'ಕಿರಾತಕ ಸಿನಿಮಾ' ನಟ ಇನ್ನ್.ಇಲ್ಲ; ದೂರದಿಂದ ಓಡೋಡಿ ಬಂದ ರಾಕಿ ಬಾಯ್

 
Hhh

ತಮಿಳು ಚಿತ್ರರಂಗದಲ್ಲಿ ವಿಲನ್ ಪಾತ್ರಕ್ಕೆ ವಿಶಿಷ್ಟವಾದ ಗುರುತನ್ನು ನೀಡಿದ ನಟರಲ್ಲಿ ಡೇನಿಯಲ್ ಬಾಲಾಜಿ ಒಬ್ಬರು. ಅವರು ತಮಿಳು ಚಿತ್ರರಂಗದ ಜನಪ್ರಿಯ ಖಳನಾಯಕರಲ್ಲಿ ಒಬ್ಬರಾಗಿದ್ದರೂ, ಅವರು ಆರಂಭದಲ್ಲಿ ಚಲನಚಿತ್ರೋದ್ಯಮವನ್ನು ನಿರ್ಮಾಣ ವ್ಯವಸ್ಥಾಪಕರಾಗಿ ಪ್ರವೇಶಿಸಿದರು. ಕಮಲ್ ಹಾಸನ್ ನಿರ್ದೇಶನದ ಮರುದನಾಯಕಂ ಚಿತ್ರದಲ್ಲಿ ಪ್ರೊಡಕ್ಷನ್ ಮ್ಯಾನೇಜರ್  ಆಗಿಯೂ ಕೆಲಸ ಮಾಡಿದ್ದಾರೆ. ಆ ಚಿತ್ರ ಮುಂದಕ್ಕೆ ಹೋಗದ ಕಾರಣ ಅವರ ಕೆರಿಯರ್ ಬದಲಾಯಿತು.

ಏಪ್ರಿಲ್ ಮಧತ್ತಿಲ್ ಎನ್ನುವ ಸಿನಿಮಾದಲ್ಲಿ ಅವರು ನಟಿಸಿದ್ದರು. ಸೂರ್ಯ, ಜ್ಯೋತಿಕಾರ ಕಾಖ ಕಾಖ ಸಿನಿಮಾವು ಬಾಲಾಜಿಗೆ ಜನಪ್ರಿಯತೆ ನೀಡಿತ್ತು. ವೆಟ್ರಿ ಮಾರನ್ ಅವರ ವೆಟ್ಟೈಯಾಡು ವಿಲೈಯಾಡು ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ದಳಪತಿ ವಿಜಯ್, ಅಜಿತ್, ಸಿಂಬು ಅವರ ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ಕೊನೆಯದಾಗಿ ಅವರಯ ಅರಿಯಾವನ್ ಚಿತ್ರದಲ್ಲಿ ನಟಿಸಿದ್ದರು.

ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ತಮಿಳು ನಟ ಡೇನಿಯಲ್ ಬಾಲಾಜಿ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ನಿಧನರಾಗಿದ್ದಾರೆ. ಬಾಲಾಜಿ ಅವರ ಪಾರ್ಥಿವ ಶರೀರವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಬಾಲಾಜಿಗೆ 48 ವರ್ಷ ವಯಸ್ಸಾಗಿತ್ತು.  <a href=https://youtube.com/embed/tGMUsGhxd68?autoplay=1&mute=1><img src=https://img.youtube.com/vi/tGMUsGhxd68/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದ್ದಕ್ಕಿದ್ದ ಹಾಗೆ ಬಾಲಾಜಿ ಅವರು ನಿಧನರಾಗಿರೋದು ಅವರ ಕುಟುಂಬಸ್ಥರು, ಆತ್ಮೀಯರು ಸೇರಿ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದ್ದು ಚಿತ್ರರಂಗದವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.ಡ್ಯಾನಿಯಲ್​ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರಾಗಿದ್ದು,  ಖಳನಾಯಕನ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದರು. 

ತಮಿಳು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರು ರಾಕಿಂಗ್​ ಸ್ಟಾರ್​ ಯಶ್ ನಟನೆಯ ಕಿರಾತಕ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಹಾಗಾಗಿ ಅವರ ನಿಧನದ ಸುದ್ದಿ ಕೇಳಿ ಯಶ್ ಬೇಸರ ವ್ಯಕ್ತಪಡಿಸಿದ್ದಾರೆ. ಕುಟಂಬದ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.