ಹಿಂದಿ‌ ಬಿಗ್ ಬಾಸ್ ನಲ್ಲಿ ಬಾಲಿವುಡ್ ಸುಂದರಿಯರ ಜೊತೆ ಲಾಯರ್ ಜಗದೀಶ್

 
ಲಾಯರ್ ಅಂದ್ರೆ ಭಯ ಇರುತ್ತೆ, ಖಾನೂನು ತಿಳಿದುಕೊಂಡವರು ಎಂದು ಸಾಮಾನ್ಯರು ಮಾತನಾಡಿಲು ಹೆದರಿಕೊಳ್ಳುತ್ತಾರೆ ಹೀಗಾಗಿ ಜನರ ತಲೆಯಲ್ಲಿ ಇರುವ ಯೋಚನೆಗಳನ್ನು ಮುರಿಯಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕೂಲ್ ಲಾಯರ್ ಆಗಿ ಗುರುತಿಸಿಕೊಂಡಿರುವವರು ಲಾಯರ್ ಜಗದೀಶ್. 
ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿರುವ ಲಾಯರ್ ಜಗದೀಶ್ ದೊಡ್ಡ ಜಗಳದಿಂದ ಎರಡನೇ ವಾರಕ್ಕೆ ಮನೆಯಿಂದ ಹೊರ ಬರುತ್ತಾರೆ. ಹೊರ ಬಂದು ಬೇಸರದಲ್ಲಿ ಇರುತ್ತಾರೆ ಅಂದುಕೊಂಡರೆ ಪ್ರತಿಯಿಂದು ಚಾನೆಲ್‌ನಲ್ಲಿ ಸಂದರ್ಶನ ಕೊಡುತ್ತಾ ಬ್ಯುಸಿಯಾಗಿದ್ದಾರೆ. ಇದೇ ಫೇಮ್‌ ಇಟ್ಟುಕೊಂಡು ಹಿಂದಿ ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾರೆ. ಸ್ವತಃ ಲಾಯರ್ ಜಗದೀಶ್ ಸ್ಪಷ್ಟನೆ ಕೊಟ್ಟಿದ್ದಾರೆ. <a href=https://youtube.com/embed/f4z9O9Nht9k?autoplay=1&mute=1><img src=https://img.youtube.com/vi/f4z9O9Nht9k/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕರ್ನಾಟಕದ ಬಾಲಿವುಡ್‌ ಎಂಟ್ರಿ ನಮ್ಮ ಐಶ್ವರ್ಯ ರೈಯಿಂದ ಆಗಿದ್ದು ನಂತರ ಶಿಲ್ಪಾ ಶೆಟ್ಟಿ, ಪ್ರಕಾಶ್ ರೈ, ಸುದೀಪ್ ಎಂಟ್ರಿ ಕೊಟ್ಟರು. ಈಗ ಅದೃಷ್ಟ ನಮಗೂ ಕೂಡಿ ಬರುತ್ತಿದೆ ಇದು 6 ಕೋಟಿ ಕನ್ನಡಿಗರ ಆಶೀರ್ವಾದ.ಬಾಲಿವುಡ್‌ನಲ್ಲಿ ಮಿಂಚಲು ನಾನು ಸಜ್ಜಾಗಿರುವೆ. ಬಿಗ್ ಬಾಸ್ ಬಾಲಿವುಡ್‌ ಆಫರ್‌ಗಿಂತ ಮುಂಚೆ ನನಗೆ ಮುಂಬೈನಿಂದ ದೊಡ್ಡ ಜಾಹೀರಾತು ಸಂಸ್ಥೆಯಿಂದ ಆಫರ್ ಬಂದಿದೆ.
ಕರ್ನಾಟಕದಿಂದ ಸಾಕಷ್ಟು ಜನ ಬಾಲಿವುಡ್‌ಗೆ ಹೋಗಿದ್ದಾರೆ ಈಗ ನಿಮ್ಮ ಜಗ್ಗು ದಾದ ಎಂಟ್ರಿ ಕೊಡುವ ಸಮಯ ಬಂದಿದೆ. ಇಷ್ಟು ದಿನ ಬಿಗ್ ಬಾಸ್‌ನ ಕಥೆ ಸುದೀಪ್‌ ದಾದ ಆಂಡ್ ಜಗ್ಗು ದಾದ ಜೊತೆ ಆಗಿತ್ತು...ಇನ್ನು ಮುಂದೆ ಬಾಲಿವುಡ್‌ನ ಕಥೆ ಸಲ್ಮಾನ್ ಖಾನ್ ವಿತ್ ಜಗ್ಗು ದಾದ ಜೊತೆ ಆಗಲಿದೆ. ಕನ್ನಡಿಗರು ಬೆಳೆಯಬೇಕು....ಕ್ರಶ್ ಆಫ್ ಕರ್ನಾಟಕದ ಆಗಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಇದ್ದಾರೆ.
 ಪಾಸಿಟಿವ್ ಆಗಿರಲಿ ನೆಗೆಟಿವ್ ಆಗಿರಲಿ ನನ್ನನ್ನು ಸದಾ ನ್ಯೂಸ್‌ ಟ್ರೆಂಡಿಂಗ್‌ನಲ್ಲಿ ಇಟ್ಟಿದ್ದು ನೀವು ಇದನ್ನು ಆತ್ಮ ತೃಪ್ತಿಯಿಂದ ಹೇಳುತ್ತಿದ್ದೀನಿ. ಲಕ್ಷ ದುಡಿಯಲು ಕಷ್ಟ ಪಡುತ್ತಿದ್ದೆ ಎಣಿಸಲು ಕಷ್ಟ ಪಡುತ್ತಿದ್ದೆ ಆದರೆ ಈಗ ಕೋಟಿಗಳನ್ನು ಎಣಿಸಲು ಆಗದಷ್ಟು ಬ್ಯುಸಿಯಾಗಿರುವೆ ಸಲ್ಮಾನ್ ಖಾನ್ ಜೊತೆ ಮಾತು ಕತೆ ನಡೀತಿದೆ ಆದಷ್ಟು ಬೇಗ ಹೇಳ್ತೇನೆ..ಒಳ್ಳೆ ಮಟ್ಟಕ್ಕೆ ಆರ್ಥಿಕತೆ ನನಗೆ ಸಿಕ್ಕಿದೆ' ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.