ಒಂದು ಕಾಲದಲ್ಲಿ ಕಿರುತೆರೆ ಲೋಕವನ್ನೇ ಆಳುತ್ತಿದ್ದ ಕೃಷ್ಣ ರುಕ್ಮಿಣಿ ನಟಿ ಈಗ ಹೇಗಾಗಿದ್ದಾರೆ ಗೊತ್ತಾ, ನೋಡಲು ಎರಡು ಕಣ್ಣು ಸಾಲಲ್ಲ

 

 ಕೆಲ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಅದಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗವೂ ಇತ್ತು. ಆ ಧಾರಾವಾಹಿಯಲ್ಲಿ ಡಾರ್ಲಿಂಗ್ ಕೃಷ್ಣ ಅವರು ನಾಯಕ ನಟರಾಗಿದ್ದರೆ, ರುಕ್ಮಿಣಿ ಎಂಬ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅಂಜನಾ ಶ್ರೀನಿವಾಸ್ ಅವರು ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡು ಅನೇಕ ವರ್ಷಗಳಾಯ್ತು. ಈಗ ಅವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕೆಲವರಿಗೆ ಇರಬಹುದು.

ನಕ್ಷತ್ರಾ ಶ್ರೀನಿವಾಸ್ ಎಂದು ಹೆಸರು ಬದಲಾಯಿಸಿಕೊಂಡಿರುವ ಅವರು ಪ್ರಸ್ತುತ ಬೇರೆಭಾಷೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿ ಅವರು ಒಂದಾದ ಮೇಲೆ ಒಂದರಂತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಿಗಿಂತ ಸೀರಿಯಲ್ ಆರಾಮು ಎನ್ನುವ ನಕ್ಷತ್ರಾ ಈಗ ಕಿರುತೆರೆಯಲ್ಲಿಯೇ ಸಕ್ರಿಯರಾಗಿರುತ್ತಾರೆ. 'ಮಿಥೈ ಕೊಟ್ಟು ಚಿಟ್ಟೆಮ್ಮ' ಎಂಬ ತೆಲುಗು ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಈವರೆಗೆ ಅವರು 6 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. <a href=https://youtube.com/embed/sFBjYx_DLvU?autoplay=1&mute=1><img src=https://img.youtube.com/vi/sFBjYx_DLvU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಬೆಂಗಳೂರಿನ ನಟಿ ಅಂಜನಾ ಶ್ರೀನಿವಾಸ್ ಅವರು 'ಮಿಥೈ ಕೊಟ್ಟು ಚಿಟ್ಟೆಮ್ಮ' ಧಾರಾವಾಹಿಯಿಂದಾಗಿ ಅಡುಗೆ ಮಾಡೋದು, ಮನೆ ಕೆಲಸ ಮಾಡೋದು, ಸೈಕಲ್ ಓಡಿಸೋದು ಕಲಿತಿದ್ದಾರೆ. ಹೀಗಾಗಿ ಅವರ ತಾಯಿ ಧಾರಾವಾಹಿ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರಂತೆ. ಇನ್ನು ತೆಲುಗು, ತಮಿಳು, ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವ ಅಂಜನಾಗಿದೆ. ಹೀಗಾಗಿ ಅವರು ಈ ಮೂರು ಭಾಷೆಗಳನ್ನು ಮಾತನಾಡಬಲ್ಲರು.

ಇನ್ನು 17 ವರ್ಷವಿರುವಾಗಲೇ ಅಂಜನಾ ಶ್ರೀನಿವಾಸ್ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿದ್ದರು. ಅಲ್ಲಿಂದ ತೆಲುಗು, ತಮಿಳು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದ ನಟಿ ಮತ್ತೆ ಕನ್ನಡದ ಕಡೆ ಮುಖ ಮಾಡಿರಲಿಲ್ಲ. ಈಗ ಸುಮಾರು 13 ವರ್ಷಗಳ ಬಳಿಕ ಅಂಜನಾ ಶ್ರೀನಿವಾಸ್ ಮತ್ತೆ ಸ್ಟಾರ್ ಸುವರ್ಣದ 'ಜಾನಕಿ ಸಂಸಾರ' ಧಾರಾವಾಹಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಆ ಧಾರವಾಹಿ ಕೂಡ 500 ಎಪಿಸೋಡ್ ಮುಗಿಸಿ ಇದೀಗ ಮುಕ್ತಾಯಗೊಂಡಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.