್ಮ ತುಳು ಮಾತನಾಡುತ್ತಾರೆ. ನನಗೂ ಎರಡೇ ಎರಡು ಪದಗಳನ್ನ ಕಲಿಸಿದ್ದಾರೆ.ನನಗೆ ಎಂಚಿನ ಮಾರಾರ್ರೆ, ಉಣಸಾಂಡ ಅನ್ನುವ ಈ ಎರಡು ಪದಗಳ ಅರ್ಥ ಗೊತ್ತಿದೆ. 

ಈ ಎರಡು ಪದಗಳನ್ನ ಅಮ್ಮ ಕಲಿಸಿದ್ದಾರೆ. ಮನೆಗೆ ಬರ್ತಿದ್ದ ಅತಿಥಿಗಳ ಜೊತೆಗೆ ಮಾತನಾಡಲು ಈ ಎರಡು ಪದಗಳನ್ನ ಹೇಳಿಕೊಟ್ಟಿದ್ದರು ಅಂತಲೇ ಅಮ್ಮನ ಬಗ್ಗೆ ಕಿಚ್ಚ ಸುದೀಪ್ ಇಲ್ಲಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.