'ಲೇ ಕೆಂಚ ಏನೋ ಊಟ ಮಾಡ್ದೆನೊ ಲೇ... ವಿಡಿಯೋ ಕಾಲ್ ನಲ್ಲಿ ಕಾಟೇರ
Aug 26, 2024, 14:47 IST
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಫೋಟೋ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ಕೊಲೆ ಆರೋಪಿ ದರ್ಶನ್ ಗೆ ಜೈಲಲ್ಲಿ ಈ ವಿಡಿಯೋ ಕಾಲ್ ಮಾಡಿಸಿದ್ದು, ಕೊಲೆ ಕೇಸಿನಲ್ಲಿ ಜೈಲು ಸೇರಿರುವ ರೌಡಿಶೀಟರ್ ಧರ್ಮ ಎಂಬುದು ಗೊತ್ತಾಗಿದೆ.
ಈ ಧರ್ಮ ಬಾಣಸವಾಡಿಯಲ್ಲಿ ಮೇ 7 ರಂದು ನಡೆದ ರೌಡಿಶೀಟರ್ ಕಾರ್ತಿಕೇಯನ್ ಎಂಬುವವನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಈಗ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದರೂ ಹಣ ಹಾಗೂ ತೋಳ್ಬಲದಿಂದ ಧರ್ಮ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾನೆ. ಇನ್ನು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ದರ್ಶನ್‌ಗೆ ಅಭಿಮಾನಿಯಾಗಿರುವ ಧರ್ಮ ಜೈಲಿನಲ್ಲಿ ತುಸು ಹೆಚ್ಚಾಗಿಯೇ ಪರಿಚಯವಾಗಿದ್ದಾನೆ.
<a href=https://youtube.com/embed/Wvq06rA8-mE?autoplay=1&mute=1><img src=https://img.youtube.com/vi/Wvq06rA8-mE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಜೈಲಿನಲ್ಲಿರುವ ಬಹುತೇಕರು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದವರೇ ಇರುತ್ತಾರೆ. ಅಂತೆಯೇ ದರ್ಶನ್ ಸಹ ತನ್ನಂತೆಯೇ ಕೊಲೆ ಕೇಸಿನಲ್ಲಿ ಜೈಲು ಸೇರಿದ ದೊಡ್ಡ ದೊಡ್ಡ ನಟೋರಿಯಸ್ ರೌಡಿಗಳು, ದೊಡ್ಡ ರೌಡಿಶೀಟರ್‌ಗಳೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾನೆ. ಸದ್ಯ ಮಾರ್ಕೆಟ್ ಧರ್ಮನು ದರ್ಶನ್ ಇರುವ ಪಕ್ಕದ ಬ್ಯಾರಕ್ ನಲ್ಲಿದ್ದು, ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ @ ಜನಾರ್ದನ್ ಮಗ ಸತ್ಯ ಎಂಬುವವನಿಗೆ ವೈಫೈ ಬಳಸಿಕೊಂಡು ಇನ್ಸ್ ಸ್ಟಾಗ್ರಾಂನಲ್ಲಿ ವಿಡಿಯೋ ಕಾಲ್ ಮಾಡಿದ್ದಾನೆ.
ಜೈಲಿನಲ್ಲಿರುವ ದರ್ಶನ್ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮೂಲಕ ಆಪ್ತರೊಬ್ಬರ ಜೊತೆ ವೀಡಿಯೊ ಮಾತನಾಡಿದ್ದಾರೆ. ಅತ್ಯಾಪ್ತವಾಗಿ ಮಾತಾಡಿರೊ ದರ್ಶನ್, ಊಟ ಆಯ್ತಾ ಚಿನ್ನ, ಆರಾಮಾಗಿದ್ದೀನಿ ಎಂದು ಮಾತುಕತೆ ನಡೆಸಿದ್ದಾರೆ. ಈ ವಿಡಿಯೋ ಸುಮಾರು 25 ಸೆಕೆಂಡುಗಳಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.