ರಮ್ಮಿ ಆಟಕ್ಕೆ ಇಡೀ ಕುಟುಂಬ ಬ ಲಿ; ಕರುನಾಡಿಗೆ ಬರ ಸಿ ಡಿಲು
Aug 17, 2024, 09:23 IST
ಚನ್ನರಾಯಪಟ್ಟಣದ ಸುಂದರ ಕುಟುಂಬವೊಂದು ಹೇಮಾವತಿ ನಾಲೆಗೆ ಹಾರಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಚಾಲಕರಾಗಿದ್ದ ಶ್ರೀನಿವಾಸ್, ಶಿಕ್ಷಕಿಯಾಗಿದ್ದ ಅವರ ಪತ್ನಿ ಶ್ವೇತಾ ಮತ್ತು ಪುತ್ರಿ ನಾಗಶ್ರೀ ಆತ್ಮಹತ್ಯೆಗೆ ಶರಣಾದವರು. ಮಂಗಳವಾರ ಮನೆಯಿಂದ ಹೊರಗೆ ಹೋಗಿದ್ದ ಅವರು ಮರಳಿ ಬಾರದಿರುವುದಕ್ಕೆ ಗಾಬರಿಯಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿ ಪೊಲೀಸರಿಗೆ ದೂರು ನೀಡಿದ್ದರು.
ಇದೀಗ ದಂಪತಿಯ ಶವ ದೊರೆತಿದ್ದು ಬಾಲಕಿಯ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ. ಸಾಲಬಾಧೆಯೇ ಘಟನೆಗ ಕಾರಣ ಎನ್ನಲಾಗಿದೆ.ಚನ್ನರಾಯಪಟ್ಟಣ ನಗರದ ಕೆರೆಬೀದಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ದುಡಿದ ಹಣ ನೀರುಪಾಲಾದ ವೇಳೆ ಸಾಲಗಾರರ ಕಾಟ ಒತ್ತಡ ತಾಳಲಾಗದೆ ಕುಟಂಬ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದೆ ಎಂದು ಹೇಳಲಾಗಿದೆ.
ಅದೊಂದು ಚಂದದ ಸಂಸಾರವಾಗಿತ್ತು. ಪತಿ, ಪತ್ನಿ ಮತ್ತು ಶಾಲೆ ಓದುವ ಹೆಣ್ಣು ಮಗಳು ಹೀಗೆ ಎಲ್ಲರೂ ಖುಷಿಯಾಗಿದ್ದರು. ಆದರೆ ಸಾಲದ ಶೂಲ ಅವರ ಬದುಕನ್ನು ಬಲಿ ಪಡೆದಿದೆ. ಮೃತ ಶ್ರೀನಿವಾಸ ಅವರು ಕಾರು ಚಾಲಕನಾಗಿದ್ದು, ಅವರ ಪತ್ನಿ ಶ್ರವಣಬೆಳಗೊಳ ಸಮೀಪದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
<a href=https://youtube.com/embed/xPPB3AZNlMw?autoplay=1&mute=1><img src=https://img.youtube.com/vi/xPPB3AZNlMw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬದುಕಿನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಸಮಸ್ಯೆ ಏನಿರಲಿಲ್ಲ. ಆದರೆ ಮಗಳನ್ನು ಶಾಲೆ ಓದಿಸುವ ಸಲುವಾಗಿ ಶ್ರೀನಿವಾಸ ಅವರು ಸ್ವಲ್ಪ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಮೃತ ಪತಿ ಶ್ರೀನಿವಾಸ್ ಅವರು ದುಡಿದ ಹಣವನ್ನು ರಮ್ಮಿ ಆಡಲು ಹೋಗಿ ಕಳೆದುಕೊಂಡಿದ್ದರು ಮತ್ತೆ ಹಣ ಬರುತ್ತದೆ ಎಂದು ಬೇರೆ ಬೇರೆ ಕಡೆ ಹೂಡಿಕೆ ಮಾಡಿ ಕಳೆದುಕೊಂಡಿದ್ದರು ಎನ್ನಲಾಗಿದೆ.
ಕಳೆದ ಮಂಗಳವಾರ ಮನೆಯಿಂದ ಗಂಡ ಹೆಂಡತಿ ಮತ್ತು 13 ವರ್ಷದ ಮಗಳನ್ನು ಕರೆದುಕೊಂಡು ಹೋದ ದಂಪತಿ, ಹೊರ ಹೋದವರು ವಾಪಸ್ ಬಾರದೆ ಬಂದಿರಲಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.