ಸರ್ಕಾರದ ಭವಿಷ್ಯ ನುಡಿದ ಕೋಡಿಶ್ರೀ; ಕೆಲವೇ ದಿನಗಳಲ್ಲಿ ದೊ‌ ಡ್ಡ ಬದಲಾವಣೆ

 
ಪ್ರಕೃತಿ ವಿಕೋಪ, ರಾಜ್ಯ ರಾಜಕಾರಣ, ದೇಶದ ರಾಜಕಾರಣ, ದೇಶ ವಿದೇಶದ ಸಂಘರ್ಷಗಳು, ಬಾಂಬ್ ಸ್ಫೋಟ ಸೇರಿದಂತೆ ಹಲವು ವಿಚಾರಗಳಬಗ್ಗೆ ಸ್ಫೋಟಕ ಭವಿಷ್ಯ ನುಡಿಯುವ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಹೌದು, ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂದು ಹಲವು ನಾಯಕರು ಹೇಳಿಕೆ ನೀಡುತ್ತಿದ್ದರು. ಈ ಬಗ್ಗೆ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಸಿದ್ದರಾಮಯ್ಯ ಸರ್ಕಾರದ ಕುರಿತು ಭವಿಷ್ಯ ನುಡಿದಿದ್ದಾರೆ.
ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಶ್ರಾವಣದಲ್ಲಿ ನಾನು ಮತ್ತೊಂದು ಸ್ಫೋಟಕ ಭವಿಷ್ಯ ಹೇಳುತ್ತೇನೆ. ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರಾವಣ ಮುಗಿದಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. <a href=https://youtube.com/embed/1y2qW8tLazY?autoplay=1&mute=1><img src=https://img.youtube.com/vi/1y2qW8tLazY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ಇದೆ. ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ. ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಬಹುಮತ ಬರದಿದ್ದಕ್ಕೆ ಎನ್​ಡಿಎ ಮೈತ್ರಿ ಸರ್ಕಾರ ರಚನೆ ಮಾಡಿದ್ದು, ಇದು ಬಹಳ ದಿನ ಉಳಿಯುವುದಿಲ್ಲ ಎಂದು ವಿಪಕ್ಷಗಳ ಭವಿಷ್ಯದ ನಡುವೆ ಕೋಡಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಪ್ರತಿಕ್ರಿಯಿಸಿ, ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರಾವಣದಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.