ಡಿಕೆಶಿ ಸಿಎಮ್ ಭವಿಷ್ಯದ ಬಗ್ಗೆ ಸ್ಪಷ್ಟತೆ ಕೊಟ್ಟ ಕೋಡಿಶ್ರೀ, ಪುಡಿಪುಡಿಯಾದ ಬಂಡೆ ಕನಸು

 
Hhh
ಕೋಡಿ ಶ್ರೀಗಳು ಭವಿಷ್ಯ ನುಡಿಯುವುದರಲ್ಲಿ ಫುಲ್ ಫೇಮಸ್.ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ಸದ್ಯಕ್ಕೇನು ತೊಂದರೆಯಿಲ್ಲ ಎಂದು ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದ್ದಾರೆ. ಈ ಮೂಲಕ ಸರ್ಕಾರ ಬಿದ್ದು ಹೋಗುತ್ತದೇ ಎಂದು ಕಾದುಕುಳಿತವರಿಗೆ ಶಾಕ್‌ ಆಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಮಾಧಾನವೆನಿಸಿದೆ.
ಬರುವ ದಿನಗಳು ಶುಭ ಮತ್ತು ಅಶುಭ ಗಳಿಂದ ಕೂಡಿದ್ದು, ಮುಂದಿನ ದಿನಗಳಲ್ಲಿ ಭೂಮಿಯ ಧಗೆ ಹೆಚ್ಚಾಗಲಿದೆ.ಯುಗಾದಿಗೆ ಎಲ್ಲವನ್ನೂ ಹೇಳ್ತೇನೆ. ಮೈಲಾರ ಕಾರ್ಣಿಕಕ್ಕು ಇದಕ್ಕೂ ಏನು ಸಂಬಂಧವಿಲ್ಲ ಎಂದು ಹೇಳಿದ ಸ್ವಾಮೀಜಿ ಸರ್ಕಾರದ ಪ್ರತಿನಿಧಿಗಳ ನಡುವಿನ ಕಿತ್ತಾಟದ ಬಗ್ಗೆ ಪ್ರತಿಕ್ರಿಸಲು ನಿರಾಕರಿಸಿದರು. <a href=https://youtube.com/embed/zNSnnxBeZ-w?autoplay=1&mute=1><img src=https://img.youtube.com/vi/zNSnnxBeZ-w/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕಾಂಗ್ರೆಸ್‌ ಸರ್ಕಾರದಲ್ಲಿ ಸದ್ಯ ಸಿಎಂ ಸ್ಥಾನಕ್ಕಾಗಿ ಪ್ರಮುಖ ನಾಯಕ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಜತೆಗೆ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ಈ ರೀತಿ ಕಾಂಗ್ರೆಸ್‌ನ ಆಂತರಿಕ ಜಗಳದಿಂದ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ. ಈ ಬೆನ್ನೆಲ್ಲೆ ಕೋಡಿಶ್ರೀಗಳು ಸರ್ಕಾರ ಪತನದ ಬಗ್ಗೆ ಮಾತನಾಡಿ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ
2024 ನೇ ವರ್ಷದಲ್ಲಿ ಮಳೆ ಉತ್ತಮವಾಗುತ್ತದೆ. ಮಳೆಯಿಂದ ಅನಾವೃಷ್ಠಿಯಾಗುತ್ತದೆ ಎಂದು ಕೋಡಿ ಮಠದ ಸ್ವಾಮೀಜಿ 2024 ರ ಆರಂಭದಲ್ಲಿಯೇ ಭವಿಷ್ಯ ನುಡಿದಿದ್ದರು. ಅಂತೆಯೇ ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಇನ್ನು ಜಗತ್ತಿನಲ್ಲಿ ಒಬ್ಬ ಸಂತ ಹಾಗೂ ಕೆಲ ದೇಶಗಳ ಪ್ರಧಾನಿಗಳು ಸಾವಿಗೀಡಾಗಲಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದ ಮಾತುಗಳು ಕೂಡ ನಿಜವಾಗಿತ್ತು. ಅದರಂತೆ ಯುಗಾದಿ ನಂತರ ಭೂಮಂಡಲಕ್ಕೆ ಗಂಡಾಂತರ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.